ಬಿಡುಗಡೆಗೆ ಸಜ್ಜುಗೊಂಡ ಮಾರುತಿ ಸುಜುಕಿ ವಿಶೇಷ ಕಾರು ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ವಿಶೇಷ ಹೊರವಿನ್ಯಾಸಗಳ ಮೂಲಕ ಈಗಾಗಲೇ ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರೋ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್ ಕಾರು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಕುರಿತಾದ ತಾಂತ್ರಿಕ ವಿವರಗಳು ಇಲ್ಲಿವೆ.

By Praveen

ವಿಶೇಷ ಹೊರವಿನ್ಯಾಸಗಳ ಮೂಲಕ ಈಗಾಗಲೇ ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರೋ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್ ಕಾರು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಕುರಿತಾದ ತಾಂತ್ರಿಕ ವಿವರಗಳು ಇಲ್ಲಿವೆ.

ಬಿಡುಗಡೆ ಸಜ್ಜುಗೊಂಡ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ಭಾರತೀಯ ಮಾರುಕಟ್ಟೆಗಾಗಿ ವಿಶೇಷ ಕಾರು ಮಾದರಿಯೊಂದನ್ನು ಸಿದ್ಧಪಡಿಸಿರುವ ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಯು ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್ ನಿರ್ಮಾಣ ಮಾಡಿದ್ದು, ಸಣ್ಣ ಕಾರು ಮಾದರಿಗಳಲ್ಲೇ ವಿಶೇಷ ಕಾರು ಮಾದರಿಯಾಗಿ ಹೊರಹೊಮ್ಮುವ ತವಕದಲ್ಲಿದೆ.

ಬಿಡುಗಡೆ ಸಜ್ಜುಗೊಂಡ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ಎಂಜಿನ್

ಅಂತ್ಯಂತ ಕಡಿಮೆ ಸಾಮರ್ಥ್ಯದ 660ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಂಡಿರುವ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್, ಪ್ರಸ್ತುತ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿನ ಎಲ್ಲಾ ಸುರಕ್ಷಾ ವೈಶಿಷ್ಟ್ಯತೆಗಳು ಪಡೆದುಕೊಂಡಿದೆ.

ಬಿಡುಗಡೆ ಸಜ್ಜುಗೊಂಡ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ಇನ್ನೊಂದು ವಿಶೇಷ ಅಂದ್ರೆ ಮಾರುತಿ ಸುಜುಕಿ ನಿರ್ಮಾಣ ಮಾಡುತ್ತಿರುವ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್ ಆವೃತ್ತಿಯು ಭಾರತದಲ್ಲೇ ನಿರ್ಮಾಣಗೊಳ್ಳುತ್ತಿದ್ದು, ಪ್ರಸ್ತುತ ಪೆಟ್ರೋಲ್ ಮಾದರಿಗಳಿಂತ ಹೆಚ್ಚಿನ ಇಂಧನ ಕಾರ್ಯಕ್ಷಮತೆ ನೀಡಲಾಗಿದೆ.

ಬಿಡುಗಡೆ ಸಜ್ಜುಗೊಂಡ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ಇದಕ್ಕೆ ಕಾರಣ ಜಪಾನ್‌ನಲ್ಲಿ ಮಾರಾಟವಾಗುತ್ತಿರುವ ಸುಜುಕಿ ನಿರ್ಮಾಣದ ಸುಜುಕಿ ಆಲ್ಟೋ 660ಸಿಸಿ ಎಂಜಿನ್ ಕಾರು ಮಾದರಿಯ ವೈಶಿಷ್ಟ್ಯತೆಗಳನ್ನೇ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್‌ನಲ್ಲೂ ಬಳಕೆ ಮಾಡಲಾಗಿದ್ದು, ಜೆಡಿಎಂ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.

Recommended Video

Maruti Ignis Concept
ಬಿಡುಗಡೆ ಸಜ್ಜುಗೊಂಡ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ಇದು ಕಾರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗಲಿದ್ದು, 63 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಶಕ್ತಿಯನ್ನು ಹೊಂದಿದೆ. ಇದರಿಂದಾಗಿಯೇ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 37 ಕಿ.ಮಿ ಮೈಲೇಜ್ ನೀಡಲಿದೆ.

ಬಿಡುಗಡೆ ಸಜ್ಜುಗೊಂಡ ಮಾರುತಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿರುವ ಆಲ್ಟೋ 800 ಮಾದರಿ ಬದಲಾಗಿ 660 ಸಿಸಿ ಎಂಜಿನ್ ಮಾದರಿ ಆಲ್ಟೋ ಮಿನಿ ಹ್ಯಾಚ್‌ಬ್ಯಾಕ್ ಮಾರಾಟ ಮಾಡಲಿರುವ ಮಾರುತಿ ಸುಜುಕಿ ಸಂಸ್ಥೆಯು, 2019ರ ಮೊದಲ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

Most Read Articles

Kannada
English summary
Read in Kannada about The New gen Maruti Alto will be equipped with a new 660cc single cylinder petrol engine
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X