ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

Written By:

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ವಿವಿಧ ಮಾದರಿಯ ಕಾರುಗಳನ್ನು ಪರಿಚಯಿಸುತ್ತಿದ್ದು, ಈ ಹಿನ್ನೆಲೆ ದೇಶಿಯ ಉತ್ಪಾದನೆಗೆ ಹೆಚ್ಚಿನ ಮಹತ್ವದ ಸಿಕ್ಕಿದೆ.

To Follow DriveSpark On Facebook, Click The Like Button
ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಗಳು ಮುಂದಿನ ಕಾರು ಮಾದರಿ ಉತ್ಪಾದನೆ ಕುರಿತಂತೆ ಮಹತ್ವದ ಸುಳಿವು ನೀಡಿದ್ದು, 2020ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನೇ ಬಿಡುಗಡೆ ಮಾಡಲಿದೆ.

ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

ಇಷ್ಟು ದಿನಗಳ ಕಾಲ ಪ್ರತಿಯೊಂದು ಕಾರು ಮಾದರಿಯ ಕೂಡಾ ಜಪಾನ್‌ನಲ್ಲಿರುವ ಆರ್‌ಡಿ ವಿಭಾಗದಿಂದಲೇ ಸಿದ್ಧಗೊಂಡ ನಂತರ ಭಾರತದಲ್ಲಿ ಅಂತಿಮ ಹಂತದ ರೂಪ ನೀಡಲಾಗುತ್ತಿತ್ತು. ಆದ್ರೆ ಇನ್ಮುಂದೆ ಪೂರ್ಣ ಪ್ರಮಾಣದಲ್ಲಿ ದೇಶಿಯ ಉತ್ಪಾದನೆ ಕೈಗೊಳ್ಳಲಿದೆ.

ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

ಇದಕ್ಕಾಗಿಯೇ ದೆಹಲಿ ಬಳಿಯ ರೋಹ್ಟಕ್‌ನಲ್ಲಿ ಹೊಸದೊಂದು ಆರ್‌ಡಿ ಉತ್ಪಾದನಾ ಘಟಕ ಆರಂಭಿಸಿರುವ ಮಾರುತಿ ಸುಜುಕಿ, ಇಲ್ಲಿಂದಲೇ ಮುಂಬರುವ ಕಾರುಗಳ ಮಾದರಿಗಳಿಗೆ ಎಂಜಿನ್ ಪೂರೈಕೆ ಮಾಡಲಿದೆ.

ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

ಹೀಗಾಗಿ ಮಾರುತಿ ಸುಜುಕಿ ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ಆಲ್ಟೋ, ವ್ಯಾಗನರ್ ಮತ್ತು ಕ್ರಾಸ್ ಹೈಕರ್ ಭಾರತದಲ್ಲೇ ನಿರ್ಮಾಣದಲ್ಲಿದ್ದು, ಮೇಕ್ ಇನ್ ಇಂಡಿಯಾ ಅಭಿಯಾನದಡಿ ದೇಶಿಯ ಉತ್ಪಾದನೆಗೆ ಸಹಕಾರ ನೀಡಲಾಗುತ್ತಿದೆ.

ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

ಹೊಸ ಯೋಜನೆಯೂ 2018ರಿಂದಲೇ ಕಾರ್ಯರೂಪಕ್ಕೆ ಬರಲಿದ್ದು, 2022ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ದೇಶಿಯ ಉತ್ಪಾದಿತ ಕಾರುಗಳನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಲಿದೆ. ಹೀಗಾಗಿ ಸ್ಥಳೀಯ ಉದ್ಯೋಗ ಅವಕಾಶಗಳು ಹೆಚ್ಚುವ ನೀರಿಕ್ಷೆಯಿದೆ.

ಭಾರತದಲ್ಲೇ ನಿರ್ಮಾಣವಾಗಲಿವೆ ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪೂರಕವಾಗಿ ಹೊಸ ಯೋಜನೆ ಕೈಗೊಂಡಿರುವ ಮಾರುತಿ ಸುಜುಕಿಯು ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಹಿನ್ನೆಲೆ ಬೆಲೆಗಳು ಕೂಡಾ ಇಳಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

English summary
Read in Kannada about Maruti Suzuki’s Next Car To Be Developed In India.
Story first published: Wednesday, August 9, 2017, 13:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark