ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

Written By:

ಮುಂಬರುವ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲು ಸಜ್ಜುಗೊಳ್ಳುತ್ತಿರುವ ಹೊಸ ವಿನ್ಯಾಸದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯು ಭಾರೀ ಚರ್ಚೆಗೆ ಕಾರಣವಾಗಿದ್ದು, ಮೊದಲ ಬಾರಿಗೆ ಹೊಸ ಕಾರಿನ ಅಧಿಕೃತ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ.

To Follow DriveSpark On Facebook, Click The Like Button
ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

ಪ್ರಸ್ತುತ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೆನಾಲ್ಟ್ ಡಸ್ಟರ್ ಮಾದರಿಯು ಗ್ರಾಹಕರ ಬೇಡಿಕೆಯಂತೆ ಫೇಸ್‌ಲಿಫ್ಟ್ ಅಂಶಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಯಾವುದೇ ತಾಂತ್ರಿಕ ಅಂಶಗಳಲ್ಲಿ ಬದಲಾವಣೆಗಳಿಲ್ಲದೇ ಕೇವಲ ವಿನ್ಯಾಸಗಳ ಜೋಡಣೆಯಲ್ಲಿ ಬದಲಾವಣೆ ಪಡೆದುಕೊಂಡಿದೆ.

ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

ಹೊಸ ಡಸ್ಟರ್ ವಿನ್ಯಾಸಗಳು ಕಂಪ್ಯಾಕ್ಟ್ ಎಸ್‌ಯುವಿ ವಿಕಾಸವನ್ನು ಪ್ರತಿನಿಧಿಸುವ ಮಾದರಿಯಾಗಿದ್ದು, ಪ್ರಸ್ತುತ ಮಾದರಿಗಳ ಉತ್ಪಾದನಾ ವೇದಿಕೆಯನ್ನು ಆಧರಿಸಿಯೇ ಅಭಿವೃದ್ಧಿಗೊಳ್ಳುವ ಈ ಹಿಂದಿನ ಡಸ್ಟರ್ ಮಾದರಿಯನ್ನು ಪ್ರತಿನಿಧಿಸುತ್ತದೆ.

ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

ಹೀಗಾಗಿ ಹೊರ ಭಾಗದ ವಿನ್ಯಾಸಗಳ ಬದಲಾವಣೆಗಾಗಿ ವಿಶೇಷ ಒತ್ತು ನೀಡಲಾಗಿದ್ದು, ಫ್ರಂಟ್ ಗ್ರಿಲ್ ಮತ್ತು ವಿಂಡರ್ ಹೆಡ್‌ಲ್ಯಾಂಪ್ ವ್ಯವಸ್ಥೆಯನ್ನು ಹೊಂದಿರುವುದು ಹೊಸ ಕಾರಿನ ನೋಟವನ್ನು ಮತ್ತಷ್ಟು ಬಲಾಡ್ಯಗೊಳಿಸಿದೆ.

ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

ಇದರ ಜೊತೆಗೆ ಉನ್ನತ ಮಾದರಿಗಳಲ್ಲಿ ಎಲ್ಇಡಿ ಡೇ ಲೈಟ್ ರನ್ನಿಂಗ್ ಲೈಟ್, 17- ಇಂಚಿನ ಅಲ್ಹಾಯ್ ವೀಲ್ಹ್, ಅಲ್ಯುಮಿನಿಯಂ ರೂಫ್ ರೈಲ್ಸ್ ಇರಿಸಲಾಗಿದ್ದು, ಕ್ಯಾಬಿನ್ ಸ್ಥಳವನ್ನು ಕೂಡಾ ಹಿಂದಿನ ಮಾದರಿಗಿಂತ ಹೆಚ್ಚು ನೀಡಲಾಗಿದೆ.

ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

ಎಂಜಿನ್

ಫೇಸ್‌ಲಿಫ್ಟ್ ಅಂಶಗಳನ್ನು ಹೊಂದಿರುವ ಡಸ್ಟರ್ ಕಾರುಗಳು 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಇಗ್ನಿಸ್ ಎಂಜಿನ್ ಪಡೆದುಕೊಂಡಿದ್ದು, ಪ್ರಸಿದ್ಧ ಡಾಸಿಯಾ ಡಿಸೈನ್ ಮುಖ್ಯಸ್ಥ ಲೌರೆನ್ಸ್ ವಾನ್ ದೆ ಅಕ್ರೆರ್ ಅವರಿಂದ ಡಸ್ಟರ್ ವಿನ್ಯಾಸಗಳನ್ನು ಪೂರ್ಣಗೊಳಿಸಲಾಗಿದೆ.

ಹೊಸ ವಿನ್ಯಾಸದ ಡಸ್ಟರ್ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಧಾರಿತ ಇನ್ಫೋಮೆಟಿಕ್ ಸೇರಿದಂತೆ ಹತ್ತು ಹಲವು ಬದಲಾವಣೆಗಳೊಂದಿಗೆ ಫೇಸ್‌ಲಿಫ್ಟ್ ರೆನಾಲ್ಟ್ ಡಸ್ಟರ್ ನಿರ್ಮಾಣಗೊಂಡಿದ್ದು, ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾದ ನಂತರವಷ್ಟೇ ಬಿಡುಗಡೆ ಬಗೆಗಿನ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

English summary
Read in Kannada about New Renault Duster Revealed.
Story first published: Wednesday, August 30, 2017, 16:57 [IST]
Please Wait while comments are loading...

Latest Photos