ಮಾರುತಿ ಸುಜುಕಿಯಿಂದ ಗ್ರಾಹಕರಿಗೆ ಮಾನ್ಸೂನ್ ಆಫರ್- ಇಂದಿನಿಂದ ಕಾರು ಚೆಕ್ ಅಪ್ ಶಿಬಿರ ಶುರು
ದೇಶಾದ್ಯಂತ ಮಾನ್ಸೂನ್ ಆರಂಭವಾಗಿದ್ದು, ಈ ಹಿನ್ನೆಲೆ ತನ್ನ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಇಂದಿನಿಂದಲೇ ಉಚಿತ ಕಾರು ಚೆಕ್ ಅಪ್ ಶಿಬಿರವನ್ನು ಹಮ್ಮಿಕೊಂಡಿದೆ.
ದೇಶಾದ್ಯಂತ ಮಾನ್ಸೂನ್ ಆರಂಭವಾಗಿದ್ದು, ಈ ಹಿನ್ನೆಲೆ ತನ್ನ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಇಂದಿನಿಂದಲೇ ಉಚಿತ ಕಾರು ಚೆಕ್ ಅಪ್ ಶಿಬಿರವನ್ನು ಹಮ್ಮಿಕೊಂಡಿದೆ.

ಗ್ರಾಹಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಭಾರತೀಯರ ಮನಗೆದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಉಚಿತ ಸೌಲಭ್ಯವನ್ನು ನೀಡುವ ಮೂಲಕ ಕಾರುಗಳ ಸ್ಥಿತಿಗತಿಗಳ ಬಗ್ಗೆ ಗಮನಹರಿಸುತ್ತಿದೆ.

ದೇಶದ ವಿವಿಧ ನಗರಗಳಲ್ಲಿ ನಡೆಯಲಿರುವ ಮಾರುತಿ ಸುಜಕಿ ಉಚಿತ ಕಾರು ಚೆಕ್ ಅಪ್ ಶಿಬಿರವು ಬೆಂಗಳೂರಿನಲ್ಲಿ ಕೂಡಾ ನಡೆಯಲಿದ್ದು, ಇಂದಿನಿಂದ ಶುರುವಾಗಲಿರುವ ಶಿಬಿರವು 28ರ ತನಕ ನಡೆಯಲಿದೆ.

ದೇಶಾದ್ಯಂತ ಮಾರುತಿ ಸುಜುಕಿ 2 ಸಾವಿರ ಡೀಲರ್ಸ್‌ಗಳಿದ್ದು, ಆಯಾ ನಗರಗಳಲ್ಲಿರುವ ಕಾರು ಶೋರಂಗಳ ಆವರಣದಲ್ಲೇ ಕಾರು ಚೆಕ್ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಕಾರು ಚೆಕ್ ಅಪ್ ಮಾತ್ರ ಉಚಿತವಾಗಿರಲಿದ್ದು, ಮಾರುತಿ ಉತ್ಪಾದಿತ ಬಿಡಿಭಾಗಗಳು ಮತ್ತು ಲೆಬರ್ ಚಾರ್ಜ್‌ಗಳ ಮೇಲೆ ರಿಯಾಯ್ತಿ ಕೂಡಾ ದೊರೆಯಲಿದೆ.

ಉಚಿತ ಕಾರು ಚೆಕ್ ಅಪ್ ಶಿಬಿರದಲ್ಲಿ ಖ್ಯಾತ ಆಟೋ ಮೊಬೈಲ್ ತಂತ್ರಜ್ಞರು ಭಾಗಿಯಾಗಲಿದ್ದು, ಯಾವುದೇ ಶುಲ್ಕವಿಲ್ಲದೇ ಮಾರುತಿ ಸುಜುಕಿ ಗ್ರಾಹಕರಿಗೆ ಅಗತ್ಯ ಮಾಹಿತಿಯನ್ನು ನೀಡಲಿದ್ದಾರೆ. ಹೀಗಾಗಿ ಮಾರುತಿ ಸುಜುಕಿ ಕಾರುಗಳ ಯಾವುದೇ ರೀತಿಯ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ.

ಒಂದು ವೇಳೆ ನೀವು ಕೂಡಾ ಮಾರುತಿ ಸುಜುಕಿ ಗ್ರಾಹಕರಾಗಿದ್ದಲ್ಲಿ ಉಚಿತ ಕಾರು ಚೆಕ್ ಶಿಬಿರದಲ್ಲಿ ಭಾಗಿಯಾಗಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಮಾರುತಿ ಸುಜುಕಿ ಕಾರು ಡೀಲರ್ಸ್‌ಗಳನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.


Click it and Unblock the Notifications