ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಭಾರತದ ಹೆಮ್ಮೆಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ, ತನ್ನ ಪ್ರಮುಖ ಎಕ್ಸ್‌ಯುವಿ 500 ಎಸ್‌ಯುವಿ ಕಾರಿನಲ್ಲಿ ಹೊಚ್ಚ ಹೊಸ ಪೆಟ್ರೋಲ್ ಎಂಜಿನ್ ರೂಪಾಂತರವನ್ನು ಪರಿಚಯಿಸಲು ಸಿದ್ಧವಾಗಿದೆ.

By Girish

ಭಾರತ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿಯು ಬಿಡುಗಡೆ ಮಾಡಲಾಗುವುದು ಎಂದು ಆಟೋಕಾರ್ ಇಂಡಿಯಾ ವರದಿ ಮಾಡಿದೆ.ಎಕ್ಸ್‌ಯುವಿ 500 ಪೆಟ್ರೋಲ್ ರೂಪಾಂತರವು ಹೊಸ 2.2-ಲೀಟರ್ ಎಂಜಿನ್‌ನಿಂದ 138 ಬಿಎಚ್‌ಪಿ ಮತ್ತು 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಪೆಟ್ರೋಲ್ ಇಂಜಿನ್ mHawk 2.2-ಲೀಟರ್ ಡೀಸಲ್ ಎಂಜಿನ್ ಬ್ಲಾಕ್ ಮೇಲೆ ಆಧಾರಿತವಾಗಿದೆ. ಡೀಸೆಲ್ ಎಂಜಿನ್ ಕೂಡ 138 ಬಿಎಚ್‌ಪಿ ಮತ್ತು 330 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಬಲ್ಲ ಮೂಲಗಳ ಪ್ರಕಾರ, ಆರಂಭದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಕಾರನ್ನು ಕೇವಲ ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ಪರಿಚಯಿಸಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಎಸ್‌ಯುವಿ ಹೊಸ ಪೆಟ್ರೋಲ್ ರೂಪಾಂತರವನ್ನು ಎಕ್ಸ್‌ಯುವಿ 500 ಜಿ9 ಎಂದು ಹೆಸರಿಸಲಾಗುತ್ತದೆ ಎನ್ನಲಾಗಿದ್ದು ಈ ವಾಹನ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಲಿದೆ. ಮುಂದಿನ ಹಂತದಲ್ಲಿ ಮಾನ್ಯುಯಲ್ ಗೇರ್ ಬಾಕ್ಸ್‌ನೊಂದಿಗೆ ಹೊಸ ರೂಪಾಂತರವನ್ನು ಪರಿಚಯಿಸಲಾಗುತ್ತದೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಎಕ್ಸ್‌ಯುವಿ500 ಕಾರಿನ ಪೆಟ್ರೋಲ್ ಆವೃತ್ತಿಯ ಒಳಭಾಗವು ಯಾವುದೇ ರೀತಿಯ ಬದಲಾವಣೆಗಳನ್ನು ಕಾಣುವುದಿಲ್ಲ ಎಂಬ ಮಾಹಿತಿ ಇದ್ದು, ಎಂದಿನಂತೆ ವಿಶೇಷ ರೀತಿಯ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿರುತ್ತದೆ. ಆದರೆ ಹೊಸ ವಾಹನವು ಚರ್ಮದ ಸೀಟುಗಳ ಆಯ್ಕೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಎಂದಿನಂತೆ ಎಲ್ಲಾ ಮಾದರಿಗಳೂ ಸಹ ಎರಡು ಗಾಳಿಚೀಲ ಮತ್ತು ಅಲಾಯ್ ವೀಲ್‌ಗಳನ್ನು ಮೂಲವಾಗಿ ಪಡೆಯುತ್ತವೆ. ಮುಂಭಾಗದ ವಿನ್ಯಾಸದಲ್ಲಿ, ಎಕ್ಸ್‌ಯುವಿ500 ಪೆಟ್ರೋಲ್ ಆವೃತ್ತಿಯು ಬದಲಾಗದೆ ಉಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ ಹಾಗು ಡೀಸೆಲ್ ಪ್ರತಿರೂಪದ ಮಾದರಿಯನ್ನು ಪ್ರತ್ಯೇಕಿಸಲು ಮಹೀಂದ್ರ ಹೊಸ ಬಣ್ಣಗಳನ್ನು ಕೂಡ ಪರಿಚಯಿಸಬಹುದು ಎಂಬ ನಿರೀಕ್ಷೆ ಇದೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಮಹೀಂದ್ರಾ ಕಂಪನಿಯು ಅಂತಿಮವಾಗಿ ತನ್ನ ಯಶಸ್ವಿ ಎಸ್‌ಯುವಿ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭಿಸುತ್ತಿದೆ. ಹೊಸ ಪೆಟ್ರೋಲ್ ಇಂಜಿನ್ ಕಾರು ಡೀಸೆಲ್ ಆವೃತಿಯನ್ನು ಆಧರಿಸಿದೆ ಮತ್ತು ಬಹುತೇಕ ಒಂದೇ ರೀತಿಯ ವಿದ್ಯುತ್ ಶಕ್ತಿಗಳನ್ನು ಉತ್ಪಾದಿಸುತ್ತವೆ.

ಪೆಟ್ರೋಲ್ ಆವೃತಿಯ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಬಿಡುಗಡೆ ?

ಖರ್ಚನ್ನು ಕಡಿಮೆ ಮಾಡಲು ಕೆಲವು ವೈಶಿಷ್ಟ್ಯಗಳನ್ನು ಪೆಟ್ರೋಲ್ ಮಾದರಿಯು ಕಳೆದುಕೊಳ್ಳುವ ನಿರೀಕ್ಷೆಯಿದ್ದು, ಈ ಎಕ್ಸ್‌ಯುವಿ500 ಕಾರು ಪೆಟ್ರೋಲ್ ಜೀಪ್ ಕಂಪಾಸ್ ಕಾರಿನೊಂದಿಗೆ ಪ್ರತಿಸ್ಪರ್ಧಿಯಾಗಿರುತ್ತದೆ.

Most Read Articles

Kannada
English summary
Mahindra is all set to introduce the petrol variant of its flagship SUV, the XUV500 in India with an all-new engine.
Story first published: Tuesday, November 7, 2017, 11:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X