ಟಾಟಾ ಮೋಟರ್ಸ್ ಸಂಸ್ಥೆಯ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರು ಯಾವುದು ಗೊತ್ತೆ ?
ಭಾರತದಲ್ಲಿ ತನ್ನದೇ ರೀತಿಯ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಟಾಟಾ ಮೋಟರ್ಸ್ ಸಂಸ್ಥೆಯು ಹೆಚ್ಚು ಹ್ಯಾಚ್ ಬ್ಯಾಕ್ ಕಾರು ಪ್ರಿಯ ಎನ್ನಬಹುದು, ಈ ಸಂಸ್ಥೆಯ ಸಾಕಷ್ಟು ಹ್ಯಾಚ್ ಬ್ಯಾಕ್ ಕಾರುಗಳು ಮನೆ ಮಾತಾಗಿವೆ.
ಭಾರತದಲ್ಲಿ ತನ್ನದೇ ರೀತಿಯ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಟಾಟಾ ಮೋಟರ್ಸ್ ಸಂಸ್ಥೆಯು ಹೆಚ್ಚು ಹ್ಯಾಚ್ ಬ್ಯಾಕ್ ಕಾರು ಪ್ರಿಯ ಎನ್ನಬಹುದು, ಈ ಸಂಸ್ಥೆಯ ಸಾಕಷ್ಟು ಹ್ಯಾಚ್ ಬ್ಯಾಕ್ ಕಾರುಗಳು ಮನೆ ಮಾತಾಗಿವೆ.

ಈ ಸಂಸ್ಥೆಯು ಹೊರತಂದಿರುವ ಕಾರುಗಳಲ್ಲಿ ಅತಿ ಹೆಚ್ಚು ಜನಪ್ರಿಯ ಹಾಚ್ ಬ್ಯಾಕ್ ಯಾವುದು ಎಂಬ ಚರ್ಚೆಗೆ ಈಗ ತೆರೆಬಿದ್ದಿದ್ದು, ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿರುವ ಟಾಟಾ ಮೋಟರ್ಸ್ ಸಂಸ್ಥೆಯ ಟಿಯೊಗೊ ಕಾರು ಈ ಸ್ಥಾನವನ್ನು ಪಡೆದುಕೊಂಡಿದ್ದು, ಈ ವಿಚಾರವನ್ನು ಕಂಪನಿ ಬಹಿರಂಗಪಡಿಸಿದೆ.

ಇತ್ತೀಚಿಗಷ್ಟೇ ಟಾಟಾ ಸಂಸ್ಥೆಯು ಗುಜರಾತ್‌ನಲ್ಲಿರುವ ತನ್ನ ಸನಾಂಡ್ ಕಾರ್ಖಾನೆಯಿಂದ 100,000 ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಹೊರ ತಂದಿದ್ದು, ಈ ಕಾರು ಕಂಪನಿಯ ಅದೃಷ್ಟವನ್ನು ಬದಲಾಯಿಸಿದ್ದು, ಟಿಯೊಗೊ ಕಾರಿನ ಮೂಲಕ ತನ್ನ ಸಾಮರ್ಥ್ಯವನ್ನು ಟಾಟಾ ಮೋಟರ್ಸ್ ತೋರ್ಪಡಿಸಿದೆ ಎನ್ನಬಹುದು.

ಹಾಗಾದ್ರೆ, ಟಾಟಾ ಮೋಟರ್ಸ್ ಸಂಸ್ಥೆಯ ಈ ಜನಪ್ರಿಯವಾದ ಹ್ಯಾಚ್‌ಬ್ಯಾಕ್ ಕಾರು ಯಾವೆಲ್ಲ ಅಂಶಗಳನ್ನು ಟಿಯಾಗೊ ಕಾರು ಪಡೆದುಕೊಂಡಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ತಿಳಿದುಕೊಳ್ಳೋಣ ಬನ್ನಿ.

ಟಾಟಾ ಮೋಟಾರ್ಸ್ ಸಂಸ್ಥೆಯ ಹೊಸ ಇಂಪ್ಯಾಕ್ಟ್ ವಿನ್ಯಾಸ ತತ್ವಶಾಸ್ತ್ರವು ಹೆಕ್ಸಾ, ಟಿಗೋರ್ ಕಾಂಪ್ಯಾಕ್ಟ್ ಸೆಡಾನ್ ಮತ್ತು ಹೊಸದಾಗಿ ಬಿಡುಗಡೆಯಾದ ನೆಕ್ಸನ್ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಈಗಾಗಲೇ ಅಳವಡಿಕೆಯಾಗಿದ್ದು, ಟಿಯೊಗೊ ಕಾರಿನಲ್ಲಿ ಮುಂದುವರೆಸುವ ಮೂಲಕ ಕಾರಿನ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು.
Recommended Video


ಆಧುನಿಕ ತಂತ್ರಜ್ಞಾನ, ತಾಜಾ ವಿನ್ಯಾಸ ವಿಧಾನ ಮತ್ತು ಟಾಟಾ ಮೋಟಾರ್ಸ್‌ನ ಹೊಸ ವಿನ್ಯಾಸ ತತ್ವವು ತನ್ನ ವಾಹನಗಳಿಗೆ ಸೊಗಸಾದ ಸ್ಪರ್ಶವನ್ನು ನೀಡಿದೆ. ಹಿಂದಿನ ಕೆಲವು ಟಾಟಾ ಕಾರುಗಳಿಗೆ ಹೋಲಿಸಿದರೆ ಈ ಕಾರುಗಳು ತೀಕ್ಷ್ಣ ಮತ್ತು ಚಿಸೆಲ್ಲೆಡ್ ಅಂಶಗಳನ್ನು ಪಡೆದುಕೊಂಡಿದೆ.

ಕಾರಿನ ಹೊರಭಾಗದಲ್ಲಿಲ್ಲ ಅಲ್ಲದೆ, ಒಳಭಾಗದಲ್ಲಿಯೂ ಸಹ ಪ್ರೀಮಿಯಂ ಅನುಭವವನ್ನು ಈ ಕಾರು ನೀಡಲಿದ್ದು,ಉತ್ತಮ ರೀತಿಯ ಕ್ಯಾಬಿನ್ ಸ್ಥಳ, ಹರ್ಮನ್ ಮ್ಯೂಸಿಕ್ ಸಿಸ್ಟಮ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಪರದೆ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಜೆಬಿಎಲ್ ಸ್ಪೀಕರ್‌ಗಳು ನೋಡಬಹುದಾಗಿದೆ,

ಟಾಟಾ ಮೋಟರ್ಸ್ ಕಾರುಗಳನ್ನು ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ಬೆಲೆ ನಿಗದಿ ಮಾಡುವಲ್ಲಿ ಯಶಸ್ವಿಯಾಗಿದ್ದು, ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಸಂಸ್ಥೆಯ ಸೆಲೆರಿಯೊ ಅಥವಾ ಹ್ಯುಂಡೈ ಐ10 ಕಾರುಗಳಿಗೆ ಹೋಲಿಸಿದರೆ ಈ ಹೆಚ್ಚು ಅಗ್ಗದ ಬೆಲೆ ಪಡೆದುಕೊಂಡಿದೆ ಎನ್ನಬಹುದು.

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಎಲ್ಲಾ ವಾಹನಗಳಿಗೆ ಹೋಲಿಸಿದರೆ, ಈ ಕಾರು ಯುವ ಖರೀದಿದಾರರನ್ನು ಹೆಚ್ಚು ಸೆಳೆಯಲು ಯಶಸ್ವಿಯಾಗಿದ್ದು, ಯುವಕರ ಮನಸ್ಸನ್ನು ಗಮನದಲ್ಲಿಟ್ಟುಕೊಂಡು ತಯಾರು ಮಾಡಲಾಗಿರುವ ಈ ಕಾರು ಹೊಸ ವರ್ಗವನ್ನು ಸೃಷ್ಟಿ ಮಾಡಿದೆ ಎಂದರೆ ತಪ್ಪಿಲ್ಲ.


Click it and Unblock the Notifications








