ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

Written By:

ಭಾರತದ ಬೃಹತ್ ಕಾರು ಉತ್ವಾದನಾ ಸಂಸ್ಥೆ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಸಿಯಾಜ್ ಕಾರನ್ನು ನೂತನ ತಂತ್ರಜ್ಞಾನದೊಂದಿಗೆ ಪರಿಷ್ಕರಣೆಗೊಳಿಸಿದ್ದು, ಬಿಡುಗಡೆಗೆ ಸಿದ್ದಗೊಳಿಸಿದೆ. ಅಂದುಕೊಂಡತೆ ಆದಲ್ಲಿ ಇದೇ ಎಪ್ರಿಲ್ ಅಂತ್ಯಕ್ಕೆ ಬಿಡುಗಡೆಗೊಳ್ಳುಲಿದ್ದು, ಮತ್ತೊಮ್ಮೆ ಸಿಯಾಜ್ ಕಾರು ಮಾರಾಟದಲ್ಲಿ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ.

ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

ನೂತನ ತಂತ್ರಜ್ಞಾನದೊಂದಿಗೆ ನವಿಕೃತಗೊಂಡಿರುವ ಸಿಯಾಜ್ ಸೆಡಾನ್ ಕಾರು ಈ ಹಿಂದಿನ ಆವೃತ್ತಿಯಲ್ಲಿ ಹೆಚ್ಚು ಬದಲಾವಣೆ ತರಲಾಗಿದೆ. ಯುರೋಪಿಯನ್ ಶೈಲಿಯ ಸಿಯಾಜ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದ್ದು, ಆಕರ್ಷಕ ಬಾಹ್ಯ ವಿನ್ಯಾಸ ಹೊಂದಿದೆ.

ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

ನೂತನ ಕಾರಿನಲ್ಲಿ ಗ್ರಾಹಕರ ಪ್ರಸ್ತುತ ಆದ್ಯತೆಗಳಿಗೆ ಹೆಚ್ಚಿನ ಗಮನಹರಿಸಲಾಗಿದ್ದು, ಫಾಗ್ ಲ್ಯಾಂಪ್, ಬಂಪರ್, ಡೇ ಲೈಟ್ ರನ್ನಿಂಗ್ ಲೈಟ್ ವಿನ್ಯಾಸದಲ್ಲಿ ಬದಲಾವಣೆ ಪಡೆದುಕೊಂಡಿದೆ.

ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

ಬಿಡುಗಡೆಗೊಳ್ಳಲು ಸಿದ್ದಗೊಂಡಿರುವ ಸಿಯಾಜ್ ನೂತನ ಆವೃತ್ತಿ ಮಾರುತಿ ಸುಜುಕಿ ಗ್ರಾಹಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹತ್ತು ಹಲವು ಬದಲಾವಣೆಗೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ನೂತನ ಕಾರಿನಲ್ಲಿ ಸನ್ ಪ್ರೂಫ್ ಅಳವಡಿಸಲಾಗಿದ್ದು, ಅಲಾಯ್ ವೀಲ್ಹ್‌ಗಳು ನೋಡಲು ಆಕರ್ಷಕವಾಗಿವೆ.

ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

ಸಿಯಾಜ್ ಸೆಡಾನ್ ಕಾರಿನಲ್ಲಿ ಇಂಟಿರಿಯರ್‌ಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಈ ಹಿಂದಿನ ಹಲವು ಸೌಲಭ್ಯಗಳನ್ನು ಮುಂದುವರೆಸಲಾಗಿದೆ. ಕಾರಿನಲ್ಲೇ ಎಲ್ಲ ಮಾಹಿತಿ ನೀಡಬಲ್ಲ ಟಚ್ ಸ್ಕ್ರಿನ್ ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್ ಹೊಂದಿದ್ದು, ಆಪ್ಯಲ್ ಕಾರ್ ಪ್ಲೇಯ್ ನಿಮ್ಮ ಸುಖಕರ ಪ್ರಯಾಣಕ್ಕೆ ಸಹಾಯವಾಗಲಿದೆ.

ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

ಸ್ಮಾರ್ಟ್ ಎಂಜಿನ್ ಹೊಂದಿರುವ ಸಿಯಾಜ್ ಹೈಬ್ರಿಡ್ ಕಾರ್, 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದರಿಂದ ಆದ್ಯತೆ ಮೇರೆಗೆ ಕಾರು ಖರೀದಿಗೆ ಸುಲಭವಾಗಲಿದ್ದು, ಏಪ್ರಿಲ್ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದೆ.

ಬಿಡುಗಡೆಗೆ ಸಿದ್ಧಗೊಂಡಿದೆ ಪರಿಷ್ಕೃತ ಮಾರುತಿ ಸುಜುಕಿ ಸಿಯಾಜ್..!

ಇನ್ನೂ ನೂತನ ಕಾರಿನ ಬೆಲೆ 8 ರಿಂದ 10 ಲಕ್ಷ ಎಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ನಿಖರವಾಗಲಿದೆ. ಒಟ್ಟಿನಲ್ಲಿ ಬಿಡುಗಡೆಗೆ ಕಾಯ್ದಿರುವ ಸಿಯಾಜ್ ಕಾರು ಪ್ರತಿ ಸ್ಪರ್ಧಿಗಳಾದ ಹೋಂಡಾ ಸಿಟಿ, ಹುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವೆಂಟೋ ಮತ್ತು ಸ್ಕೋಡಾ ರ‍್ಯಾಪಿಡ್‌ಗೆ ತೀವ್ರ ಪೈಪೋಟಿ ನೀಡಲಿದೆ.

ಬಿಡುಗಡೆಗೂ ಮುನ್ನ ನಿರೀಕ್ಷೆ ಹುಟ್ಟುಹಾಕಿರುವ ಮಾರುತಿ ಸುಜುಕಿ ಮೂರನೇ ತಲೆಮಾರಿನ ಕಾರುಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿ ಕ್ಲಿಕ್ ಮಾಡಿ.

English summary
Maruti Suzuki is all geared up to update its premium sedan, the Ciaz. The facelifted sedan is expected to launch in India by April 2017.
Please Wait while comments are loading...

Latest Photos