ಮಾರುತಿ ಸುಜುಕಿ ಡಿಜೈರ್ ಖರೀದಿಗೆ ಮುಗಿಬಿದ್ದ ಗ್ರಾಹಕರು- 50 ಸಾವಿರ ದಾಟಿದ ಬುಕ್ಕಿಂಗ್..!!
ತಿಂಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್ ಕಾರಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಕಾರು ಖರೀದಿಗಾಗಿ ಇದುವರೆಗೆ 50 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.
ತಿಂಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್ ಕಾರಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಕಾರು ಖರೀದಿಗಾಗಿ ಇದುವರೆಗೆ 50 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.

ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಹೊಂದಿರುವ ಮಾರುತಿ ಸುಜುಕಿ ಡಿಜೈರ್ ಕಾರು ಖರೀದಿ ಪ್ರಕ್ರಿಯೆ ಜೋರಾಗಿದೆ. ಇದಕ್ಕೆ ಕಾರಣ ಬಿಡುಗಡೆಯಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಹೊಸ ಕಾರು ಖರೀದಿಗೆ 50 ಸಾವಿರ ಬುಕ್ಕಿಂಗ್ ಬಂದಿರುವುದು.

ಈ ಹಿನ್ನೆಲೆ ಗ್ರಾಹಕರ ಬೇಡಿಕೆ ತಕ್ಕಂತೆ ಕಾರು ಪೂರೈಕೆಗೆ ಹರಸಾಹಸ ಪಡುತ್ತಿರುವ ಮಾರುತಿ ಸುಜುಕಿ, ಡಿಜೈರ್ ಕಾರು ಉತ್ಪಾದನೆಯನ್ನು ತೀವ್ರಗೊಳಿಸಿದೆ.

ಹೀಗಾಗಿ ಡಿಜೈರ್ ಹೊಸ ಕಾರು ಖರೀದಿ ಮಾಡುವ ಗ್ರಾಹಕರು ಇದೀಗ ಬುಕ್ಕಿಂಗ್ ಮಾಡಿದರೇ ಮುಂದಿನ ಮೂರು ಅಥವಾ ನಾಲ್ಕು ತಿಂಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆ ಇದೆ ಎನ್ನವಾಗುತ್ತಿದೆ.

ಈಗಾಗಲೇ 10 ಸಾವಿರಕ್ಕೂ ಹೆಚ್ಚು ಹೊಸ ಕಾರುಗಳನ್ನು ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ವಿತರಣೆ ಮಾಡಲಾಗಿದ್ದು, ಮೇ ಅಂತ್ಯಕ್ಕೆ ಒಟ್ಟು 17 ಸಾವಿರ ಹೊಸ ಡಿಸೈರ್ ಗ್ರಾಹಕರ ಕೈ ಸೇರಲಿವೆ.

ಇನ್ನು ಹೊಸ ಮಾದರಿಯ ಡಿಜೈರ್ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆ ಇದೆ.

ಡಿಜೈರ್ ಕಾರಿನ ಆರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.54ಲಕ್ಷಕ್ಕೆ ಲಭ್ಯವಿದ್ದು, ಉನ್ನತ ಶ್ರೇಣಿಯ ಕಾರು ಮಾದರಿ ರೂ. 9.41 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.


Click it and Unblock the Notifications