ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

Written By:

ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆಗೆ ಸೃಷ್ಠಿಯಾಗುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸರ್ಕಾರದಿಂದ ಕೂಡಾ ವಿಶೇಷ ಪ್ರೋತ್ಸಾಹ ಕೂಡಾ ದೊರೆಯುತ್ತಿದೆ. ಈ ಹಿನ್ನೆಲೆ ಜಪಾನ್ ಮೂಲದ ಮಜ್ದಾ ವಿಶೇಷ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ.

ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

2030ರ ವೇಳೆಗೆ ದೇಶದಲ್ಲಿ ಶೇ.90ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಹಲವು ಕ್ರಮಕೈಗೊಳ್ಳುತ್ತಿದ್ದು, ಪರಿಣಾಮ ಪ್ರತಿಷ್ಠಿತ ಕಾರು ಉತ್ಪಾದಕರು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಆಸಕ್ತಿ ವಹಿಸುತ್ತಿದ್ದಾರೆ. ಜೊತೆಗೆ ಭವಿಷ್ಯದ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಕೂಡಾ ಮಾಡುತ್ತಿದ್ದಾರೆ.

ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

ಇದೀಗ ಮಜ್ದಾ ಕಾರು ಉತ್ಪಾದನಾ ಸಂಸ್ಥೆ ಕೂಡಾ ತನ್ನ ಎಲ್ಲಾ ಕಾರು ಮಾದರಿಗಳನ್ನು ಮುಂಬರುವ ದಿನಗಳಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಳಿಸುವ ಬಗ್ಗೆ ಸುಳಿವು ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರೋ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಹೊಸ ಉತ್ಪನ್ನಗಳನ್ನು ಪ್ರದರ್ಶನ ಮಾಡುವುದಾಗಿ ಹೇಳಿಕೊಂಡಿದೆ.

Recommended Video
2017 Mercedes New GLA India Launch Kannada - DriveSpark ಕನ್ನಡ
ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

ಹೊಸ ಯೋಜನೆಯೂ 2018ರ ಮೊದಲ ತ್ರೈಮಾಸಿಕ ವೇಳೆಗೆ ಆರಂಭಗೊಳಲಿದ್ದು, 2022ರ ವೇಳೆಗೆ ಮಜ್ದಾ ಎಲೆಕ್ಟ್ರಿಕ್ ಕಾರು ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಲಭ್ಯ ಇರಲಿವೆ ಎನ್ನಲಾಗಿದೆ.

ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

ಇದರ ಜೊತೆ 2021ಕ್ಕೆ ಹೈಬ್ರಿಡ್ ಕಾರು ಉತ್ಪಾದನೆಗೆ ಚಾಲನೆ ನೀಡಲಿರುವ ಮಜ್ದಾ ಸಂಸ್ಥೆಯು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಮೈಲೇಜ್‌ಗಿಂತ ಶೇ.30ರಿಂದ ಶೇ.40 ರಷ್ಟು ಹೆಚ್ಚುವರಿ ಮೈಲೇಜ್ ಸಾಮರ್ಥ್ಯದ ಎಂಜಿನ್ ಅಭಿವೃದ್ಧಿಗೊಳಿಸಲಿದೆ.

ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

ಇದಲ್ಲದೇ ಇತ್ತೀಚೆಗೆ ಸ್ವಯಂ ಚಾಲಿತ ಕಾರುಗಳ ಬಗೆಗೆಗೂ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಸ್ವಯಂ ಚಾಲಿತ ಕಾರುಗಳ ಅಭಿವೃದ್ದಿ ಬಗ್ಗೆಯೂ ಸುಳಿವು ನೀಡಿರುವ ಮಜ್ದಾ ಸಂಸ್ಥೆಯು ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯಕ್ಕೆ ಸನ್ನದ್ದಗೊಳ್ಳುತ್ತಿರುವುದು ಭಾರೀ ಚರ್ಚಗೆ ಕಾರಣವಾಗಿದೆ.

ಭವಿಷ್ಯದ ಯೋಜನೆಗಳ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಜ್ದಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವಿಶೇಷ ಉತ್ಪನ್ನಗಳ ಮೂಲಕ ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಮಜ್ದಾ ಕಾರುಗಳು ಮತ್ತೆ ಇದೀಗ ಎಲೆಕ್ಟ್ರಿಕ್ ಆವೃತ್ತಿಗಳ ಮೂಲಕ ಹೊಸ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ ಎಂದು ಹೇಳಬಹುದು.

English summary
Read in Kannada about Mazda To Electrify Its Product Portfolio By 2035.
Story first published: Thursday, September 7, 2017, 19:17 [IST]
Please Wait while comments are loading...

Latest Photos