ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

Written By:

ಅಮೆರಿಕಾ ಮೂಲಕ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಯುನ್ನು ಒದಗಿಸುವ ಉಬೆರ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ಯಾಕ್ಸಿಯನ್ನು ಪ್ರಾರಂಭಿಸಲು ಮುಂದಾಗಿದ್ದು, ಇದಕ್ಕೆ ಮಹೀಂದ್ರಾ ಕಂಪನಿ ಕೈಜೋಡಿಸಿದೆ.

To Follow DriveSpark On Facebook, Click The Like Button
ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

ಇಂಡಿಯನ್ ಆಟೊಮೋಟಿವ್ ದೈತ್ಯ ಮಹೀಂದ್ರಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಆನ್ಲೈನ್ ಕ್ಯಾಬ್ ಸೇವೆಯನ್ನು ಪೂರೈಸಲು ಉಬರ್‌ಗೆ ನೀಡುವ ಒಪ್ಪಂದಕ್ಕೆ ಸಹಿ ಮಾಡಿರುವ ವಿಚಾರ ತಿಳಿದು ಬಂದಿದೆ. ಸದ್ಯ, ಉಬರ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕಡೆ ಹೆಚ್ಚು ಗಮನಹರಿಸುತ್ತಿದೆ ಎಂಬುದಕ್ಕೆ ಈ ಒಪ್ಪಂದ ಸ್ಪಷ್ಟ ನಿದರ್ಶನವಾಗಿದೆ.

ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

ಈ ಮಾಹಿತಿ ನಿಜವಾದರೆ, ಸದ್ಯದರಲ್ಲಿಯೇ ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲಿ ಮಹೀಂದ್ರಾ ಕಂಪನಿಯ ನೂರಾರು ಇವೆರಿತೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳು ಟ್ಯಾಕ್ಸಿ ರೂಪದಲ್ಲಿ ರಸ್ತೆಗಿಳಿಯಲಿವೆ.

ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

ಭವಿಷ್ಯದಲ್ಲಿ ಈ ಎಲೆಕ್ಟ್ರಿಕ್ ಟ್ಯಾಕ್ಸಿ ಸೌಲಭ್ಯವನ್ನು ಭಾರತದಾದ್ಯಂತ ಇರುವಂತಹ ಹೆಚ್ಚಿನ ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಉಬೆರ್ ಕ್ಯಾಬ್ ಮತ್ತು ಮಹೀಂದ್ರಾ ಹೊಂದಿವೆ ಎಂಬ ಅಧಿಕೃತ ಮಾಹಿತಿ ಹೊರ ಬಂದಿದೆ.

ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

ಪಾಲುದಾರಿಕೆಯ ಭಾಗವಾಗಿ, ಆಕರ್ಷಕವಾದ ಹಣಕಾಸು, ವಿಮಾ ಕಂತುಗಳು ಹಾಗು ಮತ್ತಿತರ ಸೌಲಭ್ಯಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲು ಮಹೀಂದ್ರಾ ಮತ್ತು ಅದರ ಸಹವರ್ತಿ ಸಂಸ್ಥೆಗಳು ಸಹಿ ಹಾಕಿವೆ. ಈ ಮೂಲಕ ದೇಶದಾದ್ಯಂತ ಹಲವಾರು ನಗರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಪರಿಸರ ವ್ಯವಸ್ಥೆಯನ್ನು ಕಾಪಾಡುವ ಕಾರ್ಯಕ್ಕೆ ಕೈಹಾಕಿವೆ.

ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

ಪ್ರಸ್ತುತ ಭಾರತದಲ್ಲಿ ಮಹೀಂದ್ರಾ ಸಂಸ್ಥೆಯು ವಿದ್ಯುತ್ ಕಾರುಗಳನ್ನು ಮಾರಾಟ ಮಾಡುವ ಏಕೈಕ ವಾಹನ ತಯಾರಕ ಕಂಪನಿಯಾಗಿದೆ. E2o ಪ್ಲಸ್ ಹ್ಯಾಚ್ ಬ್ಯಾಕ್ ಕಾರು 200 Ah ಬ್ಯಾಟರಿ ಪ್ಯಾಕ್ ಮತ್ತು 3-ಹಂತದ ಎಸಿ ಇಂಡಕ್ಷನ್ ಮೋಟಾರ್ ಆಯ್ಕೆ ಹೊಂದಿದೆ ಮತ್ತು 140 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪುವಷ್ಟು ಸಮರ್ಥವಾಗಿದೆ.

ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

E2o ಪ್ಲಸ್ ಕಾರಿನ ಬ್ಯಾಟರಿ ಪ್ಯಾಕ್, ವೇಗದ ಚಾರ್ಜಿಂಗ್ ಲಕ್ಷಣಗಳನ್ನು ಹೊಂದಿದೆ. ಇದು 90 ನಿಮಿಷಗಳಲ್ಲಿ ಶೇಕಡಾ 90ರಷ್ಟು ಚಾರ್ಜ್ ಮಾಡಲಿದೆ.

ವಿದ್ಯುತ್ ವಾಹನಗಳನ್ನು ಪೂರೈಸಲು ಉಬೆರ್ ಜೊತೆ ಒಪ್ಪಂದ ಮಾಡಿಕೊಂಡ ಮಹೀಂದ್ರಾ

ಇವೆರಿತೊ ಸೆಡಾನ್ ಕಾರು ಕೂಡಾ 200 Ah ಬ್ಯಾಟರಿ ಪ್ಯಾಕ್ ಮತ್ತು 3-ಹಂತದ ಎಸಿ ಇಂಡಕ್ಷನ್ ಮೋಟರ್ ಬಳಸುತ್ತದೆ ಮತ್ತು 110 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪಲಿದೆ ಮತ್ತು 105 ನಿಮಿಷಗಳಲ್ಲಿ ಶೇಕಡಾ 80ರಷ್ಟು ಚಾರ್ಜ್ ಆಗಲಿದೆ. ಉಬರ್ ಮತ್ತು ಮಹೀಂದ್ರಾ ನಡುವಿನ ಈ ಪಾಲುದಾರಿಕೆ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

English summary
Indian automotive giant Mahindra has tied up with Uber to supply the online cab service with EVs for its fleet.
Story first published: Friday, November 24, 2017, 17:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark