ಗ್ರಾಹಕರಿಗೆ ಗುಡ್ ನ್ಯೂಸ್... ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ
ಮೇ 16 ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಭಾರತದಲ್ಲಿ ಕಡಿಮೆ ಮಾಡಲಾಗಿದೆ.
ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ.

ಪೆಟ್ರೋಲ್ ಬೆಲೆ ಲೀಟರ್‌ಗೆ 2.16 ರೂ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2.10 ರೂ ಇಳಿಕೆಯಾಗಿದೆ. ಈ ಬೆಲೆ ಇಳಿಕೆ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮಾತ್ರ ದರ ಪರಿಷ್ಕರಣೆ ಮಾಡಲಾಗಿದ್ದು, ಅಡಿಗೆ ಅನಿಲದ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ. 2.97 ಹಾಗೂ ಡಿಸೇಲ್ ದರ ಪ್ರತಿ ಲೀಟರ್‌ಗೆ ರೂ. 2.62 ಇಳಿಕೆಯಾಗಿದೆ.

ಸದ್ಯ, ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಘಲಿಗೆ ಅನುಗುಣವಾಗಿ ದೇಶದ ಇಂಧನ ಮಾರಾಟ ದರಗಳಲ್ಲಿ ಪರಿಷ್ಕರಣೆ ಮಾಡುತ್ತಿವೆ.

ಕಳೆದ ತಿಂಗಳು ಏಪ್ರಿಲ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 1.39 ಮತ್ತು ಡೀಸೆಲ್ ದರ ಲೀಟರ್‌ಗೆ ರೂ. 1.04 ರಷ್ಟು ಏರಿಕೆ ಮಾಡಲಾಗಿತ್ತು.


Click it and Unblock the Notifications








