ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ ಕಾರಿನ ನವೀಕರದ ಕೆಲಸದಲ್ಲಿ ತೊಡಗಿಕೊಂಡಿದ್ದು, ಭಾರತದ ಈ ಪ್ರಖ್ಯಾತ ಎಸ್‌ಯುವಿ ಯುಟಿಲಿಟಿ ವಾಹನದ ಮುಂದಿನ ಆವೃತಿಯನ್ನು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

By Girish

ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ ಕಾರಿನ ನವೀಕರದ ಕೆಲಸದಲ್ಲಿ ತೊಡಗಿಕೊಂಡಿದ್ದು, ಭಾರತದ ಈ ಪ್ರಖ್ಯಾತ ಎಸ್‌ಯುವಿ ಯುಟಿಲಿಟಿ ವಾಹನದ ಮುಂದಿನ ಆವೃತಿಯನ್ನು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಹೌದು, ಈ ಸ್ಕಾರ್ಪಿಯೋ ಕಾರಿನ ಪರೀಕ್ಷೆಯನ್ನು ಈಗಾಗಲೇ ಮಹೀಂದ್ರಾ ಸಂಸ್ಥೆಯು ಕೈಗೊಂಡಿದ್ದು, ಆದರೆ ವಾಹನವನ್ನು ಯಾವ ದಿನಾಂಕದಂದು ಭಾರತೀಯ ಮಾರುಕಟ್ಟೆಗೆ ಅನಾವರಣಗೊಳಿಸಲಿದೆ ಎಂಬುದರ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಆದಾಗ್ಯೂ, ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತ್ತಿಯನ್ನು ನವೆಂಬರ್ ಮಧ್ಯಂತರದಲ್ಲಿ ಬಿಡುಗಡೆಗೊಳಿಸಲು ಕಂಪನಿ ಯೋಜನೆ ನೆಡೆಸಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ದೊರೆತಿದ್ದು, ಜನರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತ್ತಿಯು ಹೊರಭಾಗದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಬರುತ್ತಿದ್ದು, ಈ ಕಾರು ಹೊಸ ಬಂಪರ್‌ಗಳನ್ನು ಮತ್ತು ಹೊಸ ಗ್ರಿಲ್ಲನ್ನು ಪಡೆಯುತ್ತದೆ ಹಾಗು ಕ್ರೋಮ್ ಅಂಶಗಳನ್ನು ಹೆಚ್ಚಾಗಿ ಗಮನಿಸಬಹುದಾಗಿದೆ.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಹಿಂಭಾಗದಲ್ಲಿ, ಹೊಸ ಸ್ಕಾರ್ಪಿಯೋ ಕಾರಿನ ಹಿಂಭಾಗವು ಹೊಸ ಟೈಲ್ ದೀಪಗಳನ್ನು ಪಡೆಯುತ್ತದೆ ಮತ್ತು ಹೊಸ ಬದಲಾವಣೆಗಳನ್ನು ಪಡೆದ ಹೊಸ ಬಂಪರ್ ಹಾಗು ಮರುಸ್ಥಾನಗೊಳಿಸಲಾದ ಬ್ಯಾಡ್ಜ್‌ಗಳನ್ನು ನೋಡಬಹುದಾಗಿದೆ. ಇನ್ನು ಒಳಭಾಗದಲ್ಲಿ ಕೂಡ ಸ್ಕಾರ್ಪಿಯೋ ಕಾರು ಕೆಲವು ನವೀಕರಣಗಳನ್ನು ಪಡೆಯುತ್ತದೆ.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಒಳಭಾಗದಲ್ಲಿ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇನೊಂದಿಗೆ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್ ಅಳವಡಿಕೆಯಾಗಲಿದೆ ಹಾಗು ಆಸನಗಳ ಬಣ್ಣ ಯೋಜನೆಗಳನ್ನು ಸಹ ಅಪ್ಗ್ರೇಡ್ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಈ ಸ್ಕಾರ್ಪಿಯೋ ಕಾರು, 2.2-ಲೀಟರ್ mHawk ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ನವೀಕರಣವನ್ನು ಪಡೆಯಲಿದೆ ಎನ್ನಲಾಗಿದ್ದು, ಹೊಸ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಈ ಎಂಜಿನ್ 140 ಬಿಎಚ್‌ಪಿ ಶಕ್ತಿ 230 ಎನ್ಎಂ ತಾರ್ಕ್ ಉತ್ಪಾದನೆ ಮಾಡಲಿದೆ.

ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಸ್ಕಾರ್ಪಿಯೋ ಕಾರಿನ ಎಂಟ್ರಿ ಲೆವೆಲ್ ಆವೃತಿಯು 2.5 ಲೀಟರ್ ಎಂ2 ಡಿಐಸಿಆರ್ ಎಂಜಿನ್ ಉಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೂ ಸಹ ಮುಂಬರುವ ಸ್ಕಾರ್ಪಿಯೋ ಯಾಂತ್ರಿಕ ಅಂಶಗಳು ಬದಲಾವಣೆಯಾಗಲಿವೆ ಎನ್ನಲಾಗಿದೆ.

Recommended Video

[Kannada] 2017 Mercedes New GLA India Launch - DriveSpark
ಸ್ಕಾರ್ಪಿಯೋ ಫೇಸ್‌ಲಿಫ್ಟ್ ಆವೃತಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ?

ಈಗಾಗಲೇ ಭಾರತದಲ್ಲಿ ಒಂದು ಬ್ರ್ಯಾಂಡ್ ಆಗಿ ಎತ್ತರಕ್ಕೆ ಬೆಳೆದಿರುವ ಸ್ಕಾರ್ಪಿಯೋ ಕಾರು ಸಾಕಷ್ಟು ಅಪ್ಡೇಟ್‌ಗಳನ್ನು ಪಡೆದು ಹೆಚ್ಚಿನ ಗ್ರಾಹಕರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಈ ಫೇಸ್ ಲಿಫ್ಟ್ ಆವೃತಿಯ ಮೂಲಕ ಮತ್ತಷ್ಟು ಜನರನ್ನು ತಲುಪುವ ವಿಶ್ವಾಸವನ್ನು ಹೊಂದಿದೆ.

Most Read Articles

Kannada
English summary
Mahindra is working on the updated Scorpio and the upcoming SUV has been spotted quite a few times already on the test. Till now there has been no official word from the manufacturer about the launch of the vehicle. However, Rumers says that the facelift version of the Scorpio will be launched by the mid-November.
Story first published: Saturday, October 28, 2017, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X