ಬಿಡುಗಡೆಯಾಗಲಿರುವ ಹೊಸ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

Written By:

ಯುರೋಪಿನ್ ಮಾರುಕಟ್ಟೆಯಲ್ಲಿ ಡಾಸಿಯಾ ಹೆಸರಿನಲ್ಲಿ ಜನಪ್ರಿಯ ಗಳಿಸಿರುವ ರೆನಾಲ್ಟ್ ನಿರ್ಮಾಣದ ಡಸ್ಟರ್ ಹೊಸ ಕಾರು ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಈ ಮಧ್ಯೆ ಕಾರಿನ ಒಳ ವಿನ್ಯಾಸಗಳ ವೈಶಿಷ್ಟ್ಯತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.

ಬಿಡುಗಡೆಯಾಗಲಿರುವ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

ಎಸ್‌ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್ಸ್) ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ರೆನಾಲ್ಟ್ ಡಸ್ಟರ್ 2017ರ ಆವೃತ್ತಿಯು ಹಲವು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಕಳೆದ ಡಸ್ಟರ್ ಮಾದರಿಗಿಂತಲೂ ಸಾಕಷ್ಟು ಒಳವಿನ್ಯಾಸಗಳಲ್ಲಿ ಬದಲಾವಣೆ ಕಂಡಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

ಹೊಸ ಕಾರಿನ ಕ್ಯಾಬಿನ್ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ವಿಂಡ್ ಷೀಲ್ಡ್ ಅನ್ನು 100 ಮಿ.ಮೀ ಮುಂದಕ್ಕೆ ಸಾಗಿಸಲಾಗಿದೆ. ಹೀಗಾಗಿಯೇ ಡಸ್ಟರ್ ಫೋರ್ ಸ್ಪೋಕ್ ಮತ್ತು ಬಹುಕ್ರಿಯಾತ್ಮಕ ಸ್ಟೀರಿಂಗ್ ಚಕ್ರ, ದೊಡ್ಡದಾದ ಟಚ್‌ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

ಜೊತೆಗೆ ಟ್ರೆಂಡಿ ಮಾದರಿಯಾಗಿರುವ ಕುಕ್‌ಪಿಟ್ ವಿನ್ಯಾಸಗಳನ್ನು ಹೊಸ ಡಸ್ಟರ್‌ನಲ್ಲಿ ಬಳಸಿಕೊಳ್ಳಲಾಗಿದ್ದು, ವಿಶಾಲವಾದ ಡ್ಯಾಶ್ ಬೋರ್ಡ್, ಸ್ಟಿರಿಂಗ್ ವೀಲ್ಹ್ ಹಿಂಬದಿಯಲ್ಲಿ ಪ್ರಮುಖ 2 ಇನ್‌ಸ್ಟುಮೆಂಟ್ ಕ್ಲಸ್ಟರ್ ಹೊಂದಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

4x4 ಡ್ರೈವಿಂಗ್ ವ್ಯವಸ್ಥೆಯು ರೆನಾಲ್ಟ್ ಡಸ್ಟರ್ ಪಡೆದುಕೊಂಡಿದ್ದು, ಚಾಲಕ ಸೇರಿ 7 ಸೀಟುಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಹೀಗಾಗಿ ಇದೊಂದು ಅತ್ಯುತ್ತಮ ಎಸ್‌ಯುವಿ ಮಾದರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬಿಡುಗಡೆಯಾಗಲಿರುವ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

ಈ ಹಿಂದೆ ಸ್ಪೆನ್‌ನಲ್ಲಿ ಸ್ಟಾಟ್ ಟೆಸ್ಟಿಂಗ್ ನಡೆಸಿದ್ದ ರೆನಾಲ್ಟ್ ಡಸ್ಟರ್ ಕಾರು ಮಾದರಿಯೂ 2018ರ ಅಂತ್ಯಕ್ಕೆ ಭಾರತದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಅದಕ್ಕೂ ಮೊದಲು ಡಿಸೆಂಬರ್‌ನಲ್ಲಿ ನಡೆಯಲಿರುವ ಫ್ರಾಂಕ್‌ಫರ್ಟ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿದೆ.

ಬಿಡುಗಡೆಯಾಗಲಿರುವ ರೆನಾಲ್ಟ್ ಡಸ್ಟರ್ ಒಳವಿನ್ಯಾಸಗಳ ಚಿತ್ರಗಳು ಸೋರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕ್ರೇಟಾ ಮಾದರಿಯನ್ನೇ ಗುರಿಯಾಗಿಸಿಕೊಂಡು ವಿನೂತನ ವಿನ್ಯಾಸದ ಗ್ರ್ಯಾಂಡ್ ಮಾಸ್ಟರ್ ಆವೃತ್ತಿಯನ್ನು ಪರಿಚಯಿಸಲಾಗುತ್ತಿದ್ದು, ಎಸ್‌ಯುವಿ ಆವೃತ್ತಿಗಳಲ್ಲಿ ರೆನಾಲ್ಟ್ ಗ್ರ್ಯಾಂಡ್ ಆವೃತ್ತಿಯು ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮುವ ಸಾಧ್ಯತೆಗಳು ಕೂಡಾ ಇವೆ.

English summary
Read in Kannada about New Renault Duster Interior Images Leaked Ahead Of Debut.
Story first published: Monday, September 4, 2017, 13:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark