ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

Written By:

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿರುವ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಮಾರುತಿ ಸುಜುಕಿ ತನ್ನ ಎಲ್ಲ ಮಾದರಿಗಳಲ್ಲೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಆವೃತ್ತಿಗಳನ್ನು ಉತ್ಪಾದಿಸುವ ಪ್ರಮುಖ ನಿರ್ಣಯ ಕೈಗೊಂಡಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೇ ಸ್ಥಾನ ಹೊಂದಿರುವ ಮಾರುತಿ ಸುಜುಕಿ ಸಂಸ್ಥೆಯು, ತನ್ನ ಎಲ್ಲಾ ಕಾರು ಮಾದರಿಗಳಲ್ಲೂ ಇನ್ಮುಂದೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಕಲ್ಪಿಸಲಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಈಗಾಗಲೇ ಮಾರುತಿ ಸುಜುಕಿಯ ಪ್ರಮುಖ ಮಾದರಿಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, ಮುಂಬರುವ ಪ್ರತಿ ಮಾದರಿಯಲ್ಲೂ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಮಾದರಿ ಕೂಡಾ ಲಭ್ಯವಾಗಲಿವೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಮಾರುತಿ ಸುಜುಕಿ ಉತ್ಪಾದಿತ ಹಲವು ಮಾದರಿಯ ಕಾರುಗಳಲ್ಲಿ ಕೇವಲ ಮ್ಯಾನುವಲ್ ವ್ಯವಸ್ಥೆಯಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿರುವ ಕಾರುಗಳಿಗೂ ಹೆಚ್ಚಿನ ಬೇಡಿಕೆ ಬರುತ್ತಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಸದ್ಯ ವಾರ್ಷಿಕವಾಗಿ 94 ಸಾವಿರ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರುಗಳನ್ನು ಮಾರಾಟಗೊಳಿಸುತ್ತಿರುವ ಮಾರುತಿ ಸುಜುಕಿ, ಮುಂಬರುವ ದಿನಗಳಲ್ಲಿ 1.50 ಲಕ್ಷ ಕಾರು ಮಾರಾಟ ಗುರಿ ಹೊಂದಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಇದಕ್ಕಾಗಿ ಕೆಲವು ಮಾರುತಿ ಸುಜುಕಿ ಮಾದರಿಗಳನ್ನು ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಉತ್ಪಾದನೆ ಕೈಗೊಳ್ಳಬೇಕಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಹೊಸ ಯೋಜನೆ ಕುರಿತಂತೆ ಮಾತನಾಡಿರುವ ಮಾರುತಿ ಸುಜುಕಿ ಹಿರಿಯ ಅಧಿಕಾರಿ ಸಿ.ವಿ.ರಾಮನ್, ಮುಂಬರುವ ಮಾದರಿಗಳು ಟು ಪೆಡಲ್ ಟೆಕ್ನಾಲಜಿ ಜೊತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‌ಬಾಕ್ಸ್ ವ್ಯವಸ್ಥೆ ಹೊಂದಿರಲಿವೆ ಎಂದಿದ್ದಾರೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಇದರ ಜೊತೆ ಮುಂಬರುವ ಪ್ರತಿ ಕಾರು ಮಾದರಿಯಲ್ಲೂ ಸಿವಿಟಿ ಮತ್ತು ಎಟಿ ತಂತ್ರಜ್ಞಾನ ವ್ಯವಸ್ಥೆಯನ್ನು ಕೂಡಾ ಪರಿಚಯಿಸುವ ಬೃಹತ್ ಯೋಜನೆ ಹೊಂದಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

2020ರ ವೇಳೆಗೆ ಎಲ್ಲಾ ಮಾದರಿಗಳನ್ನು ಪರಿಷ್ಕರಣೆಗೊಳಿಸಲಿರುವ ಮಾರುತಿ ಸುಜುಕಿ ಸಂಸ್ಥೆಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

ಇನ್ಮುಂದೆ ಮಾರುತಿ ಸುಜುಕಿ ಎಲ್ಲ ಮಾದರಿಗಳಲ್ಲೂ ಸಿಗಲಿವೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್..!!

ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿರುವ ಮಾರುತಿ ಸುಜುಕಿ, ಪ್ರಸ್ತುತ ಮಾರುಕಟ್ಟೆಯಲ್ಲಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರುಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಸಜ್ಜುಗೊಳ್ಳುತ್ತಿದೆ.

English summary
Read in Kannada about Maruti Suzuki To Offer Automatic Gearbox Option On Most Models By 2020.
Story first published: Thursday, May 25, 2017, 14:32 [IST]
Please Wait while comments are loading...

Latest Photos