ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಪ್ರಮುಖ ಎಸ್‌ಯುವಿ ಕಾರು ಎಕ್ಸ್‌ಯುವಿ 500 ಪೆಟ್ರೋಲ್ ರೂಪಾಂತರವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ನಾವು ಈಗಾಗಲೇ ವರದಿ ಮಾಡಿದ್ದೆವು.

By Girish

ಈಗ, ಹೊಸ ಪೆಟ್ರೋಲ್ ಆವೃತಿಯನ್ನು ಮಹೀಂದ್ರಾ ಸಂಸ್ಥೆಯು ಯುಎಇ ದೇಶದ ಅಧಿಕೃತ ವೆಬ್ ಸೈಟ್‌ನಲ್ಲಿ ಅನಾವರಣಗೊಳಿಸಿದೆ ಮತ್ತು ಈ ಕಾರನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಮಾರಾಟ ಮಾಡುವ ನಿರೀಕ್ಷಿಸಲಾಗಿದೆ. ಈ ಎಸ್‌ಯುವಿ ಪೆಟ್ರೋಲ್ ಆವೃತ್ತಿಯು 74,900 ದಿರ್‌ಹಮ್ಸ್(ಸುಮಾರು 13.24 ಲಕ್ಷ ರೂ.) ಬೆಲೆ ಪಡೆದುಕೊಂಡಿದೆ.

ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಎಕ್ಸ್‌ಯುವಿ 500 ಪೆಟ್ರೋಲ್ ಆವೃತ್ತಿಯು 2.2-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಈ ಎಂಜಿನ್, 140 ಬಿಎಚ್‌ಪಿ ಮತ್ತು 330 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಮಾದರಿಗೆ ಹೋಲಿಸಿದರೆ 10 ಎನ್‌ಎಂ ಟಾರ್ಕ್ ಕಡಿಮೆಯಾಗುತ್ತದೆ.

ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಕಾರು ಸ್ವಯಂಚಾಲಿತ ಗೇರ್‌ಬಾಕ್ಸ್ ಮತ್ತು ಆಲ್-ವೀಲ್ ಡ್ರೈವ್ ಸೌಲಭ್ಯವನ್ನು ಪಡೆಯುವ ಸಾಧ್ಯತೆ ಇದೆ. ಎಂಜಿನ್ ಹೊರತಾಗಿ, ಈ ಎಸ್‌ಯುವಿ ಯಾವುದೇ ಬದಲಾವಣೆ ಪಡೆಯುವುದಿಲ್ಲ.

ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಭಾರತದ ಪೆಟ್ರೋಲ್ ರೂಪಾಂತರವು ವಿನ್ಯಾಸ, ಉಪಕರಣಗಳು ಮತ್ತು ವೈಶಿಷ್ಟ್ಯಗಳ ವಿಚಾರದಲ್ಲಿ ಯಾವುದೇ ಬದಲಾವಣೆಗಳನ್ನು ಒಳಗೊಂಡಿರುವುದಿಲ್ಲ. ಆದರೆ, W ಬದಲಿಗೆ ಹೊಸ G ಕೋಡಿಫಿಕೇಷನ್ ವ್ಯತ್ಯಾಸ ನೋಡಬಹುದು.

ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಭಾರತದಲ್ಲಿ ಸದ್ಯ, ಟರ್ಬೊಚಾರ್ಜ್ಡ್ 2.2-ಲೀಟರ್ mHawk ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಈ ಎಂಜಿನ್ 330 ಎನ್ಎಂ ತಿರುಗುಬಲದಲ್ಲಿ 140 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6 ಸ್ಪೀಡ್ ಮಾನ್ಯುಯಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯ ಹೊಂದಲಿದೆ.

ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಹಲವಾರು ದೇಶಗಳಲ್ಲಿ ಹೊರಸೂಸುವಿಕೆಯ ನಿಯಮಗಳು ಕಟ್ಟುನಿಟ್ಟಾಗಿರುವುದರಿಂದ ಮಹೀಂದ್ರಾ ಸಂಸ್ಥೆಯು ನಿಧಾನವಾಗಿ ಪೆಟ್ರೋಲ್ ಎಂಜಿನ್ ವಾಹನಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ.

ಯುಎಇ ದೇಶದಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಬಿಡುಗಡೆ : ಭಾರತಕ್ಕೆ ಯಾವಾಗ ?

ಭಾರತದಲ್ಲಿಯೂ ಸಹ ಡೀಸೆಲ್ ಎಂಜಿನ್ ವಾಹನಗಳ ಬಗ್ಗೆ ಸರ್ಕಾರವು ಅತೃಪ್ತ ಮನೋಭಾವ ಹೊಂದಿದೆ. ರಾಜಧಾನಿಯಲ್ಲಿಯೂ ಸಹ ಡೀಸೆಲ್ ಕಾರುಗಳ ನಿಷೇಧಕ್ಕೆ ಸರ್ಕಾರ ಮುಂದಾಗಿತ್ತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಹೀಂದ್ರಾ ಪೆಟ್ರೋಲ್ ಇಂಜಿನ್ ಕಾರನ್ನು ಅಭಿವೃದ್ಧಿ ಮಾಡಲು ಬಯಸಿದೆ.

Most Read Articles

Kannada
English summary
Mahindra has unveiled the new petrol variant of the XUV500 on the UAE website and it is expected to go on sale very soon. The petrol version of the SUV is priced at 74,900 Dirhams (approximately Rs 13.24 lakh).
Story first published: Tuesday, November 21, 2017, 20:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X