ಅಳಿದುಳಿದ ವಸ್ತುಗಳಿಂದ ತಯಾರಾಯಿತು ಎಲೆಕ್ಟ್ರಿಕ್ ಕಾರು

ನಾಗ್ಪುರದ 19 ವರ್ಷದ ಬಾಲಕನೊಬ್ಬ ಹಳೆಯ ಪ್ಲಾಸ್ಟಿಕ್ ಡ್ರಮ್ ಮತ್ತು ಬಕೆಟ್‌ಗಳ ಸಹಾಯದಿಂದ ಎಲೆಕ್ಟ್ರಿಕ್ ಕಾರು ನಿರ್ಮಿಸಲು ಯಶಸ್ವಿಯಾಗಿದ್ದಾನೆ. ಈ ಉಪಯುಕ್ತ ಮಾಹಿತಿ ಬಗ್ಗೆ ಇಲ್ಲಿದೆ ಮಾಹಿತಿ.

By Girish

ಹೌದು, ಟಮಾಲೆ ಎಂಬ ಹೆಸರಿನ ಯುವಕನೊಬ್ಬ ಆಟೋಮೊಬೈಲ್ ಕ್ಷೇತ್ರದ ಯಾವುದೇ ರೀತಿಯ ಹಿಂದಿನ ಅನುಭವ ಮತ್ತು ಅಥವಾ ಎಂಜಿನಿಯರಿಂಗ್ ಹಿನ್ನೆಲೆಯನ್ನು ಹೊಂದಿಲ್ಲದಿದ್ದರೂ ಸಹ ಈ ವಿಶೇಷ ಸಾಧನೆ ಮಾಡಿರುವುದು ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸಿದೆ.

ಅಳಿದುಳಿದ ವಸ್ತುಗಳಿಂದ ತಯಾರಾಯಿತು ಎಲೆಕ್ಟ್ರಿಕ್ ಕಾರು

ಪ್ರಸ್ತುತ ಪುಣೆಯಲ್ಲಿ ಅಧ್ಯಯನ ಮಾಡುತ್ತಿರುವ 19 ವರ್ಷ ವಯಸ್ಸಿನ ಈ ಯುವಕ, ಸ್ವತಃ ತಾನೇ ಈ ಕಾರ್ಯಕ್ಕೆ ತನ್ನ ಸ್ವಂತ ಹಣವನ್ನು ಖರ್ಚು ಮಾಡಿ ಈ ಸಾಹಸಕ್ಕೆ ಕೈಹಾಕಿದ್ದು ವಿಶೇಷ ಎನ್ನಬಹುದು.

ಅಳಿದುಳಿದ ವಸ್ತುಗಳಿಂದ ತಯಾರಾಯಿತು ಎಲೆಕ್ಟ್ರಿಕ್ ಕಾರು

ಟಮಾಲೆ 14 ವರ್ಷದವನಿದ್ದಾಗ ಬೈಸಿಕಲ್ ಬಳಸಿಕೊಂಡು ಮೊಬೈಲ್ ಚಾರ್ಜ ಮಾಡುವ ಬಗ್ಗೆ ಅನ್ವೇಷಣೆ ಮಾಡಿ ಯಶಸ್ವಿಯೂ ಆಗಿದ್ದರು, ಎಂಬ ವಿಚಾರ ಅಚ್ಚರಿ ಮೂಡಿಸದೆ ಇರಲಾರದು.

ಅಳಿದುಳಿದ ವಸ್ತುಗಳಿಂದ ತಯಾರಾಯಿತು ಎಲೆಕ್ಟ್ರಿಕ್ ಕಾರು

ಹೆಚ್ಚು ಕಡಿಮೆ ಒಂದು ತಿಂಗಳ ಸಮಯವನ್ನು ವಿನಿಯೋಗಿಸಿ ಟಮಾಲೆ ಅವರು ಈ ಪ್ಲಾಸ್ಟಿಕ್ ಡ್ರಮ್ ಮತ್ತು ಬಕೆಟ್‌ಗಳ ಸಹಾಯದಿಂದ ಚಲಿಸುವ 'ಹಿರ್ಕನಿ' ಎಂಬ ಹೆಸರಿನ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ್ದಾರೆ.

ಅಳಿದುಳಿದ ವಸ್ತುಗಳಿಂದ ತಯಾರಾಯಿತು ಎಲೆಕ್ಟ್ರಿಕ್ ಕಾರು

ಉಪಯೋಗಕ್ಕೆ ಬಾರದ ಕಬ್ಬಿಣದ ಸರಳುಗಳ ಸಹಾಯದಿಂದ ವಿದ್ಯುತ್ ಕಾರಿನ ಚಾರ್ಸಿ ತಯಾರಿಸಲಾಗಿದ್ದು, ಪ್ಲಾಸ್ಟಿಕ್ ಡ್ರಮ್‌ನಿಂದ ಕಾರಿನ ಬಾನೆಟ್ ನಿರ್ಮಿಸಲಾಗಿದೆ. ಇನ್ನು, ಪ್ಲಾಸ್ಟಿಕ್ ಬಕೆಟ್‌ಗಳನ್ನು ಮುಂಭಾಗದ ಸೀಟುಗಳನ್ನಾಗಿ ಮಾರ್ಪಾಡು ಮಾಡಲಾಗಿದೆ ಹಾಗು ಆಸನಗಳನ್ನು ಹತ್ತಿರ ಸಾಮಗ್ರಿಗಳನ್ನು ಇಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.

ಅಳಿದುಳಿದ ವಸ್ತುಗಳಿಂದ ತಯಾರಾಯಿತು ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿ ಮತ್ತು 150 ಕಿ.ಮೀಗಳ ಪ್ರವಾಸದಲ್ಲಿ ಎಲ್ಲಿಯೂ ಸಹ ರೀಚಾರ್ಜ್ ಮಾಡದೆ ಗುರಿ ತಲುಪಿರುವುದು ಖುಷಿಯ ವಿಚಾರವೇ ಸರಿ. ಆದಷ್ಟು ಬೇಗ ಈ ರೀತಿಯ ಪ್ರಯತ್ನಗಳಿಗೆ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ಸಿಗುವಂತಗಾಗಲಿ ಎಂಬುದು ಡ್ರೈವ್ ಸ್ಪಾರ್ಕ್ ಆಶಯವಾಗಿದೆ.

Most Read Articles

Kannada
English summary
Eco-friendly cars are good news, and the same built from scrap raises eyebrows. Onkar Talmale, a 19-year-old boy from Nagpur, has managed to build an electric car from an old plastic drum and buckets.
Story first published: Monday, August 21, 2017, 19:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X