ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಆವೃತಿ ಭಾರತದಲ್ಲಿ ಅನಾವರಣ
ಭಾರತದ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕಂಪನಿಯು ತನ್ನ ಯಶಸ್ವಿ ಮಾದರಿಯಾದ ಎಸ್-ಕ್ರಾಸ್ ಕಾರಿನ ಫೇಸ್‌ಲಿಫ್ಟ್ ಆವೃತಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ.
ಭಾರತದ ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕಂಪನಿಯು ತನ್ನ ಯಶಸ್ವಿ ಮಾದರಿಯಾದ ಎಸ್-ಕ್ರಾಸ್ ಕಾರಿನ ಫೇಸ್‌ಲಿಫ್ಟ್ ಆವೃತಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಮಾರುತಿ ಸುಜುಕಿ ತನ್ನ ಹೊಸ ಎಸ್-ಕ್ರಾಸ್ ಕಾರನ್ನು ಭಾರತದಲ್ಲಿ ಪ್ರಾರಂಭಿಸಿದೆ. ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್ ಲಿಫ್ಟ್ ಕಾರು ರೂ. 8.49 ಲಕ್ಷ ಎಕ್ಸ್ ಶೋರೂಂ(ದೆಹಲಿ)ದರದಲ್ಲಿ ಲಭ್ಯವಿದೆ ಮತ್ತು ಉನ್ನತ ಮಾದರಿಯು ರೂ. 11.29 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್ ಲಿಫ್ಟ್ ಕಾರು, ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವಿವಿಧ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ ಹಾಗು ನೆಕ್ಸಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಈ ಕಾರಿನ ಮಾರಾಟವಾಗಲಿದೆ.

ನವೀನ ಮಾದರಿಯ ಎಸ್-ಕ್ರಾಸ್ ಹೊಸ ರೀತಿಯ ತಂತುಕೋಶ, ಪ್ರೊಜೆಕ್ಟರ್ ಹೆಡ್‌ಲೈಟ್, ಪರಿಷ್ಕರಿಸಿದ ಬಂಪರ್ ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಕ್ಲಸ್ಟರ್ ಟ್ವಿಕಡ್ ಮತ್ತು ಮರುವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬಂಪರ್ ಕಾಣಬಹುದಾಗಿದೆ.

ಈ ಹೊಸ ಮಾರುತಿ ಸುಜುಕಿ ಸಂಸ್ಥೆಯ ಈ ಫೇಸ್ ಲಿಫ್ಟ್ ಕಾರು ಹೊಸ ಮಿಶ್ರಲೋಹದ ಚಕ್ರಗಳು, ಸಂಯೋಜಿತ ತಿರುವು ಸೂಚಕಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಓಆರ್‌ವಿಎಂಗಳನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಈ ಕಾರಿನ ವಿನ್ಯಾಸವು ಈ ಹಿಂದಿನ ಮಾದರಿಗಿಂತ ಹೆಚ್ಚು ವಿಶೇಷತೆಗಳನ್ನು ಪಡೆದುಕೊಂಡಿದೆ.

| Maruti S-Cross Facelift Variants | Price |
| Sigma | Rs 8.49 Lakh |
| Delta | Rs 9.39 Lakh |
| Zeta | Rs 9.98 Lakh |
| Alpha | Rs 11.29 Lakh |

ಕಾರಿನ ಒಳಭಾಗವು ಹೆಚ್ಚು ಕ್ರೋಮ್ ಅಂಶಗಳ ಅಳವಡಿಕೆಯೊಂದಿಗೆ ಬರಲಿದ್ದು, ಕಾರಿನ ಡ್ಯಾಶ್‌ಬೋರ್ಡ್, ಸೀಟ್‌ಗಳು ಮತ್ತು ಉಪಕರಣಗಳು ಯಾವುದೇ ರೀತಿಯ ಬದಲಾವಣೆಗಳನ್ನು ಪಡೆದುಕೊಳ್ಳುವುದಿಲ್ಲ ಎನ್ನಬಹುದು.

ಇನ್ನು ಅಪ್ಡೇಟ್‌ಗೊಳಿಸಲಾದ ಈ ಪ್ರೀಮಿಯಂ ಕ್ರಾಸ್ಒವರ್ ಫೇಸ್‌ಲಿಫ್ಟ್ ಕಾರಿನಲ್ಲಿ ಹೊಸದಾಗಿ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ ಇರುವಂತಹ ಇನ್ಫೋಟೈನ್ಮೆಂಟ್ ಪರದೆ ವ್ಯವಸ್ಥೆ ನೋಡಬಹುದು.

ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರು 1.3-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಯಾಗಿದೆ. 5 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಸ್ಟ್ಯಾಂಡರ್ಡ್ ಆಯ್ಕೆಯಾಗಿದೆ ಮತ್ತು ಸ್ವಯಂಚಾಲಿತ ರೂಪಾಂತರವನ್ನು ಈ ಕಾರಿನಲ್ಲಿ ನೀಡಲಾಗಿಲ್ಲ ಹಾಗು ಮಾರುತಿ ಸುಜುಕಿ 1.6 ಲೀಟರ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ.

ಹೊಸ ಮಾರುತಿ ಎಸ್-ಕ್ರಾಸ್ ನೆಕ್ಸಾ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಕ್ಯಾಫೀನ್ ಬ್ರೌನ್, ಪ್ರೀಮಿಯಂ ಸಿಲ್ವರ್ ಮತ್ತು ಗ್ರಾನೈಟ್ ಗ್ರೇ ಎಂಬ ಐದು ಅದ್ಭುತ ಬಣ್ಣಗಳಲ್ಲಿ ಬಿಡುಗಡೆಯಾಗಿದೆ ಹಾಗು ಈ ಕಾರು ಹ್ಯುಂಡೈ ಕ್ರೆಟಾ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.


Click it and Unblock the Notifications