ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

Written By:

ಮಾರುತಿ ಸುಜುಕಿ ಕಾರುಗಳ ಅಧಿಕೃತ ಮಾರಾಟ ಮಳಿಗೆ ನೆಕ್ಸಾ ಶೋರಂನಲ್ಲಿ ಮೊದಲ ಬಾರಿಗೆ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭವಾಗಿದ್ದು, ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಸೇವಗಳು ಲಭ್ಯವಾಗಲಿವೆ.

ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

ಸ್ಟ್ಯಾಂಡರ್ಡ್ ಸರ್ವಿಸ್ ಸೆಂಟರ್‌ಗಳಿಂತಲೂ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ನೀಡುವಂತಹ ಪ್ರಿಮಿಯಂ ಸರ್ವಿಸ್ ಕೇಂದ್ರವನ್ನು ಪ್ರಾರಂಭ ಮಾಡಿರುವ ಮಾರುತಿ ಸುಜುಕಿಯು ಸದ್ಯ ವಾಹನಗಳ ಬೀಡಿಭಾಗಗಳ ಸೇವೆಯ ಅವಧಿಯನ್ನು ಮಿತಗೊಳಿಸಲಿದೆ.

ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

ಪ್ರಿಮಿಯಂ ಸರ್ವಿಸ್ ಸೆಂಟರ್‌ ಹಾಗೂ ಸ್ಟ್ಯಾಂಡರ್ಡ್ ಸರ್ವಿಸ್ ಸೆಂಟರ್‌ಗಳಿಗೆ ಹೋಲಿಕೆ ಮಾಡಿದರೆ ಪ್ರಿಮಿಯಂ ಸೆಂಟರ್‌ಗಳಲ್ಲಿ ಶೇ.50 ಸಮಯ ಉಳಿತಾಯವಾಗಲಿದ್ದು, ಸುಧಾರಿತ ತಂತ್ರಜ್ಞಾನಗಳ ಸಹಾಯದೊಂದಿಗೆ ಸೇವೆಗಳು ಲಭ್ಯವಾಗುತ್ತವೆ.

ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

ಪ್ರಿಮಿಯಂ ಸರ್ವಿಸ್ ಸೆಂಟರ್‌ಗಳಿಂದ ಕಾರು ಮಾರಾಟಕ್ಕೆ ಮತ್ತಷ್ಟು ಅನುಕೂಲಕರವಾಗಲಿದ್ದು, ಗ್ರಾಹಕರಿಗೂ ಕೂಡಾ ಅತ್ಯಂತ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಸೇವೆಗಳು ದೊರೆಯುವುಲ್ಲಿ ಯಾವುದೇ ಅನುಮಾನಲವಿಲ್ಲ.

Recommended Video - Watch Now!
2017 Datsun redi-GO 1.0 Litre Launched In India - DriveSpark
ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

ಸದ್ಯ ದೆಹಲಿ ಬಳಿಯ ಗುರು‌ಗ್ರಾಮ್‌ನಲ್ಲಿ ಮೊದಲ ಪ್ರಿಯಿಯಂ ಸರ್ವಿಸ್ ಸೆಂಟರ್ ಪ್ರಾರಂಭವಾಗಿದ್ದು, ಮಾರುತಿ ಸುಜುಕಿ ಉತ್ಪಾದಿತ ಕಾರುಗಳಷ್ಟೇ ಅಲ್ಲದೇ ಇತರೆ ಕಾರು ಉತ್ಪಾದನಾ ಕಂಪನಿಗಳ ಉತ್ಪನ್ನಗಳಿಗೂ ಇಲ್ಲಿ ಸೇವೆಗಳು ದೊರೆಯಲಿವೆ.

ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

ಇದಕ್ಕಾಗಿ ಮೈ ನೆಕ್ಸಾ ಆ್ಯಪ್ ಕೂಡಾ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಆಟೋಮೊಬೈಲ್‌ಗೆ ಸಂಬಂಧಿತ ಸೇವೆಗಳಿಗಾಗಿ ಮುಂಗಡವಾಗಿ ಬುಕ್ ಕೂಡಾ ಮಾಡಬಹುದಾಗಿದ್ದು, ತ್ವರಿತಗತಿಯಲ್ಲಿ ಸೇವೆಗಳು ಪಡೆಯಬಹುದಾಗಿದೆ.

ನೆಕ್ಸಾ ಪ್ರಿಮಿಯಂ ಸರ್ವಿಸ್ ಸೆಂಟರ್ ಪ್ರಾರಂಭಿಸಿದ ಮಾರುತಿ ಸುಜುಕಿ

ಡ್ರೈವ್‌ ಸ್ಪಾರ್ಕ್ ಅಭಿಪ್ರಾಯ

ತ್ವರಿತಗತಿಯ ಆಟೋ ಸೇವೆಗಳಿಗೆ ಪ್ರಿಮಿಯಂ ಸರ್ವಿಸ್ ಸೆಂಟರ್‌ಗಳು ಸಹಕಾರಿಯಾಗಲಿದ್ದು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಿದ್ಧಪಡಿಸಿರುವ ಯೋಜನೆ ಮಹತ್ವದ್ದಾಗಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲೂ ಪ್ರಿಮಿಯಂ ಸರ್ವಿಸ್ ಸೆಂಟರ್‌ಗಳು ಲಭ್ಯವಾಗುವ ಸಾಧ್ಯತೆಗಳಿವೆ.

English summary
Read in Kannada about Maruti Suzuki Launches Nexa Premium Service Centre.
Story first published: Thursday, July 27, 2017, 13:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark