ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

Written By:

3ನೇ ಪೀಳಿಗೆಯ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರು ಭಾರತದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಯಶಸ್ಸುಗಳಿಸುತ್ತಿದ್ದು, ಕೆಳೆದ ಸೆಪ್ಟಂಬರ್‌ನಲ್ಲಿ 34,000 ಡಿಜೈರ್ ಕಾರುಗಳು ಮಾರಾಟಗೊಳ್ಳುವ ಮೂಲಕ ಯಶಸ್ವಿ ಕಾರು ಎನ್ನಿಸಿಕೊಂಡಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

ಡಿಜೈರ್ ಕಾರಿನ ಬೇಡಿಕೆಯು ತುಂಬಾ ಹೆಚ್ಚಾಗಿದ್ದು, ಈ ಕಾರು ಕೊಳ್ಳಲು ಈಗಾಗಲೇ 40,000 ಜನರು ಬುಕ್ ಮಾಡಿದ್ದಾರೆ ಎಂದರೆ ಈ ಕಾರಿನ ಬೇಡಿಕೆ ಎಷ್ಟಿದೆ ಎಂಬುದನ್ನು ನೀವು ಊಹಿಸಿಕೊಳ್ಳಬಹುದು. ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್ ಕಾರಾಗಿ ಹೊರಹೊಮ್ಮಿರುವ ಈ ಡಿಜೈರ್ ಉತ್ಪಾದನೆಯ ಸಂಖ್ಯೆಯನ್ನು ಗುಜರಾತ್ ಕಾರ್ಖಾನೆಯಲ್ಲಿ ಹೆಚ್ಚಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

ಹೊಸ ಡಿಜೈರ್ ಕಾರಿನ ಮಾರಾಟವು ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ ತಿಂಗಳು ಕೂಡ ಈ ಡಿಜೈರ್ ಕಾರುಗಳ ಮಾರಾಟ ಸಂಖ್ಯೆಯು 31,000ಕ್ಕೂ ಹೆಚ್ಚು ಇರುವುದನ್ನು ನೀವು ಗಮನಿಸಬಹುದಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

ಈ ಕಾಂಪ್ಯಾಕ್ಟ್ ಸೆಡಾನ್ ಕಾರಿನ ಹೊಸ ಆವೃತ್ತಿಯು ಬಹಳಷ್ಟು ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿದೆ. ಸ್ಟೈಲಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಹಿಂದಿನ ಆವೃತಿಗಳಿಗೆ ಹೋಲಿಕೆ ಮಾಡಿದರೆ ಹೊಸ ಡಿಜೈರ್ ವಿಶಿಷ್ಟ ವಿನ್ಯಾಸ ಹೊಂದಿದೆ.

Recommended Video
Tata Tiago XTA AMT Launched In India | In Kannada - DriveSpark ಕನ್ನಡ
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

ಡಿಜೈರ್ ಕಾರನ್ನು ಕುಟುಂಬ ವರ್ಗದ ಜೊತೆ ಕ್ಯಾಬ್ ಚಾಲಕರೂ ಸಹ ಖರೀದಿಸುತ್ತಿದ್ದಾರೆ. ಭಾರತದ ಅನೇಕ ಭಾಗಗಳಲ್ಲಿ ಓಲಾ ಮತ್ತು ಉಬರ್ ಶೀಘ್ರವಾಗಿ ವಿಸ್ತರಿಸುತ್ತಿರುವುದರಿಂದ, ಹೆಚ್ಚು ಹೆಚ್ಚು ಡಿಜೈರ್ ಸೆಡಾನ್‌ಗಳನ್ನು ಕ್ಯಾಬ್‌ಗಳಾಗಿ ಉಪಯೋಗಿಸುವ ನಿರ್ಧಾರವನ್ನು ಸಂಸ್ಥೆಗಳು ಕೈಗೊಂಡಿವೆ ಎನ್ನಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

ಈ ಕಾರಿನ ಒಳಾಂಗಣವು ಹೆಚ್ಚು ಸುಧಾರಣೆಯಾಗಿದೆ ಮತ್ತು ಡಿಜೈರ್ ಅಗ್ಗದ ಕಾರುಗಳಂತೆ ಭಾಸವಾಗುವುದಿಲ್ಲ. ಮಾರುತಿ ಸಂಸ್ಥೆಯು ಈ ಕಾರುಗಾಗಿ ಹೊಸ ಪ್ಲಾಟ್‌ಫಾರಂ ಬಳಸಿದೆ. ಈ ಪ್ಲಾಟ್‌ಫಾರಂ ಕಾರಿನ ತೂಕವನ್ನು ಕಡಿಮೆ ಮಾಡಿದೆ ಮತ್ತು ಕಾರಿನ ಇಂಧನ ಆರ್ಥಿಕತೆಯನ್ನು ಹೆಚ್ಚಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತೆ ?

ಡಿಜೈರ್ ಕಾರಿನ ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, ಈ ಕಾರು ಈಗ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯ ಜೊತೆ ಎಎಂಟಿ ಆಯ್ಕೆಗಳೊಂದಿಗೆ ಲಭ್ಯವಿದೆ. ಇಂಧನ ದಕ್ಷತೆಯೊಂದಿಗೆ ಬಿಡುಗಡೆಯಾಗಿರುವ ಎಎಂಟಿ ಮಾದರಿಯನ್ನು ಹೆಚ್ಚು ಖರೀದಿದಾರರು ಆರಿಸಿಕೊಳ್ಳುತ್ತಿರುವುದು ಕಂಪನಿಗೆ ಹೆಚ್ಚಿನ ಬಲ ತುಂಬಿದೆ.

English summary
The Dzire compact sedan is in its 3rd generation in India, and is becoming a bigger success day by day. In September 2017, the car has achieved its most ever sales – over 34,000 units.
Story first published: Wednesday, October 11, 2017, 17:45 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark