ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯು ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನೆಲೆ ಮಾರುತಿ ಸುಜುಕಿ ಅಧಿಕೃತ ಮಾರಾಟ ಮಳಿಗೆ ನೆಕ್ಸಾದಲ್ಲಿ ಇಂದಿನಿಂದ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

By Praveen

ಅಕ್ಟೋಬರ್ ಮೊದಲ ವಾರ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯು ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನೆಲೆ ಮಾರುತಿ ಸುಜುಕಿ ಅಧಿಕೃತ ಮಾರಾಟ ಮಳಿಗೆ ನೆಕ್ಸಾದಲ್ಲಿ ಇಂದಿನಿಂದ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಎಸ್ ಕ್ರಾಸ್ ಆವೃತ್ತಿಗಳು ಭಾರೀ ಜನಪ್ರಿಯತೆ ಹೊಂದಿದ್ದು, ಇದೀಗ ಫೇಸ್‌ಲಿಫ್ಟ್ ಕಾರು ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಗೆ ರೂ.11 ಸಾವಿರ ನಿಗದಿ ಮಾಡಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ಕಂಪನಿ ಅಕ್ಟೋಬರ್ ಮೊದಲ ವಾರ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕ್ರಾಸ್ ಓವರ್ ಕಾರನ್ನು ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಹೊರಭಾಗದ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದೆ ಎನ್ನಲಾಗಿದೆ.

Recommended Video

Tata Nexon First Look • Price • Specs • Variants • Features - DriveSpark
ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ತೈವಾನ್ ಸೇರಿದಂತೆ ಯುರೋಪ್‌ನ ಪ್ರಮುಖ ರಾಷ್ಟ್ರಗಳಲ್ಲಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯು ಈಗಾಗಲೇ ಬಿಡುಗಡೆಯಾಗಿದ್ದು, ಸ್ನಾಯುವಿನ ನೋಟವನ್ನು ಪಡೆದ ಪರಿಷ್ಕರಿಸಿದ ಬಂಪರ್, ಪ್ರೊಜೆಕ್ಟರ್ ಹೆಡ್‌ಲೈಟ್,ಹೊಸ ರೀತಿಯ ತಂತುಕೋಶ ಪಡೆದುಕೊಂಡಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಎಸ್ ಕ್ರಾಸ್ ಕಾರಿನ ಹಿಂಭಾಗದಲ್ಲಿ ಸಾಕಷ್ಟು ಅಪ್ಡೇಟ್‌ಗಳನ್ನು ಪಡೆದುಕೊಂಡಿದ್ದು, ಟೈಲ್ ಲ್ಯಾಂಪ್ ಕ್ಲಸ್ಟರ್ ಟ್ವಿಕಡ್ ಮತ್ತು ಮರುವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬಂಪರ್ ಅಳವಡಿಸಲಾಗಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎಸ್ ಕ್ರಾಸ್ ಫೇಸ್‌ಲಿಫ್ಟ್ ಕಾರನ್ನು ನೆಕ್ಸಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲು ಸಂಸ್ಥೆಯು ನಿರ್ಧರಿಸಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಒಟ್ಟಾರೆಯಾಗಿ, ರೆಡ್ಒನ್ ಫ್ರಂಟ್ ಫ್ಯಾಸಿಯಾವನ್ನು ಹೊರತುಪಡಿಸಿ ಸದ್ಯ ಮಾರಾಟವಾಗುತ್ತಿರುವ ಮಾದರಿಯನ್ನು ಈ ಫೇಸ್ ಲಿಫ್ಟ್ ಕಾರು ಹೊಂದಲಿದ್ದು, ಕಡಿಮೆ ಬಜೆಟ್‌ನಲ್ಲಿ ಉತ್ತಮ ಆಯ್ಕೆ ಎನ್ನಬಹುದು. ಇನ್ನು ಫೇಸ್‌ಲಿಫ್ಟ್ ಮಾದರಿಯು ಕೇವಲ ಡೀಸೆಲ್ ಎಂಜಿನ್ ಆಯ್ಕೆದೊಂದಿಗೆ ಬಿಡುಗಡೆಯಾಗುತ್ತದೆ ಎನ್ನಲಾಗಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಅಪ್ಡೇಟ್‌ಗೊಳಿಸಲಾದ ಪ್ರೀಮಿಯಂ ಕ್ರಾಸ್ಒವರ್ ಹೊಸ 1.3-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, 200ಬಿಎಚ್‌ಪಿ ಮತ್ತು 89ಎನ್ಎಂ ಟಾರ್ಕ್ ಉತ್ಪಾದನೆಯನ್ನು ಮಾಡುತ್ತದೆ ಮತ್ತು 5 ಮಾನ್ಯುಯಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಎಸ್ ಕ್ರಾಸ್ ಫೇಸ್‌ಲಿಫ್ಟ್ ಖರೀದಿಗೆ ಇಂದಿನಿಂದ ಬುಕ್ಕಿಂಗ್ ಶುರು

ಐಷಾರಾಮಿ ಕಾರುಗಳಲ್ಲಿ ಇರುವಂತಹ ಸೌಲಭ್ಯಗಳನ್ನು ಈ ಕಾರು ಪಡೆದುಕೊಂಡಿದ್ದು, ಇದರ ಜೊತೆಗೆ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಪಡೆದಿರುವ ಈ ಕಾರು ಹೆಚ್ಚು ಜನರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
English summary
Read in Kannada about Maruti Suzuki Commences Bookings For The New Version Of S-Cross.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X