ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಬಲೆನೊ

Written By:

ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ, ಬಲೆನೊ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡುವ ಮೂಲಕ ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಿದೆ.

ಮಾರುತಿ ಸುಜುಕಿ ಬಲೆನೊ

ಬಿಡುಗಡೆಯಾಗಿ ಕೇವಲ 20 ತಿಂಗಳಲ್ಲಿ 2 ಲಕ್ಷ ಕಾರುಗಳು ಮಾರಾಟಗೊಂಡಿದ್ದು, ಬಲೆನೊ ಕಾರು ಖರೀದಿಯ ಬೇಡಿಕೆ ಇದುವರೆಗೂ ಕಡಿಮೆಯಾಗಿಲ್ಲ.

ಮಾರುತಿ ಸುಜುಕಿ ಬಲೆನೊ

2015 ಅಕ್ಟೋಬರ್ 26ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬಲೆನೊ ಕಾರು ಮಾದರಿಯೂ, ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆ ಮತ್ತು ಉತ್ತಮ ಕಾರ್ಯಕ್ಷಮತೆಯಿಂದಾಗಿ ಗ್ರಾಹಕರ ಮನಗೆದ್ದಿದೆ.

ಮಾರುತಿ ಸುಜುಕಿ ಬಲೆನೊ

ಪ್ರತಿ ತಿಂಗಳು ಸರಾಸರಿ 1,600 ಕಾರುಗಳು ಮಾರಾಟಗೊಂಡಿದ್ದು, ಕಳೆದ ಮೇ ಅಂತ್ಯಕ್ಕೆ 1,97,660 ಕಾರುಗಳು ಮಾರಾಟಗೊಂಡಿದ್ದವು. ಈ ಮೂಲಕ ಬಲೆನೊ ಪ್ರಮುಖ ಕಾರು ಮಾರಾಟ ಪ್ರಮಾಣವನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ಸಾಧಿಸಿದೆ.

ಮಾರುತಿ ಸುಜುಕಿ ಬಲೆನೊ

ಇನ್ನು ಇದೇ ವರ್ಷ 10 ಉತ್ತಮ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಬಲೆನೊ, ಅಲ್ಪಾವಧಿಯಲ್ಲಿ ಮಹತ್ತರ ಸಾಧನೆ ಮಾಡಿರುವುದು ಮಾರುತಿ ಸುಜುಕಿ ಸಂಸ್ಥೆಗೆ ಮತ್ತಷ್ಟು ಭರವಸೆ ನೀಡಿದೆ.

ಮಾರುತಿ ಸುಜುಕಿ ಬಲೆನೊ

ಸದ್ಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿರುವ ಬಲೆನೊ ಆವೃತ್ತಿಯು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದೆ.

ಮಾರುತಿ ಸುಜುಕಿ ಬಲೆನೊ

ಬಲೆನೊ ಬಗೆಗೆ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಮಧ್ಯಮ ವರ್ಗಗಳಿಗೆ ಬಲೆನೊ ಮಾದರಿ ಖರೀದಿ ಉತ್ತಮ ಕಾರು ಎಂದು ಹೇಳಬಹುದು.

English summary
Read in Kannda about Maruti Suzuki Baleno Achieves Another Milestone.
Story first published: Monday, June 19, 2017, 18:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark