ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

Written By:

ಮಾರುತಿ ಸುಜುಕಿ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆಯಾಗಿದ್ದು, ಹೊಸತನ ಹೊತ್ತ ಬಂದಿರುವ ಇಗ್ನಿಸ್ ಆಲ್ಫಾ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುತಿ ಸುಜುಕಿ ಸಂಸ್ಥೆಯು ಇಗ್ನಿಸ್ ಆಲ್ಫಾ ಎಎಂಟಿ( ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಆವೃತ್ತಿಯನ್ನು ಪರಿಚಯಿಸಿದ್ದು, ಆರಂಭಿಕ ಕಾರು ಮಾದರಿಯ ಬೆಲೆ ರೂ.7,01,143ಕ್ಕೆ ಲಭ್ಯವಿದೆ.

ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿಯಲ್ಲೇ ಮತ್ತೇರಡು ಹೊಸ ಮಾದರಿಗಳು ಕೂಡಾ ಬಿಡುಗಡೆಯಾಗಿದ್ದು, ಉನ್ನತ ಶ್ರೇಣಿಯ ಪೆಟ್ರೋಲ್ ಕಾರಿನ ಬೆಲೆಯೂ ರೂ. 8,08,050 ಗಳಿಗೆ ಲಭ್ಯವಿದೆ.

ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

ಆದ್ರೆ ಈ ಹಿಂದೆ ಬಿಡುಗಡೆಯಾಗಿದ್ದ ಇಗ್ನಿಸ್ ಆಲ್ಫಾ ಮ್ಯಾನುವಲ್ ಗೇರ್‌ಬಾಕ್ಸ್ ವೈಶಿಷ್ಟ್ಯತೆಗಳು ಮತ್ತು ಎಂಜಿನ್ ಮಾದರಿಗಳು ಕೂಡಾ ಎಎಂಟಿಯಲ್ಲೂ ಮುಂದುವರಿಸಲಾಗಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.

Recommended Video
Maruti Prices Post GST In Kannada - DriveSpark ಕನ್ನಡ
ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

ಹೀಗಾಗಿ ಪೆಟ್ರೋಲ್ ಆವೃತ್ತಿಯು 82-ಬಿಎಚ್‌ಪಿ ಮತ್ತು 113-ಎಂಎನ್ ಟಾರ್ಕ್ ಉತ್ಪಾದನೆ ಮಾಡಿದರೆ ಡೀಸೆಲ್ ಆವೃತ್ತಿಯು 74-ಬಿಎಚ್‌ಪಿ ಮತ್ತು 190-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

ಇನ್ನುಳಿದಂತೆ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಟಚ್ ಇನ್ಪೋ‌ಟೈನ್‌ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ, ಟ್ರಿಪ್ಪಲ್ ಟೊನ್ಡ್ ಕಲರ್ ಶೆಡ್, ಎಬಿಎಸ್, ಇಬಿಡಿ, ಮನರಂಜನಾ ಮಾಧ್ಯಮಗಳನ್ನು ಸಹ ಅಳವಡಿಕೆ ಮಾಡಲಾಗಿದೆ.

ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗ್ರಾಹಕರಿಂದ ಉತ್ತಮ ಬೇಡಿಕೆ ಬಂದ ಹಿನ್ನೆಲೆ ಇಗ್ನಿಸ್ ಆಲ್ಫಾ ಎಎಂಟಿ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ, ಪ್ರಸುತ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಸ ಕಾರಿನಲ್ಲಿ ಒದಗಿಸಲಾಗಿದೆ.

English summary
Read in Kannada about Maruti Suzuki Ignis Alpha AMT Launched In India.
Story first published: Thursday, August 3, 2017, 19:32 [IST]
Please Wait while comments are loading...

Latest Photos