ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಗೃಹಬಳಕೆಯ ವಾಹನ ತಯಾರಕ ಕಂಪೆನಿಯಾದ ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯು ಯು321ಎಂದು ಸಂಕೇತನಾಮವನ್ನು ಪಡೆದಿರುವ ಹೊಸ ವಾಹನವನ್ನು ಎಂಪಿವಿ ವಿಭಾಗಕ್ಕೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ.

By Girish

ಭಾರತದಲ್ಲಿ ಕೆಲವು ದಿನಗಳಿಂದ ಮಹೀಂದ್ರಾ ಕಂಪನಿಯು ಯು321 ಎಂಪಿವಿ ವಾಹನವನ್ನು ಪರೀಕ್ಷಿಸುತ್ತಿದೆ. ಈಗ, ಚೆನ್ನೈನ ಗುಂಡಾಯ್‌ನಲ್ಲಿ ಮತ್ತೊಮ್ಮೆ ಪರೀಕ್ಷೆ ನೆಡೆಸಿದ್ದು, ಈ ವಿಶಿಷ್ಟ ರೀತಿಯ ವಾಹನದ ರಹಸ್ಯ ಚಿತ್ರಗಳು ಸದ್ಯ ಸೋರಿಕೆಯಾಗಿದ್ದು, ಕಾರಿನ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿವೆ.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ವಾಹನದ ಮುಂಭಾಗದ ತಂತುಕೋಶವು ವಿಶಿಷ್ಟ ಎಂಪಿವಿ ಕಾರುಗಳ ಸಿಲ್ಯುಯೆಟ್ ಹೊಲಲಿದೆ. ಈ ಕಾರು ಎಕ್ಸ್‌ಯುವಿ ಮಾದರಿಯಂತೆ ಎಂಟು ಸ್ಲಾಟ್ ಗ್ರಿಲ್ ಹೊಂದಿದೆ. ಈ ಎಂಪಿವಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ನ ಕೆಳಭಾಗದಲ್ಲಿ ಸ್ವಲ್ಪ ಕಿಂಕ್ ಮಾಡಿರುವ ತಿರುವು ಸೂಚಕಗಳನ್ನು ಕಾಣಬಹುದು.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಯು321 ಎಂಪಿವಿ ಕಾರಿನ ಸೈಡ್ ಪ್ರೊಫೈಲ್ ಟೊಯೊಟಾ ಇನ್ನೊವಾ ಕ್ರಿಸ್ಟಾ ಕಾರಿಗೆ ಹೋಲುತ್ತದೆ ಹಾಗು ಪರೀಕ್ಷಾ ವಾಹನದಲ್ಲಿ 5-ಸ್ಪೋಕ್ ಮಿಶ್ರಲೋಹದ ಚಕ್ರಗಳು ಅಳವಡಿಸಲಾಗಿದೆ.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಭಾರತದಲ್ಲಿ ಜೈಲೊ ವಾಹನದ ಬದಲಿಗೆ ನೂತನ ವಾಹನವನ್ನು ಪರಿಚಯಿಸಲು ಮಹೀಂದ್ರಾ ಯೋಜಿಸಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ವಾಹನದ ಪರ್ಯಾಯವಾಗಿ ಈ ಹೊಸ ಎಂಪಿವಿ ಪ್ರೀಮಿಯಂ ವಾಹನವನ್ನು ಪರಿಚಯಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಯು321 ಎಂಪಿವಿ ವಾಹನವನ್ನು ನಾರ್ತ್ ಅಮೆರಿಕನ್ ತಂಡವೊಂದು ವಿನ್ಯಾಸಗೊಳಿಸಿದೆ. ಮಹೀಂದ್ರಾ ಯು321 ವಾಹನವು ಹೊಸ ವೇದಿಕೆಯನ್ನು ಆಧಾರಿಸಿದೆ ಮತ್ತು ಮೊನೊಕಾಕ್ಯು ಚಾರ್ಸಿ ಬಳಸುತ್ತಿದೆ.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಈ ಎಂಪಿವಿ ವಾಹನವು ಮಧ್ಯಭಾಗದಲ್ಲಿ ಮೂರು ಆಸನಗಳನ್ನು ಹೊಂದಿದೆ. ಮಹೀಂದ್ರಾ ಎಂಪಿವಿ ವಾಹನವು 2 ಲೀಟರ್ ಎಮ್ಹಾಕ್ ಡೀಸೆಲ್ ಎಂಜಿನ್ ಅಥವಾ ಹೊಸ 1.6 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆ ಇದೆ.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಎರಡೂ ಎಂಜಿನ್ ಆಯ್ಕೆಯ ಆವೃತಿಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಮತ್ತು ಕೊರಿಯಾದ ಅಂಗಸಂಸ್ಥೆಯಾದ Ssangyong ಈ ವಾಹನದ ಎಲೆಕ್ಟ್ರಿಕ್ ಆವೃತಿಯನ್ನು ಅಭಿವೃದ್ಧಿಪಡಿಸುವ ನಿರೀಕ್ಷೆ ಇದೆ.

ಟೊಯೊಟಾ ಇನೋವಾ ಕಾರಿಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಮಹೀಂದ್ರಾ ಕಾರು

ಟೊಯೊಟಾ ಕಂಪನಿಯು ದೀರ್ಘಕಾಲದಿಂದ ಭಾರತದಲ್ಲಿ ಎಂಯುವಿ / ಎಂಪಿವಿ ವಿಭಾಗವನ್ನು ಆಳುತ್ತಿದೆ. ಇದೀಗ, ಎಂಪಿವಿ ವಿಭಾಗದಲ್ಲಿ ಹೊಸ ವಾಹನವನ್ನು ಪರಿಚಯಿಸುವ ಮೂಲಕ ಮಹೀಂದ್ರಾ ಕಂಪನಿಯು ಜಪಾನ್ ಕಂಪನಿಗೆ ಟಕ್ಕರ್ ಕೊಡಲು ಯೋಜನೆ ರೂಪಿಸಿದೆ.

Most Read Articles

Kannada
English summary
Mahindra’s Toyota Innova Rival Spotted Testing In Chennai
Story first published: Wednesday, December 6, 2017, 15:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X