ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳವಾಗಬಹುದು ಎಂಬ ಮಾಹಿತಿ ಇಲ್ಲಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳವಾಗಬಹುದು ಎಂಬ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳನ್ನು ಉತ್ಪಾದನೆ ಮಾಡುವ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, 2018ರ ಜನವರಿ 1ರಿಂದಲೇ ಹೊಸ ಬೆಲೆಗಳನ್ನು ಪರಿಷ್ಕಣೆ ಮಾಡುವ ಸುಳಿವು ನೀಡಿದೆ.

ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಸುದ್ದಿ ಮೂಲಗಳ ಪ್ರಕಾರ ಜನವರಿ 1ರಿಂದಲೇ ಮಾರುತಿ ಸುಜುಕಿ ನಿರ್ಮಾಣದ ಎಲ್ಲ ಕಾರುಗಳ ಬೆಲೆಗಳು ಪರಿಷ್ಕರಣೆಗೊಳ್ಳಲಿದ್ದು, ಪ್ರವೇಶ ಮಟ್ಟದ ಕಾರುಗಳಿಂದ ಉನ್ನತ ಮಾದರಿಯ ಕಾರುಗಳು ಶೇ. 2ರಷ್ಟು ಹೆಚ್ಚುವರಿ ಬೆಲೆಯನ್ನು ಪಡೆದುಕೊಳ್ಳಲಿವೆ ಎನ್ನಲಾಗಿದೆ.

Recommended Video

Driverless Auto Rickshaw On Indian Highway
ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಹೀಗಾಗಿ ಮಾರುತಿ ಸುಜುಕಿ ಉತ್ಪಾದಿತ ಆಲ್ಟೊ, ವ್ಯಾಗನಾರ್, ಸ್ವಿಫ್ಟ್, ಎಸ್ ಕ್ರಾಸ್, ವಿಟಾರಾ ಬ್ರೆಝಾ ಹಾಗೂ ಎರ್ಟಿಗಾ ಕಾರುಗಳ ಬೆಲೆಗಳು ದುಬಾರಿಯಾಗಲಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಇನ್ನು ಮಾರುತಿ ಸಂಸ್ಥೆಯ ಎರ್ಟಿಗಾ ಡೀಸೆಲ್ ಮಾದರಿಯ ಕಾರು ಖರೀದಿಸುವ ಗ್ರಾಹಕರಿಗೆ 40,000 ರೂ.ಗಳ ಹೆಚ್ಚುವರಿ ಪಾವತಿಬೇಕಾಗಿದ್ದು, ಬ್ರೆಝಾ ಖರೀದಿ ಮೇಲೆ ಗರಿಷ್ಠ ಮಟ್ಟದಲ್ಲಿ 30 ಸಾವಿರ ಬೆಲೆ ಹೆಚ್ಚಳ ಸಾಧ್ಯತೆಗಳಿವೆ.

ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿಗಳು "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ" ಎಂದಿದ್ದಾರೆ.

ಮಾರುತಿ ಸುಜುಕಿ ಕಾರುಗಳ ಖರೀದಿ ಇನ್ನು ದುಬಾರಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಟಾಟಾ, ಸ್ಕೋಡಾ, ಹೋಂಡಾ, ಇಸುಝು, ಫೋರ್ಡ್ ಮತ್ತು ಟೊಯೊಟೊ ಸಂಸ್ಥೆಗಳು ಈಗಾಗಲೇ ಬೆಲೆ ಹೆಚ್ಚಳ ಮಾಡುವ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೀಗ ಮಾರುತಿ ಸುಜುಕಿ ಸಂಸ್ಥೆಯು ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.

More from DriveSpark

Article Published On: Thursday, December 14, 2017, 19:28 [IST]
English summary
Read In Kannada Maruti Suzuki India to Raise Vehicles Prices Upto 2 Percentage from January 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+