ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

Written By:

ಫ್ರಾನ್ಸ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್ ಸದ್ಯದಲ್ಲೇ ವಿನೂತನ ಮಾದರಿಯ ಕ್ವಿಡ್ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುವ ಹೊಸ ಮಾದರಿಯೂ ಮಧ್ಯಮ ವರ್ಗಗಳನ್ನು ಸೆಳೆಯುವ ತವಕದಲ್ಲಿದೆ.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಕೆಲ ವರದಿಗಳ ಪ್ರಕಾರ ಕ್ವಿಡ್ ಹೊಸ ಮಾದರಿಯೂ ಹಿಂದಿನ ಮಾದರಿಗಿಂತ ಹೆಚ್ಚು ಭಿನ್ನವಾಗಿದ್ದು, 1-ಲೀಟರ್ ಎಂಜಿನ್ ಇರಲಿದೆ ಎನ್ನಲಾಗಿದೆ. ಜೊತೆಗೆ ಹ್ಯಾಚ್‌ಬ್ಯಾಕ್ ಶ್ರೇಣಿಗಳಲ್ಲಿ ಇದು ಅತ್ಯುತ್ತಮ ಕಾರುಗಳಲ್ಲಿ ಒಂದಾಗುವ ನೀರಿಕ್ಷೆಯಿದೆ.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಆಪ್ ರೋಡಿಂಗ್ ಶೈಲಿಯನ್ನು ಹೋಲುವ ವಿನೂತನ ಮಾದರಿಯೂ ಸಾಕಷ್ಟು ಗಮನಸೆಳೆಯುತ್ತಿದ್ದು, ಮೈಲೇಜ್ ವಿಚಾರದಲ್ಲಿ ಗ್ರಾಹಕರ ನೀರಿಕ್ಷೆಗಳ ಪರವಾಗಿರಲಿದೆ ಎನ್ನಲಾಗಿದೆ. ಈ ಹಿಂದೆ 2016ರ ಆಟೋ ಎಕ್ಸ್‌ ಪೋದಲ್ಲಿ ಕೂಡಾ ಕ್ವಿಡ್ ಪ್ರದರ್ಶನಗೊಳ್ಳುವ ಮೂಲಕ ಇತರೆ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಸುಳಿವು ಕೊಟ್ಟಿತ್ತು.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಸದ್ಯ ರೆನಾಲ್ಟ್ ಸಂಸ್ಥೆ ಬಿಡುಗಡೆಗೊಳಿಸಿರುವ ಹೊಸ ಕ್ವಿಡ್ ಮಾದರಿಯ ಪ್ರಮುಖ 2 ಛಾಯಾಚಿತ್ರಗಳು ಹೆಚ್ಚು ಸದ್ದು ಮಾಡುತ್ತಿವೆ. ಆಟೋ ಎಕ್ಸ್‌ಪೋ ಪ್ರದರ್ಶನಗೊಂಡ ಕಾರು ಮಾದರಿಗಿಂತ ಭಿನ್ನವಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಮಾದರಿ ಬಿಡುಗಡೆಗೊಳಿಸುವ ಸುಳಿವುಕೊಟ್ಟಿದೆ.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಬ್ಲೂ ಮತ್ತು ಆರೇಂಜ್ ಬಣ್ಣಗಳಲ್ಲಿ ಮಿಂಚುತ್ತಿರುವ ವಿನೂತನ ಮಾದರಿಯೂ ವಿನ್ಯಾದಲ್ಲೂ ಅತ್ಭುತವಾಗಿದೆ. ಹೊರ ಭಾಗದ ಹಿನ್ನೋಟದ ಕನ್ನಡಿ ವಿನ್ಯಾಸ ಹೊಸ ಕಾರ್ ಅಂದ ಹೆಚ್ಚಿಸಿದ್ದು, ಕಾರಿನ ಅಂಚುಗಳಲ್ಲಿ ನೀಲಿ ಮತ್ತು ಆರೇಂಜ್ ಬಣ್ಣಗಳ ಲೇಪನ ನೀಡಲಾಗಿದೆ.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಬರಲಿರುವ ರೆನಾಲ್ಟ್ ಕ್ವಿಡ್ ಹೊಸ ಮಾದರಿಯಲ್ಲಿ ಎರಡು ರೀತಿ ಆಯ್ಕೆಗಳಿವೆ. ಒಂದು 800ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಇದ್ದು, ಎರಡನೇಯದಾಗಿ 1-ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆ ಮಾಡಬಹುದಾಗಿದೆ.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಸಿದ್ಧಗೊಂಡಿರುವ ಎರಡೂ ಎಂಜಿನ್ ಮಾದರಿಗಳು ಪರಿಸರ ಸ್ನೇಹಿಯಾಗಿದ್ದು, ಸಣ್ಣ ಎಂಜಿನ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯಿದೆ. ಜೊತೆಗೆ 1-ಲೀಟರ್ ಎಂಜಿನ್ ಹೊಂದಿರುವ ಕಾರಿನಲ್ಲಿ 5-ಸ್ಪೀಡ್ ಆಟೋಮೆಡೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಹೊಂದಿದೆ.

ಅದ್ಭುತವಾಗಿದೆ ವಿನೂತನ ರೆನಾಲ್ಟ್ ಕ್ವಿಡ್- ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ?

ಈ ಹಿಂದೆ ಜನವರಿಯಲ್ಲಿ 'ಲೀವ್ ಫಾರ್ ಮೋರ್' ಸಂಚಿಕೆ ಬಿಡುಗಡೆ ಮಾಡಿದ್ದ ರೆನಾಲ್ಟ್ ಈ ಬಾರಿ ಕ್ವಿಡ್ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹೀಗಾಗಿ ಕ್ರಾಸ್‌ಓವರ್ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಅತಿಹೆಚ್ಚು ಮಾರಾಟಗೊಳ್ಳುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.

ಮೊನ್ನೆಯಷ್ಟೆ ಬಿಡುಗಡೆಯಾಗಿರುವ ರೆನಾಲ್ಟ್ ಕ್ವಿಡ್ ಎಎಂಟಿ ಮಾದರಿಯ ಕಾರುಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Renault has teased a new variant of Kwid on its social media platforms. The images suggest that the new model is the rugged venison of the currently sold Kwid.
Story first published: Thursday, March 9, 2017, 11:52 [IST]
Please Wait while comments are loading...

Latest Photos