Subscribe to DriveSpark

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

Written By:

ಮಾರುತಿ ಸುಜುಕಿ ದಕ್ಷಿಣ ಡೇರ್ ಮೊದಲನೇ ದಿನದ ಮುನ್ನಡೆಯ ನಂತರ, ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್ ಅವರು ಎರಡನೇ ದಿನವೂ ಪ್ರಮುಖ ಪಾತ್ರವಹಿಸಲು ಸಫಲರಾದರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ಜುಲೈ 16ರಿಂದ ಆರಂಭವಾಗಿರುವ ಮೊಬಿಲ್ ಒನ್ ಸಂಸ್ಥೆಯ ನೇತೃತ್ವದ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ‌ರ‍್ಯಾಲಿಯ ಎರಡನೇ ದಿನದ ಸ್ಪರ್ಧೆ ಕೊನೆಗೊಂಡಿದ್ದು, ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್ ಅವರು ಮಾರುತಿ ಸುಜುಕಿ ಜಿಪ್ಸಿ ಎರಡನೇ ಲೆಗ್ ಅನ್ನು 04:55:04 ಸಮಯದಲ್ಲಿ ಪೂರ್ಣಗೊಳಿಸಿದರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ರ‍್ಯಾಲಿ ಚಾಲಕರು ಮತ್ತು ಸವಾರರ ಕೌಶಲಗಳನ್ನು ಪರೀಕ್ಷಿಸುವ ಉದ್ದೇಶದಿಂದ ಸೂಪರ್ ವಿಶೇಷ ಹಂತದ ಪರಿಕಲ್ಪನೆಯನ್ನು ಕಳೆದ ವರ್ಷ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ‌ರ‍್ಯಾಲಿ ಪರಿಚಯಿಸಲಾಯಿತು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ‌ರ‍್ಯಾಲಿಯು ಎರಡನೇ ದಿನ ಚಿತ್ರದುರ್ಗದಲ್ಲಿ ನೆಡೆದಿದ್ದು, ನಗರದ ಸೂಪರ್ ವಿಶೇಷ ಹಂತ(ಎಸ್ಎಸ್ಎಸ್) ಮೂಲಕ ನೆಡೆದು ಬಂತು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ಜುಲೈ 18ರಂದು ಸೂಪರ್ ವಿಶೇಷ ಹಂತವು 2 ಕಿಲೋಮೀಟರ್ ಉದ್ದದ ಧೂಳು ಜಾಡಿನಲ್ಲಿ ನಡೆಯಿತು ಮತ್ತು ಮಾರುತಿ ಸುಜುಕಿಯ ಸುರೇಶ್ ರಾಣಾ ಮತ್ತು ಸಹ-ಚಾಲಕ ಅಶ್ವಿನ್ ನಾಯ್ಕ್ ತಮ್ಮ ಗ್ರ್ಯಾಂಡ್ ವಿಟರಾ ಕಾರಿನಲ್ಲಿ 04:58:13 ಅವಧಿಯಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ಸುರೇಶ್ ರಾಣಾ ಮತ್ತು ಸಹ-ಚಾಲಕ ಅಶ್ವಿನ್ ನಾಯ್ಕ್ ನಂತರದ ಸ್ಥಾನವನ್ನು ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಜಿಪ್ಸಿ ಮೂಲಕ 4:59:50 ಸಮಯದೊಂದಿಗೆ ಪೂರ್ಣಗೊಳಿಸಿದರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ಮೋಟರ್ ಸೈಕಲ್ ಸಾಮಾನ್ಯವಾಗಿ ಕಾರುಗಳಿಗಿಂತಲೂ ಕ್ಷಿಪ್ರವಾಗಿ ರೇಸ್ ಪೂರ್ಣಗೊಳಿಸಲಿದ್ದು, ಟಿ ನಟರಾಜ ಅಲ್ಟಿಮೇಟ್ ಬೈಕುಗಳ ವಿಭಾಗದಲ್ಲಿ 3:10:41 ಸಮಯದೊಂದಿಗೆ ಮೊದಲನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು ಮತ್ತು ಅಬ್ದುಲ್ ವಾಜೀದ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್

ರ‍್ಯಾಲಿಯ ಮುಂದಿನ ಹಂತವು ಜುಲೈ 19ರಂದು ಬೆಳಗಾವಿಯಲ್ಲಿ ಆರಂಭವಾಗಲಿದ್ದು, ಮತ್ತಷ್ಟು ನವೀಕರಣಗಳನ್ನು ಈ ಸ್ಥಳ ಪಡೆದುಕೊಳ್ಳಲಿದೆ. ಈಗಾಗಲೇ ಅತಿ ಹೆಚ್ಚು ಜನರನ್ನು ಆಕರ್ಷಿಸಿರುವ ಈ ರ‍್ಯಾಲಿ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಭೇಟಿ ಕೊಡಿ.

English summary
After leading the race on Day 1, Samrat Yadav and S N Nizami maintained the lead on the second day of the Maruti Suzuki Dakshin Dare too.
Story first published: Wednesday, July 19, 2017, 15:38 [IST]
Please Wait while comments are loading...

Latest Photos