ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಭಾರತದ ಹೆಮ್ಮೆಯ ವಾಹನ ತಯಾರಕ ಕಂಪೆನಿಯಾದ ಮಹೀಂದ್ರಾ ಮತ್ತು ಮಹೀಂದ್ರಾ, ಮುಂದಿನ ವರ್ಷ ದೇಶದ ಪ್ರಮುಖ ಎಸ್‌ಯುವಿ ಯಾಗಿರುವ ಎಕ್ಸ್‌ಯುವಿ 500 ಕಾರನ್ನು ನವೀಕರಿಸಿ ಬಿಡುಗಡೆಗೊಳಿಸಲಿದೆ.

By Girish

ಹೌದು, ಬಲ್ಲ ಮೂಲಗಳಿಂದ ಈ ಕಾರಿನ ಬಗ್ಗೆ ವಿಚಾರ ತಿಳಿದು ಬಂದಿದ್ದು, ಮಹೀಂದ್ರಾ ಸಂಸ್ಥೆಯ ಮತ್ತೊಂದು ಬಹುನಿರೀಕ್ಷಿತ ಎಸ್201 ಎಸ್‌ಯುವಿ ಮತ್ತು ಟಿಯುವಿ 300 ಪ್ಲಸ್ ಕಾರುಗಳ ಸ್ಪಾಟ್ ಟೆಸ್ಟಿಂಗ್ ವೇಳೆ ಎಕ್ಸ್‌ಯುವಿ 500 ಫೇಸ್‌ಲಿಫ್ಟ್ ಎಸ್‌ಯುವಿ ಭಾರತದ ರಸ್ತೆಯ ಮೇಲೆ ಕಾಣಿಸಿಕೊಂಡಿದೆ.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್ ಸಂಪೂರ್ಣ ಮರೆಮಾಚಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ರೀತಿಯ ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಈ ಕಾರು ಬಹಿರಂಗಪಡಿಸಿಲ್ಲ ಎನ್ನಬಹುದು.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಆದರೆ, ಕಳೆದ ವರ್ಷ 2016ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಮಹೀಂದ್ರಾ ಎಕ್ಸ್‌ಯುವಿ 500 ಏರೋ ಕಾನ್ಸೆಪ್ಟ್ ಕಾರಿನ ಬಹುತೇಕ ಅಂಶಗಳನ್ನು ಈ ಕಾರು ಹೊಂದಿದೆ ಎನ್ನುವುದು ವಾಹನ ಪಂಡಿತರ ಲೆಕ್ಕಾಚಾರವಾಗಿದೆ.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಒಟ್ಟಾರೆ ವಿನ್ಯಾಸವು ಬದಲಾಗದೆ ಉಳಿದಿದ್ದು, ಹಿಂಭಾಗದ ಪ್ರೊಫೈಲ್ ಮತ್ತು ಟೈಲ್ ದೀಪ ಕ್ಲಸ್ಟರ್ ಸಹ ಪ್ರಸ್ತುತ ಮಾದರಿಗೆ ಹೋಲುತ್ತದೆ. ನವೀಕರಿಸಿದ ಎಸ್‌ಯುವಿ ಕಾರಿನ ಮುಂಭಾಗದ ತಂತುಕೋಶವು ಸೂಕ್ಷ್ಮ ಬದಲಾವಣೆ ಪಡೆದ ಹೆಡ್‌ಲ್ಯಾಂಪ್ ಮತ್ತು ಮುಂಭಾಗದ ಬಂಪರ್ ಹೊಂದಿದೆ.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಉದಯೋನ್ಮುಖ ವರದಿಗಳ ಪ್ರಕಾರ, ಈ ಕಾರಿನ ಪ್ರಮುಖ ವಿಶಿಷ್ಟತೆ ಎಂದರೆ ಎಂಜಿನ್ ಎನ್ನಬಹುದು. ಈ ಫೇಸ್‌ಲಿಫ್ಟ್ ಕಾರಿನಲ್ಲಿ ಅಳವಡಿಸಿರುವ ಶಕ್ತಿಯುತ 2.2 ಲೀಟರ್ ಎಂಹ್ಯಾಕ್ ಡೀಸೆಲ್ ಎಂಜಿನ್ 170 ಬಿಎಚ್‌ಪಿ ಮತ್ತು 350-360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಪ್ರಸ್ತುತ ಮಾರಾಟವಾಗುತ್ತಿರುವ ಮಹೀಂದ್ರಾ ಎಕ್ಸ್‌ಯುವಿ 500 ಕಾರು, 140 ಬಿಎಚ್‌ಪಿ ಮತ್ತು 330 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಶಕ್ತಿಯನ್ನು ಹೆಚ್ಚಿಸುವ ಮೂಲಕ ಭಾರತದಲ್ಲಿ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಕಾರನ್ನು ಮಹೀಂದ್ರಾ ಪ್ರಾರಂಭಿಸಲಿದೆ ಎಂಬ ಮಾಹಿತಿ ಇದೆ.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಎಕ್ಸ್‌ಯುವಿ 500 ಫೇಸ್‌ಲಿಫ್ಟ್ ಒಳಭಾಗವು ಕೊಂಚ ಮಟ್ಟಿನ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ. ಈಗಾಗಲೇ ಈ ಕಾರು ಸುಸಜ್ಜಿತವಾದ ವಾಹನವಾಗಿದ್ದು, ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುವುದು ಅನುಮಾನವಾಗಿದೆ.

ಬರಲಿದೆ ಮತ್ತಷ್ಟು ಬಲಿಷ್ಠವಾದ ಮಹೀಂದ್ರಾ ಎಕ್ಸ್‌ಯುವಿ 500 ಕಾರು

ಪ್ರಸ್ತುತ ಮಾದರಿಯ 6-ಸ್ಪೀಡ್ ಮ್ಯಾನ್ಯುಯಲ್ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯ ಜೊತೆ ಫ್ರಂಟ್ ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ವಿನ್ಯಾಸವನ್ನು ಮಹೀಂದ್ರಾ ಉಳಿಸಿಕೊಳ್ಳುತ್ತದೆ.

Most Read Articles

Kannada
English summary
Homegrown automaker Mahindra & Mahindra is all set to update its flagship SUV the XUV500 in the country in 2018 with a host of changes.
Story first published: Monday, November 13, 2017, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X