2019ಕ್ಕೆ ರಸ್ತೆಗಿಳಿಯಲಿವೆ ಐಷಾರಾಮಿ ಮಸೆರೆಟಿ ಎಲೆಕ್ಟ್ರಿಕ್ ಕಾರುಗಳು
ಇಟಾಲಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಮಸೆರೆಟಿಯೂ 2019ಕ್ಕೆ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.
ದೇಶಿಯ ಮಾರುಕಟ್ಟೆ ಸೇರಿದಂತೆ ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ಕೈಗೊಂಡಿರುವ ಇಟಾಲಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಮಸೆರೆಟಿಯೂ 2019ಕ್ಕೆ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 2030ರ ವೇಳೆಗೆ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು ಸಂಪೂರ್ಣ ಮೂಲೆಗುಂಪಾಗಲಿದ್ದು, ಶೇ.90ರಷ್ಟು ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲಾ ಕಾರು ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸುತ್ತಿವೆ.

ಇದೀಗ ಮಸೆರೆಟಿ ಐಷಾರಾಮಿ ಕಾರುಗಳು ಕೂಡಾ ಎಲೆಕ್ಟ್ರಿಕ್ ಮಯವಾಗುವ ಬಗ್ಗೆ ಮಸೆರಟಿ ಮಾತೃ ಸಂಸ್ಥೆ ಫಿಯೆಟ್ ಕೈಸ್ಲರ್ ಆಟೋಮೊಬೈಲ್ಸ್ ಮಹತ್ವದ ಸುಳಿವು ನೀಡಿದ್ದು, 2019ಕ್ಕೆ ಎಲೆಕ್ಟ್ರಿಕ್ ಮಾದರಿಗಳು ಬಿಡುಗಡೆಯಾಗಲಿವೆ ಎಂದಿದೆ.

ಇನ್ನು ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಭಾರೀ ಬೇಡಿಕೆಯಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರು ಮಾದರಿಗಳಿಂತ ಅಗ್ಗದ ದರದಲ್ಲಿ ದೊರೆಯಲಿವೆ. ಜೊತೆಗೆ ಪರಿಸರಕ್ಕೆ ಪೂರಕ ಉತ್ಪನ್ನಗಳು ಹೆಗ್ಗಳಿಕೆಗೂ ಪಾತ್ರವಾಗಲಿವೆ.

ಎಲೆಕ್ಟ್ರಿಕ್ ಕಾರು ಮಾದರಿಗಳ ಉತ್ಪಾದನೆ ಅಷ್ಟೇ ಅಲ್ಲದೇ ಹೈಬ್ರಿಡ್ ಕಾರುಗಳ ಉತ್ಪಾದನೆಗೂ ಯೋಜನೆ ರೂಪಿಸಿರುವ ಮಸೆರೆಟಿ ಸಂಸ್ಥೆ, ಲಿವಾಂಟೆ ಎಸ್‌ಯುವಿ ಸೇರಿದಂತೆ ಪ್ರಮುಖ ಮಾದರಿಗಳನ್ನು ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಅಭಿವೃದ್ಧಿಗೊಳಿಸಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪರಿಸರಕ್ಕೆ ಪೂರಕವಾಗಿ ಎಲ್ಲಾ ಕಾರು ಉತ್ಪಾದಕರು ಎಲೆಕ್ಟ್ರಿಕ್ ಕಾರು ಮಾದರಿಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸುತ್ತಿದ್ದು, ಇದೀಗ ಮಸೆರೆಟಿ ಮಾತೃ ಸಂಸ್ಥೆ ಫಿಯೆಟ್ ಕೈಸ್ಲರ್ ಆಟೋಮೊಬೈಲ್ಸ್ ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿರುವುದು ಗಮರ್ನಾಹ.


Click it and Unblock the Notifications








