ಒಂದೇ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾರುತಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಬಿಡುಗಡೆ ?
ಈ ವರ್ಷದ ಹಬ್ಬದ ಋತುವಿನಲ್ಲಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಹೆಸರಾಂತ ವಾಹನ ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ಮುಂದಾಗಿದೆ.
ಈ ವರ್ಷದ ಹಬ್ಬದ ಋತುವಿನಲ್ಲಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಹೆಸರಾಂತ ವಾಹನ ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ಮುಂದಾಗಿದೆ.

ಹೌದು, ಜನಪ್ರಿಯ ಕಾರು ಎಂದೇ ಖ್ಯಾತಿ ಪಡೆದಿರುವ ಮಾರುತಿ ಎಸ್-ಕ್ರಾಸ್ ಮಾದರಿಯ ಫೇಸ್‌ಲಿಫ್ಟ್ ಕಾರು ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ. ಸದ್ಯ ಮಾರಾಟಗೊಳ್ಳುತ್ತಿರುವ ಈ ಕಾರು 1.3 ಲೀಟರ್ ಮತ್ತು 1.6 ಲೀಟರ್ ಡೀಸೆಲ್ ಇಂಜಿನ್‌ಗಳನ್ನು ಹೊಂದಿದೆ.

ಆದರೆ ಸದ್ಯದ ಮಾಹಿತಿ ಪ್ರಕಾರ ಈ ಕಾರಿನ ಫೇಸ್‌ಲಿಫ್ಟ್ ಆವೃತಿಯು ಕೇವಲ 1.3 ಲೀಟರ್ ಡೀಸೆಲ್ ಎಂಜಿನ್ ಮಾತ್ರ ಹೊಂದಿರಲಿದ್ದು, 1.6 ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ.

ಅಲ್ಲದೆ, ಮಾರುತಿ ಕಂಪನಿಯು 1.6 ಲೀಟರ್ ಎಸ್-ಕ್ರಾಸ್ ಉತ್ಪಾದನೆಯನ್ನು ಸಹ ನಿಲ್ಲಿಸಿದೆ ಮತ್ತು ಈಗಾಗಲೇ ಉತ್ಪಾದನೆಯಾಗಿರುವ 1.6 ಲೀಟರ್ ಕಾರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಹೆಚ್ಚುವರಿಯಾಗಿ, ಎಸ್-ಕ್ರಾಸ್ ಫೇಸ್‌ಲಿಫ್ಟ್ ಆವೃತಿಯ ಕಾರನ್ನು ಹೆಚ್ಚು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಮಾರುತಿ ಕಂಪನಿಯು ಹೊಸ ಪೆಟ್ರೋಲ್ ಎಂಜಿನ್ ಆಯ್ಕೆ ಸಹ ನೀಡಬಹುದೆಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಎಸ್-ಕ್ರಾಸ್ ಫೇಸ್‌ಲಿಫ್ಟ್ ಆವೃತಿಯು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಈ ಹೊಸ ಕಾರು ನವೀನ ಮಾದರಿಯ ಹೆಡ್‌ಲೈಟ್‌ಗಳನ್ನು ಮತ್ತು ದೊಡ್ಡ ಕ್ರೋಮ್ ಗ್ರಿಲ್‌ಗಳನ್ನು ಪಡೆದು ಹೆಚ್ಚು ಅಂದಗೊಂಡಿದೆ. ಮುಂಭಾಗದ ಬಂಪರ್ ಮರುವಿನ್ಯಾಸಗೊಂಡಿದ್ದು, ಆಕ್ರಮಣಕಾರಿ ನೋಟವನ್ನು ನೀಡಲಾಗಿದೆ.

ಕಾರಿನ ಮುಂಭಾಗ ಮತ್ತು ಹಿಂಭಾಗ ಯಾವುದೇ ರೀತಿಯ ಬದಲಾವಣೆಗಳನ್ನು ಸಹ ಕಾಣುವುದಿಲ್ಲ ಎನ್ನಬಹುದು. ಆದರೆ, ಕಾರಿನ ಟೈಲ್‌ಲೈಟ್‌ಗಳು ಸ್ವಲ್ಪಮಟ್ಟಿಗೆ ತಿರುಗಿದ ರೀತಿಯಲ್ಲಿ ವಿನ್ಯಾಸ ಪಡೆದುಕೊಂಡಿವೆ.


Click it and Unblock the Notifications