ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

Written By:

ನಗರ ವಾಸಿಗಳನ್ನು ಕೇಂದ್ರವಾಗಿಟ್ಟುಕೊಂಡು ತಯಾರು ಮಾಡಲಾಗಿರುವ ಮಾರುತಿ ಸುಜುಕಿ ಕಂಪನಿಯ ಇಗ್ನಿಸ್ ಕಾರು ಕೇವಲ ಎರಡು ತಿಂಗಳಲ್ಲಿ 10,000 ಕಾರುಗಳು ಮಾರಾಟವಾಗಿವೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಭಾರತದ ವಿಶ್ವಾಸನೀಯ ಕಾರು ತಯಾರಕ ಮಾರುತಿ ಸುಜುಕಿ ಕಂಪನಿಯ ಕಾರು ಇಗ್ನಿಸ್ ಈಗಾಗಲೇ 10000 ಕಾರುಗಳು ಮಾರಾಟವಾಗಿದ್ದು, ಎಸ್-ಕ್ರಾಸ್ ಮತ್ತು ಬಲೆನೊ ಹ್ಯಾಚ್ ಬ್ಯಾಕ್ ನಂತರ ನೆಕ್ಸಾ ಶೋ ರೂಂ ಮೂಲಕ ಬಿಡುಗಡೆಯಾಗಿ ಯಶಸ್ಸು ಕಂಡ ಮೂರನೇ ಕಾರು ಎಂಬ ಖ್ಯಾತಿ ಪಡೆದುಕೊಂಡಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಜನವರಿ ತಿಂಗಳ ಶುರುವಿನಲ್ಲಿ ಬಿಡುಗಡೆಯಾದ ಈ ಕಾರು ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಸಾಧನೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

12,000 ಕಾರುಗಳಿಗೆ ಗ್ರಾಹಕರಿಂದ ಬೇಡಿಕೆ ಬಂದಿದ್ದು, ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತವಾಗಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಸದ್ಯ ತಿಂಗಳಿಗೆ 4,500 ರಿಂದ 5,000 ಕಾರುಗಳನ್ನು ಮಾತ್ರ ಉತ್ಪಾದನೆ ಮಾಡುವಷ್ಟು ಮಾತ್ರ ಮಾರುತಿ ಸುಜುಕಿ ಶಕ್ತವಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರುಗಳನ್ನು ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಗುರ್‌ಗಾಂವ್‌ನಲ್ಲಿರುವ ಕಾರು ಉತ್ಪಾದನಾ ಕಾರ್ಖಾನೆಯಲ್ಲಿ ಸದ್ಯ ಕ್ರೀಡಾ ಬಳಕೆಯ ಕಾರು ವಿಟಾರಾ ಬ್ರಿಝಾ ಮತ್ತು ಇಗ್ನಿಸ್ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಲಾಗುತ್ತಿದ್ದು, ಇಗ್ನಿಸ್ ಕಾರು ಬೇಕೆಂದರೆ ನೀವು 2 ತಿಂಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಕೆಲವೇ ವರ್ಷಗಳ ಹಿಂದೆ ಬಿಡುಗಡೆಯಾದ ವಿಟಾರಾ ಬ್ರಿಝಾ ಮತ್ತು ಬಲೆನೊ ಕಾರುಗಳು ಕೂಡ ಮೊದಲು ಇದ್ದ ಕಾಯ್ದಿರಿಸುವಿಕೆಯನ್ನು 9 ತಿಂಗಳಿಗೆ ಹೆಚ್ಚಿಸಿಕೊಂಡಿದ್ದವು, ಇದೇ ಹಾದಿಯನ್ನು ಈಗ ಇಗ್ನಿಸ್ ಹಿಡಿದಿದ್ದು, ಕಂಪನಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಇಗ್ನಿಸ್ ಕಾರು ತನ್ನ ಪ್ರತಿಸ್ಪರ್ಧಿಗಳಾದ ಕೆಯುವಿ 100 ಮತ್ತು ಹ್ಯುಂಡೈ ಕಂಪನಿಯ ಗ್ರಾಂಡ್ ಐ10 ಕಾರುಗಳೊಂದಿಗೆ ಪೈಪೋಟಿ ನೆಡೆಸಿ ಯಶಸ್ವಿಯಾಗುವತ್ತ ಧಾಪುಗಾಲಿಟ್ಟಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಇಗ್ನಿಸ್ ಕಾರಿನೊಳಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್, ಆಪಲ್ ಕಾರ್ ಪ್ಲೇ, ಯುಎಸ್ ಬಿ ಮತ್ತು ಆಕ್ಸ್ ಸೇವೆ ಹೊಂದಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಕೇವಲ ಎರಡೇ ತಿಂಗಳಲ್ಲಿ ಮಾರಾಟವಾದ 'ಇಗ್ನಿಸ್' ಕಾರುಗಳ ಸಂಖ್ಯೆ ಎಷ್ಟು ಗೊತ್ತೇ ?

ಕಾರಿನ ಬೆಲೆ 4.59 ಲಕ್ಷದಿಂದ ಶುರುವಾಗಿ 7.80 ಲಕ್ಷ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯ ಕಾರುಗಳು ಮಾರಾಟಕ್ಕೆ ಲಭ್ಯವಿದೆ.

12,000 ಸಾವಿರ ಮಂದಿ ಕಾಯ್ದಿರಿಸಿರುವ ಇಗ್ನಿಸ್ ಕಾರಿನ ಚಿತ್ರಗಳನ್ನು ನೀವು ನೋಡಲೇ ಬೇಕೆಂದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

English summary
Maruti Suzuki’s premium urban city car Ignis has sold 10,000 units so far. About 12,000 bookings are pending with more in the pipeline.
Story first published: Monday, March 6, 2017, 17:17 [IST]
Please Wait while comments are loading...

Latest Photos