ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾರುತಿ ವಿನೂತನ ಡಿಜೈರ್..!!

Written By:

ಭಾರತೀಯ ಗ್ರಾಹಕರ ಮನಗೆದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾದರಿಯ ಡಿಜೈರ್ ಕಾರನ್ನು ಇಂದು ಬಿಡುಗಡೆಗೊಳಿಸಿದ್ದು, ಆರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.54ಲಕ್ಷಕ್ಕೆ ಲಭ್ಯವಿವೆ.

ಡಿಜೈರ್ ನಮೂನೆಗಳು (ಪೆಟ್ರೋಲ್ ಮಾದರಿ)
ಎಲ್‌ಎಕ್ಸ್‌ಐ
ವಿಎಕ್ಸ್‌ಐ
ವಿಎಕ್ಸ್‌ಐ ಎಜಿಎಸ್
ಝಡ್ಎಕ್ಸ್‌ಐ
ಝಡ್ಎಕ್ಸ್‌ಐ ಎಜಿಎಸ್
ಝಡ್‌ಎಕ್ಸ್ಐ ಪ್ಲಸ್
ಝಡ್‌ಎಕ್ಸ್ಐ ಪ್ಲಸ್ ಎಜಿಎಸ್

ಡಿಜೈರ್ ಬೆಲೆಗಳು (ಪೆಟ್ರೋಲ್ ಮಾದರಿ)

ಎಲ್‌ಎಕ್ಸ್‌ಐ -            ರೂ.5.45 ಲಕ್ಷ
ವಿಎಕ್ಸ್‌ಐ -               ರೂ.6.29 ಲಕ್ಷ
ವಿಎಕ್ಸ್‌ಐ ಎಜಿಎಸ್-      ರೂ.6.76 ಲಕ್ಷ
ಝಡ್ಎಕ್ಸ್‌ಐ-            ರೂ.7.05 ಲಕ್ಷ
ಝಡ್ಎಕ್ಸ್‌ಐ ಎಜಿಎಸ್-  ರೂ. 7.52 ಲಕ್ಷ
ಝಡ್‌ಎಕ್ಸ್ಐ ಪ್ಲಸ್-      ರೂ.7.94 ಲಕ್ಷ
ಝಡ್‌ಎಕ್ಸ್ಐ ಪ್ಲಸ್ ಎಜಿಎಸ್-  ರೂ.8.41 ಲಕ್ಷ

ಡಿಜೈರ್ ನಮೂನೆಗಳು (ಡಿಸೇಲ್ ಮಾದರಿ)

ಎಲ್‌ಡಿಐ
ವಿಡಿಐ
ವಿಡಿಐ ಎಜಿಎಸ್
ಝಡ್‌ಡಿಐ
ಝಡ್‌ಡಿಐ ಎಜಿಎಸ್
ಝಡ್‌ಡಿಐ ಪ್ಲಸ್
ಝಡ್‌ಡಿಐ ಪ್ಲಸ್ ಎಜಿಎಸ್

ಡಿಜೈರ್ ಬೆಲೆಗಳು (ಡಿಸೇಲ್ ಮಾದರಿ)

ಎಲ್‌ಡಿಐ-               ರೂ. 6.45ಲಕ್ಷ
ವಿಡಿಐ-                  ರೂ.7.29ಲಕ್ಷ
ವಿಡಿಐ ಎಜಿಎಸ್-        ರೂ.7.76ಲಕ್ಷ
ಝಡ್‌ಡಿಐ-             ರೂ. 8.05 ಲಕ್ಷ
ಝಡ್‌ಡಿಐ ಎಜಿಎಸ್-    ರೂ.8.52 ಲಕ್ಷ
ಝಡ್‌ಡಿಐ ಪ್ಲಸ್-        ರೂ. 8.94 ಲಕ್ಷ
ಝಡ್‌ಡಿಐ ಪ್ಲಸ್ ಎಜಿಎಸ್- ರೂ. 9.41 ಲಕ್ಷ

ಮೈಲೇಜ್

ಪೆಟ್ರೋಲ್ ಮಾದರಿ- ಪ್ರತಿಲೀಟರ್‌ಗೆ 22 ಕಿ.ಮಿ
ಡಿಸೇಲ್ ಮಾದರಿ- ಪ್ರತಿಲೀಟರ್‌ಗೆ 28.40 ಕಿ.ಮಿ

ಹೊಚ್ಚ ಹೊಸ ಕಾರು ಮಾದರಿಗಳಲ್ಲಿ ಫೇಸ್‌ಲಿಫ್ಟ್ ಅಂಶಗಳಿದ್ದು, ನವೀನ ಮಾದರಿಯ ವಿನ್ಯಾಸವನ್ನು ಹೊಂದಿವೆ. ಜೊತೆಗೆ ವಿನೂತನ ವಿನ್ಯಾಸದ ಗ್ರಿಲ್ ಪಡೆದುಕೊಂಡಿದ್ದು, ಹೊರ ಭಾಗದ ಹೊಸ ವಿನ್ಯಾಸವು ಗಮನಸೆಳೆಯುತ್ತಿವೆ.

ಹೊಸ ಮಾದರಿಯ ಸ್ವಿಫ್ಟ್ ಡಿಸೈರ್ ಕಾರು ಸಾಕಷ್ಟು ಬದಲಾವಣೆಗೊಂಡಿದ್ದು, ಹಳೆಯ ಮಾದರಿಗಳಿಂತ ಹೆಚ್ಚು ತೂಕ ಪಡೆಯುವ ಮೂಲಕ ಬಲಿಷ್ಠತೆ ಕಾಯ್ದುಕೊಂಡಿವೆ.

ಕಾರಿನ ಹಿಂದಿನ ದೀಪಗಳು ಬೂಟ್ ಲಿಪ್ ಸ್ಪಾಯ್‌ಲರ್‌ನೊಂದಿಗೆ ಮರುವಿನ್ಯಾಸಗೊಂಡಿದ್ದು, ಪೆಟ್ರೋಲ್ ಕಾರು 83 ಅಶ್ವಶಕ್ತಿ ಮತ್ತು ಡೀಸೆಲ್ ಕಾರು 74 ಅಶ್ವಶಕ್ತಿ ಪಡೆದುಕೊಂಡಿವೆ.

1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆ ಇದೆ.

ಮತ್ತೊಂದು ಹೊಸ ವಿಷಯವೇನೆಂದರೆ ಈ ಕಾರು ಎರಡು ರೀತಿಯ ಡ್ಯಾಶ್‌ಬೋರ್ಡ್ ಪಡೆದುಕೊಳ್ಳಲಿದ್ದು, ಫ್ಲಾಟ್ ಬಾಟಮ್ ಸ್ಟಿಯರಿಂಗ್ ವೀಲ್ ಪಡೆದುಕೊಂಡಿದೆ.

ಇದರ ಜೊತೆಗೆ ಆಕ್ಸ್‌ಫರ್ಡ್ ಬ್ಲೂ, ಶೇರ್‌ವುಡ್ ಬ್ರೌನ್, ಗಲ್ಯಾಂಟ್ ರೆಡ್, ಮ್ಯಾಗ್ಮಾ ಗ್ರೇ, ಸಿಲ್ಕಿ ಸಿಲ್ವರ್ ಮತ್ತು ಪರ್ಲ್ ಆರ್ಟಿಕ್ ವೈಟ್‌ನಲ್ಲಿ ಲಭ್ಯವಿದೆ.

ಇಷ್ಟೆಲ್ಲಾ ಸುಧಾರಿತ ಬದಲಾವಣೆಗಳನ್ನು ಒಳಗೊಂಡಿರುವ ಡಿಜೈರ್ ಕಾರು, ಪ್ರಸ್ತುತ ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಹಿಂದಿಕ್ಕಿ ಪ್ರಾಬಲ್ಯ ಸಾಧಿಸುವುದಂತೂ ಖಚಿತ.

English summary
2017 Maruti Suzuki Dzire facelift Launched in Indaian Market.
Please Wait while comments are loading...

Latest Photos