ಭಾರತದಲ್ಲಿ ಪೋರ್ಷೆ ಕಯಿನ್ ಎಸ್‌ಯುವಿ ಕಾರಿನ ಬಿಡುಗಡೆಯ ಬಗ್ಗೆ ವಿವರ
ಜರ್ಮನ್ ವಾಹನ ತಯಾರಕ ಪೋರ್ಷೆ ಹೊಸ ಕಯಿನ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಜೂನ್ 2018ರಲ್ಲಿ ಮೂರನೇ ಪೀಳಿಗೆಯ ಕಯಿನ್ ಕಾರನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.
ಜರ್ಮನ್ ವಾಹನ ತಯಾರಕ ಪೋರ್ಷೆ ಹೊಸ ಕಯಿನ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಜೂನ್ 2018ರಲ್ಲಿ ಮೂರನೇ ಪೀಳಿಗೆಯ ಕಯಿನ್ ಕಾರನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಚ್ಚ ಹೊಸ ಕಯಿನ್ ಎಸ್‌ಯುವಿ ಕಾರು, ಯಾವುದೇ ರೀತಿಯ ಹೊಸ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಆದರೆ, ಕಂಪನಿಯು ಕೆಲವು ಹೊಸ ಎಂಜಿನ್ ಆಯ್ಕೆಗಳನ್ನು ಪರಿಚಯಿಸುವ ನಿರ್ಧಾರನ್ನು ಕೈಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಪೋರ್ಷೆ ಹೊಸ ಕಯಿನ್ ಎಸ್‌ಯುವಿ ಕಾರು 3 ಲೀಟರ್ ವಿ6 ಡೀಸೆಲ್ ಎಂಜಿನ್ ಉಳಿಸಿಕೊಳ್ಳುತ್ತದೆ ಮತ್ತು 4 ಲೀಟರ್ ವಿ8 ಆಯಿಲ್ ಬರ್ನರ್ ಆಯ್ಕೆಯನ್ನು ಕಯಿನ್ ಎಸ್‌ಯುವಿ ಎಸ್ ರೂಪಾಂತರದಲ್ಲಿ ನೀಡವ ನಿರೀಕ್ಷೆ ಇದೆ.

ಈ ಎಸ್‌ಯುವಿ ಕಾರು ಕೆಲವು ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿಯೂ ಸಹ ಬಿಡುಗಡೆಯಾಗುವ ನಿರೀಕ್ಷೆ ಇದೆ ಮತ್ತು ನಾಲ್ಕು ಚಕ್ರಗಳಿಗೆ ಶಕ್ತಿ ಕಳಿಸುವ ಹೊಸ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಈ ಕಾರಿನಲ್ಲಿ ನೀಡುವ ಸಂಭವವಿದೆ.

ಹೊಸದಾಗಿ ಅಭಿವೃದ್ಧಿಗೊಳಿಸಲಾಗಿರುವ ವಿ6 ಪೆಟ್ರೋಲ್ ಇಂಜಿನ್ ಆಯ್ಕೆಯಲ್ಲಿ ಕಯಿನ್ ಎಸ್‌ಯುವಿ ಕಾರು ಬಿಡುಗಡೆಯಾಗಲಿದೆ. ಈ ಕಾರು 3 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಕಾರಿನ ಇಂಜಿನ್, 335 ಬಿಎಚ್‌ಪಿ ಮತ್ತು 450 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಕಯಿನ್ ಎಸ್‌ಯುವಿ ಎಸ್ ಕಾರು ಶಕ್ತಿಯುತವಾಗಿರುವ 2.9 ಲೀಟರ್ ಟರ್ಬೊಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ ಕಾರು 433 ಬಿಎಚ್‌ಪಿ ಮತ್ತು 550 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಉನ್ನತ ಮಾದರಿಯ ಕಯಿನ್ ಎಸ್‌ಯುವಿ ಕಾರು ಟರ್ಬೊ 442 ಲೀಟರ್ ವಿ8 ಇಂಜಿನ್ ಆಯ್ಕೆಯನ್ನು ಪಡೆಯಲಿದೆ. ಈ ಎಂಜಿನ್ 542 ಬಿಎಚ್‌ಪಿ ಉತ್ಪಾದಿಸುತ್ತದೆ.

ಭಾರತದಲ್ಲಿ ಪೋರ್ಷೆ ಕಂಪನಿಯ ಈ ಹೊಸ ಎಸ್‌ಯುವಿ ಕಾರಿನ ಹೈಬ್ರಿಡ್ ರೂಪಾಂತರವನ್ನು ಹೊರತರುವ ಯೋಜನೆಯನ್ನು ಸಹ ಈ ಕಂಪನಿ ಹೊಂದಿದೆ. ಇಂಡಿಯನ್ ಮಾರುಕಟ್ಟೆಯಲ್ಲಿ ಪೋರ್ಷೆ ಕಂಪನಿಗೆ ಕಯಿನ್ ಎಸ್‌ಯುವಿ ಕಾರು ಒಂದು ಪ್ರಮುಖ ಉತ್ಪನ್ನವಾಗಿದೆ ಮತ್ತು ಹೊರದೇಶಗಳಲ್ಲಿ ಮಾರಾಟವಾದ ಐಷಾರಾಮಿ ಎಸ್‌ಯುವಿಗಳಲ್ಲಿ ಒಂದಾಗಿದೆ.

ವಾಸ್ತವವಾಗಿ, ಕಯಿನ್ ಎಸ್‌ಯುವಿ ಕಾರು ದೊಡ್ಡದಾಗಿದೆ ಮತ್ತು ದುಬಾರಿ ಬೆಲೆ ಪಡೆದುಕೊಂಡಿದೆ. ಇದರ ಹೊರತಾಗಿಯೂ ಹೆಚ್ಚು ಮಾರಾಟವಾಗುತ್ತಿರುವ ಕಾರು ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ. ಈಗ, ಈ ಕಾರು ಭಾರತಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ.


Click it and Unblock the Notifications








