ಬಿಡುಗಡೆಗೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

Written By:

ಮಧ್ಯಮ ಗಾತ್ರದ ಐಷಾರಾಮಿ ಕಾರು ಆವೃತ್ತಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಬಿಎಂಡಬ್ಲ್ಯು ಸಂಸ್ಥೆಯು 2018ಕ್ಕೆ ತನ್ನ ಬಹುನೀರಿಕ್ಷಿತ ಎಕ್ಸ್2 ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಕುರಿತಾದ ಅಧಿಕೃತ ಮಾಹಿತಿ ಬಹಿರಂಗಗೊಳಿಸಲಾಗಿದೆ.

To Follow DriveSpark On Facebook, Click The Like Button
ಬಿಡುಗಡೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

ನಗರ ಪ್ರದೇಶಗಳ ಗ್ರಾಹಕರಿಗೆ ದಿನನಿತ್ಯದ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಎಕ್ಸ್2 ಆವೃತ್ತಿಯನ್ನು ಸಿದ್ಧಗೊಳಿಸಿರುವ ಬಿಎಂಡಬ್ಲ್ಯು, 2018ರ ನವೆಂಬರ್ ಅಂತ್ಯಕ್ಕೆ ಭಾರತ ಸೇರಿದಂತೆ ಜಾಗತಿಕ ಮಟ್ಟದ ವಿವಿಧ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಿದೆ.

ಬಿಡುಗಡೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

ಈ ಹಿನ್ನೆಲೆ ಎಕ್ಸ್2 ಆವೃತ್ತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿನ್ಯಾಸ ನೀಡುವ ನಿಟ್ಟಿನಲ್ಲಿ ಹೊಸ ಕಾರಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಬಿಎಂಡಬ್ಲ್ಯು, ಪ್ರಸಕ್ತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗಳನ್ನು ಆಲಿಸಲು ಮುಂದಾಗಿದೆ.

ಬಿಡುಗಡೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

ಇನ್ನು ಈ ಹಿಂದೆ 2016ರ ಪ್ಯಾರಿಸ್ ಆಟೋ ಎಕ್ಸ್ ಪೋದಲ್ಲೂ ಎಕ್ಸ್ 2 ಕಾರು ಪ್ರದರ್ಶನಗೊಳಿಸುವ ಮೂಲಕ ಆಟೋ ಉತ್ಪಾದಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಬಿಎಂಡಬ್ಲ್ಯು, ಅತ್ಯುತ್ತಮ ಹೊರ ವಿನ್ಯಾಸಗಳನ್ನು ನೀಡಿರುವುದು ಮತ್ತೊಂದು ವಿಶೇಷ.

ಬಿಡುಗಡೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

ಜೊತೆಗೆ ಎಕ್ಸ್2 ಆವೃತ್ತಿಯನ್ನು ಸ್ಪೋರ್ಟ್ ಲುಕ್‌ನೊಂದಿಗೆ ಅಭಿವೃದ್ಧಿ ಮಾಡಲಾಗಿದ್ದು, ಈ ಹಿಂದಿನ ಎಕ್ಸ್ 4 ಮತ್ತು ಎಕ್ಸ್6 ಆವೃತ್ತಿಗಿಂತಲೂ ಉನ್ನತ ಮಟ್ಟದ ವಿನ್ಯಾಸಗಳನ್ನು ಕೈಗೊಳ್ಳಲಾಗಿದೆ.

ಬಿಡುಗಡೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

ಇನ್ನು ಎಂಜಿನ್ ವಿಚಾರಕ್ಕೆ ಬಂದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಎಕ್ಸ್2 ಲಭ್ಯವಿರಲಿದ್ದು, 114 ಮತ್ತು 230 ಬಿಎಚ್‌ಪಿ ಉತ್ಪಾದಿಸಲಿವೆ ಎನ್ನಲಾಗಿದೆ. ಜೊತೆಗೆ ಆಲ್ ವೀಲ್ಹ್ ಡ್ರೈವ್ ಆಯ್ಕೆ ಕೂಡಾ ಇರಲಿದ್ದು, ಕಾರಿನ ಆಯ್ಕೆ ಮೇರೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಲಭ್ಯವಾಗಲಿವೆ.

ಬಿಡುಗಡೆ ಸಜ್ಜುಗೊಂಡ 2018ರ ಬಿಎಂಡಬ್ಲ್ಯು ಎಕ್ಸ್2 ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್1, ಎಕ್ಸ್3, ಎಕ್ಸ್4, ಎಕ್ಸ್5 ಮತ್ತು ಎಕ್ಸ್6 ಸರಣಿಗಳು ಚಾಲ್ತಿಯಲ್ಲಿದ್ದು, ತನ್ನ ಮಹತ್ವದ ಕಾರು ಸರಣಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಕ್ಸ್2 ಆವೃತ್ತಿಯು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ವಿಶೇಷ.

English summary
Read in Kannada about 2018 BMW X2 Official Images Revealed.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark