2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

Written By:

ಭಾರತದಲ್ಲಿ ವಿದ್ಯುತ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಏಕೈಕ ವಾಹನ ತಯಾರಕ ಸಂಸ್ಥೆ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು 2019ರ ವೇಳೆಗೆ ಕಂಪನಿಯು ಎರಡು ಇ.ವಿ ಗಳನ್ನು ಪರಿಚಯಿಸಲಿದೆ.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಸದ್ಯ ಮಹೀಂದ್ರಾ ಕಂಪನಿಯು ಇವೆರಿತೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಮುಂದಿನ ನಾಲ್ಕು ಅಥವಾ ಐದು ತಿಂಗಳುಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು 500 ಕಾರುಗಳಿಂದ 1,000ಕ್ಕೆ ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಮಹೀಂದ್ರಾ ಹೊಂದಿದೆ.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

2019ರ ಹೊತ್ತಿಗೆ ಕಂಪೆನಿಯು 5,000 ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿದೆ ಎಂದು ಮಹೀಂದ್ರಾ & ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ದೃಢಪಡಿಸಿದರು.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಈಗಾಗಲೇ ಮಹೀಂದ್ರಾ ತನ್ನ ವಿದ್ಯುತ್ ಉದ್ಯಮಕ್ಕೆ ರೂ.500 ಕೋಟಿ ಹೂಡಿಕೆ ಮಾಡಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಮತ್ತೆ ರೂ.500 ರಿಂದ 600 ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂಬ ಮಾಹಿತಿ ಸಿಕ್ಕಿದೆ.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

2010ರಲ್ಲಿ ಕಂಪನಿಯು ರೇವಾ ಬ್ರಾಂಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರದಿಂದ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲು ಶುರು ಮಾಡಿದಾಗಿನಿಂದ ಇಲ್ಲಿಯವರೆಗೆ ಸುಮಾರು 4,000 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಭಾರತದಲ್ಲಿನ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಹೀಂದ್ರಾ ಪರಿಚಯಿಸಲಿದೆ ಎಂದು ಗೊಯೆಂಕಾ ಈಗಾಗಲೇ ದೃಢಪಡಿಸಿದ್ದಾರೆ. 2018ರಲ್ಲಿ ಮೊದಲ ಮಾದರಿಯು ಹೊರ ಬರಲಿದ್ದು, ಎರಡನೇ ಮಾದರಿಯು 2019ರ ಅಂತ್ಯದ ವೇಳೆಗೆ ರಸ್ತೆಗಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಈ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳ ಹೊರತಾಗಿ, ಮಹೀಂದ್ರಾ ಕಂಪನಿಯು ತನ್ನ ಕೆಯುವಿ 100 ವಾಹನದ ಎಲೆಕ್ಟ್ರಿಕ್ ರೂಪಾಂತರವನ್ನು ಅಭಿವೃದ್ಧಿಪಡಿಸುವ ಪ್ಲಾನ್ ರೂಪಿಸಿದೆ.

2019ರ ವೇಳೆಗೆ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ ಮಹೀಂದ್ರಾ

ಇದಲ್ಲದೆ, ಮಹೀಂದ್ರಾ ಕಂಪನಿಯ ಒಡೆತನದ ಪಿನ್‌ಇಂಫಾರಿನ ಬ್ರಾಂಡ್, ದೈತ್ಯ ಟೆಸ್ಲಾ ಕಂಪನಿಯ ಕಾರುಗಳಿಗೆ ಪ್ರತಿಸ್ಪರ್ಧಿ ನೀಡುವ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಪ್ರೀಮಿಯಂ ಎಲೆಕ್ಟ್ರಿಕ್ ಕಾರಿನ ಜಾಗತಿಕ ಪ್ರವೇಶವು ಸದ್ಯದರಲ್ಲಿಯೇ ಆಗಲಿದೆ.

English summary
Mahindra & Mahindra is the only automaker in India to offer electric cars. Now, the company will introduce two more EVs in the country by 2019.
Story first published: Monday, November 27, 2017, 16:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark