ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಜರ್ಮನ್ ವಾಹನ ತಯಾರಕ ಕಂಪೆನಿಯಾದ ಆಡಿ 2016ರಲ್ಲಿ ನೆಡೆದ ಪ್ಯಾರಿಸ್ ಮೋಟಾರ್ ಪ್ರದರ್ಶನದಲ್ಲಿ ಹೊಸ ಪೀಳಿಗೆಯ ಕ್ಯೂ5 ಅನಾವರಣಗೊಳಿಸಿತು. ಕಂಪೆನಿಯು ಈ ಕಾರನ್ನು ಭಾರತದಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ ಎನ್ನಲಾಗಿದೆ.

By Girish

ಭಾರತದಲ್ಲಿ ಮಾರಾಟಗಾರರ ಸ್ಟಾಕ್‌ಯಾರ್ಡ್‌ನಲ್ಲಿ ತೆಗೆದಿರುವ ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಚಿತ್ರಗಳು ಸದ್ಯ ವೈರಲ್ ಆಗಿದ್ದು, ಈ ಕಾರಿನ ಬಿಡುಗಡೆಯು ಸನಿಹಿತವಾಗಿದೆಯೇ ? ಎಂಬ ಪ್ರೆಶ್ನೆ ಉದ್ಭವವಾಗಿದೆ. ಯಾವುದೇ ಮುಚ್ಚುಮರೆಯಿಲ್ಲದೆ ಸಂಪೂರ್ಣವಾಗಿ ಕಾಣಿಸಿಕೊಂಡಿರುವ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಹೊಸ ಜನರೇಷನ್ ಕ್ಯೂ 5 ಕಾರನ್ನು ಪ್ರಸ್ತುತ ಮಾರಾಟ ಮಾಡಲಾಗುತ್ತಿರುವ ಮಾದರಿಗಳ ಪಕ್ಕದಲ್ಲಿ ನಿಲ್ಲಿಸಿದ್ದು, ಯಾವ ನವೀಕರಣಗಳನ್ನು ಪಡೆದುಕೊಂಡಿದೆ ಎಂಬುದನ್ನು ಗುರುತಿಸಲು ಸುಲಭವಾಗಿದೆ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಈ ಹೊಸ ಕ್ಯೂ 5 ಕಾರಿನ ಮುಂಭಾಗದ ತಂತುಕೋಶವು ದೊಡ್ಡ ಸಿಂಗಲ್ ಫ್ರೇಮ್ ಕ್ರೋಮ್ ಗ್ರಿಲ್ ಮತ್ತು ಆಡಿ ಸಿಗ್ನೇಚರ್ ಮೆಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಮತ್ತು ಕ್ರಿಯಾತ್ಮಕ ತಿರುವು ಸೂಚಕಗಳನ್ನು ಹೊಂದಿದೆ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಮುಂಭಾಗದ ಬಂಪರ್ ಮರುವಿನ್ಯಾಸಗೊಂಡಿದೆ ಮತ್ತು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ, ಈ ಹೊಸ ಕಾರು ದೊಡ್ಡದಾಗಿರುವ ಏರ್ ಇನ್‌ಟೇಕ್‌ಗಳನ್ನು ಪಡೆದಿದೆ ಹಾಗು ಬಂಪರ್‌ನಲ್ಲಿ ಫಾಗ್ ದೀಪಗಳನ್ನು ಅಳವಡಿಸಿಲ್ಲ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಹೊಸ ಜನರೇಷನ್ ಕ್ಯೂ5 ಕಾರಿನ ಹಿಂಭಾಗವು ಅಳವಡಿಸಲಾಗಿರುವ ಟೈಲ್ ದೀಪಗಳು ತನ್ನ ಹಿಂದಿನ ಮಾದರಿಯಂತೆ ಇದ್ದು, ಕೇವಲ ರಿಫ್ರೆಶ್ ನೋಟವನ್ನು ನೀಡುವ ಸಲುವಾಗಿ ಎಲ್‌ಇಡಿ ದೀಪಗಳನ್ನು ಟ್ವೀಕ್ ಮಾಡಲಾಗಿದೆ. ಹಿಂಭಾಗದ ಬಂಪರ್ ಕೂಡ ಮರುವಿನ್ಯಾಸಗೊಂಡಿದೆ ಮತ್ತು ನಾಲ್ಕು ಎಕ್ಸ್‌ಸಾಸ್ಟ್‌ಗಳನ್ನು ಸಂಯೋಜಿಸಲಾಗಿದೆ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಹೊಸ ಕ್ಯೂ5 ಕಾರಿನ ಒಳಭಾಗವು 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಹೆಡ್ ಅಪ್ ಡಿಸ್‌ಪ್ಲೇ(HUD)ಗಳೊಂದಿಗೆ ಆಡಿ ಕಂಪನಿಯ ವರ್ಚುಯಲ್ ಕಾಕ್‌ಪಿಟ್ ಅಳವಡಿಸಲಾಗಿದೆ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಈ ಕಾರು ಸದ್ಯ ಇರುವಂತಹ 2-ಲೀಟರ್, ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 380 ಎನ್ಎಂ ತಿರುಗುಬಲದಲ್ಲಿ 174 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಎರಡನೇ ಪೀಳಿಗೆಯ ಆಡಿ ಕ್ಯೂ 5 ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಆಡಿ ಕ್ಯೂ5 ಕಾರಿನ ಎಂಜಿನ್ ಎಸ್-ಟ್ರಾನಿಕ್ ಸ್ವಯಂಚಾಲಿತ ಗೇರ್ ಬಾಕ್ಸ್ ಮತ್ತು ಕ್ವಾಟ್ರೋ ಆಲ್-ವೀಲ್-ಡ್ರೈವ್ ಸೌಕರ್ಯ ಪಡೆದುಕೊಳ್ಳಲಿದೆ. ಆಡಿ ಕಂಪನಿಯು ಭಾರತದಲ್ಲಿ 2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನೂ ಸಹ ನೀಡುವ ಸಾಧ್ಯತೆ ಇದೆ.

Article Published On: Saturday, December 9, 2017, 13:33 [IST]
English summary
Spy Pics: New-Gen Audi Q5 Spotted In India.
Read more on audi ಆಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+