ಕೊನೆಗೂ ತನ್ನ ಕಾರುಗಳಿಗೆ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಿದ ಮಾರುತಿ ಸುಜುಕಿ

ಭಾರತದ ಪ್ರಮುಖ ಪ್ರಯಾಣಿಕ ವಾಹನ ತಯಾರಕ ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳಲ್ಲಿ ಅಳವಡಿಸಿರುವ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಶ್ರೇಣಿಯನ್ನು ನವೀಕರಿಸಿದೆ.

By Girish

ಸ್ಮಾರ್ಟ್ ಪ್ಲೇ ಆಪರೇಟಿಂಗ್ ಸಿಸ್ಟಮ್ ಸೌಲಭ್ಯ ಹೊಂದಿರುವ ಎಲ್ಲ ಮಾರುತಿ ಕಾರುಗಳಲ್ಲಿ ಈಗಾಗಲೇ ಆಪಲ್ ಕಾರ್‌ಪ್ಲೇ ಮತ್ತು ಮಿರರ್ ಲಿಂಕ್ ಸೌಕರ್ಯವನ್ನು ನೀಡಲಾಗಿದ್ದು, ಈಗ ಹೊಸ ಗೂಗಲ್ ಆಂಡ್ರಾಯ್ಡ್ ಆಟೋ ವೈಶಿಷ್ಟ್ಯಯವನ್ನೂ ಸಹ ನೀಡಲು ಕಂಪನಿ ಮುಂದಾಗಿದೆ.

ಕೊನೆಗೂ ತನ್ನ ಕಾರುಗಳಿಗೆ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಿದ ಮಾರುತಿ ಸುಜುಕಿ

ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್‌ನೊಂದಿಗೆ ಕಾರಿನ ಪ್ರಯಾಣಿಕ ಅಥವಾ ಬಳಕೆದಾರ ತನ್ನ ಸ್ಮಾರ್ಟ್‌ಫೋನ್ ಸಂಪರ್ಕಿಸಲು ಆಂಡ್ರಾಯ್ಡ್ ಆಟೋ ವೈಶಿಷ್ಟ್ಯವು ಅನುವು ಮಾಡಿಕೊಡುತ್ತದೆ.

ಕೊನೆಗೂ ತನ್ನ ಕಾರುಗಳಿಗೆ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಿದ ಮಾರುತಿ ಸುಜುಕಿ

ಒಮ್ಮೆ ಫೋನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್‌ನೊಂದಿಗೆ ಸಂಪರ್ಕ ಸಾಧಿಸಿದ ನಂತರ, ಧ್ವನಿ ಗುರುತಿಸುವಿಕೆ, ಕರೆ ಮಾಡುವಿಕೆ, ಎಸ್‌ಎಂಎಸ್ ರೀಡ್ಔಟ್, ಸಂಗೀತ ಪ್ಲೇಬ್ಯಾಕ್ ಮತ್ತು ನ್ಯಾವಿಗೇಷನ್ ಸೌಕರ್ಯಗಳನ್ನು ಹೊಂಚಿಕೊಳ್ಳಬಹುದು.

ಕೊನೆಗೂ ತನ್ನ ಕಾರುಗಳಿಗೆ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಿದ ಮಾರುತಿ ಸುಜುಕಿ

ಮೊದಲಿಗೆ, ಕಂಪನಿಯು ತನ್ನ ಸಿಯಾಜ್ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪರಿಚಯಿಸಿತ್ತು ನಂತರದ ದಿನಗಳಲ್ಲಿ ಎಸ್-ಕ್ರಾಸ್, ಬಲೆನೊ, ಎರ್ಟಿಗಾ ಮತ್ತು ವಿಟರಾ ಬ್ರೆಝಾ ಕಾರುಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಿತ್ತು. ಆದರೆ, ಎಲ್ಲಾ ಕಾರುಗಳೂ ಕೂಡ ಕೇವಲ ಆಪಲ್ ಕಾರ್‌ಪ್ಲೇ ಮತ್ತು ಮಿರರ್‌ಲಿಂಕ್ ಮಾತ್ರ ಪಡೆದುಕೊಂಡಿದ್ದವು.

ಕೊನೆಗೂ ತನ್ನ ಕಾರುಗಳಿಗೆ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಿದ ಮಾರುತಿ ಸುಜುಕಿ

ಮಾರುತಿ ಸರ್ವೀಸ್ ಸ್ಟೇಷನ್‌ಗಳಲ್ಲಿ ಮುಂದಿನ ವರ್ಷದ ಮಾರ್ಚ್ 31ರವರೆಗೂ ಈ ತಂತ್ರಾಂಶವನ್ನು ಉಚಿತವಾಗಿ ಮತ್ತು ತ್ವರಿತವಾಗಿ ಅಪ್ಡೇಟ್ ಮಾಡುವುದಾಗಿ ಕಂಪನಿ ತಿಳಿಸಿದ್ದು, ಕಾರು ಮಾಲೀಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

ಕೊನೆಗೂ ತನ್ನ ಕಾರುಗಳಿಗೆ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಿದ ಮಾರುತಿ ಸುಜುಕಿ

ಮಾರುತಿ ಕಂಪನಿಯ ಗ್ರಾಹಕರಲ್ಲಿ ಹೆಚ್ಚಿನವರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೊಂದಿದ್ದು, ಕಂಪನಿಯು ತನ್ನ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಆಂಡ್ರಾಯ್ಡ್ ಆಟೋ ಆಯ್ಕೆಯೊಂದಿಗೆ ಕೊನೆಗೂ ನವೀಕರಿಸಿರುವುದು ಸ್ವಾಗತಾರ್ಹ ವಿಚಾರ ಎನ್ನಬಹುದು.

Most Read Articles

Kannada
English summary
Maruti Suzuki Updates SmartPlay Infotainment System.
Story first published: Tuesday, December 19, 2017, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X