ವಿಟಾರಾ ಪ್ರಿಮಿಯಂ ಎಸ್‌ಯುವಿ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ
ನಂ.1 ಸ್ಥಾನದಲ್ಲಿರುವ ಕಾರು ಉತ್ಪಾದನಾ ದಿಗ್ಗಜ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಹೊಸ ನಮೂನೆಯ ಪ್ರಿಮಿಯಂ ವಿಟಾರಾ ಕಾರು ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಗಳು ಇಲ್ಲಿವೆ ಓದಿ.
ದೇಶಿಯ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿರುವ ಕಾರು ಉತ್ಪಾದನಾ ದಿಗ್ಗಜ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಹೊಸ ನಮೂನೆಯ ಪ್ರಿಮಿಯಂ ವಿಟಾರಾ ಕಾರು ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಗಳು ಇಲ್ಲಿವೆ ಓದಿ.

ಕಳೆದ 2 ದಶಕಗಳ ಅವಧಿಯಲ್ಲಿ ವಿವಿಧ ಕಾರು ಮಾದರಿಗಳ ಪರಿಚಯಿಸುವ ಮೂಲಕ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿಟಾರಾ ಪ್ರಿಮಿಯಂ ಎಸ್‌ಯುವಿ ಮಾದರಿಯನ್ನು ಸಿದ್ದಗೊಳಿಸಿದೆ.

ಹೀಗಾಗಿ ಮಾರುತಿ ಸುಜುಕಿ ಬಿಡುಗಡೆಗೊಳಿಸುತ್ತಿರುವ ವಿಟಾರಾ ಪ್ರಿಮಿಯಂ ಕಾರಿನ ಮೇಲೆ ಭಾರೀ ನೀರಿಕ್ಷೆಗಳನ್ನು ಇಟ್ಟುಕೊಳ್ಳಲಾಗಿದ್ದು, ಟಾಪ್ 10 ಎಸ್‌ಯುವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಪಡೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ.

ಹೀಗಾಗಿ ವಿಟಾರಾ ಪ್ರಿಮಿಯಂ ಎಸ್‌ಯುವಿ ಬಿಡುಗಡೆಗೆ ಎದರು ನೋಡುತ್ತಿರುವ ಮಾರುತಿ ಸುಜುಕಿಯು 2019ಕ್ಕೆ ಬಿಡುಗಡೆ ಮಾಡುವ ಇರಾದೆ ವ್ಯಕ್ತಪಡಿಸಿದ್ದು, ಬಹುನೀರಿಕ್ಷಿತ ವ್ಯಾಗನ್ ಆರ್ ಎಂಪಿವಿ ಆವೃತ್ತಿಯ ಬಿಡುಗಡೆ ಬಳಿಕವಷ್ಟೇ ವಿಟಾರಾ ಎಸ್‌ಯುವಿಯನ್ನು ಪರಿಚಯಿಸಲಿದೆ.

ಈ ಮೂಲಕ ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಟಾಟಾ ಹೆಕ್ಸಾ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ತವಕದಲ್ಲಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.6-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದರ ಜೊತೆಗೆ 6-ಸ್ಪಿಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಸುಧಾರಿತ ತಂತ್ರಜ್ಞಾನ ಮಾದರಿಯ ಸುರಕ್ಷಾ ವ್ಯವಸ್ಥೆಗಳೊಂದಿಗೆ ವಿಶಿಷ್ಠವಾದ ಒಳ ವಿನ್ಯಾಸಗಳು ಮತ್ತು ಹೊರ ವಿನ್ಯಾಸಗಳೊಂದಿಗೆ ಸಾಕಷ್ಟು ಗಮನಸೆಳೆಯುವಂತೆ ಅಭಿವೃದ್ಧಿಗೊಳಿಸಲಾಗುತ್ತಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಮತ್ತು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಪ್ರತಿ ಕಾರು ಮಾದರಿಯಲ್ಲೂ ಯಶಸ್ವಿ ಸಾಧಿಸುತ್ತಿದ್ದು, ಈ ಹಿನ್ನಲೆ ವಿಟಾರಾ ಎಸ್‌ಯುವಿಯಲ್ಲೂ ಮತ್ತೊಂದು ಮೈಲಿಗಲ್ಲು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications