ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿದ್ದು, ಅದಕ್ಕೂ ಮುನ್ನ ಹೊಸ ಕಾರಿನ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

By Praveen

ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ಪಡೆದುಕೊಂಡಿರುವ ಮೊಟ್ಟ ಮೊದಲ ಕ್ಯಾಪ್ಟರ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣದ ತವಕದಲ್ಲಿದೆ.

ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಕಳೆದ ವರ್ಷ ಮಾಸ್ಕೋದಲ್ಲಿ ಈ ಕಾರು ಮೊದಲು ಬಾರಿಗೆ ಅನಾವರಣಗೊಂಡಿದ್ದು, ಪ್ರಸ್ತುತ ರಷ್ಯಾ ಮತ್ತು ಕೆಲವು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಕಾಪ್ಟರ್ ಮಾರಾಟವಾಗುತ್ತಿದೆ.

ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಈ ಹಿಂದಿನ ವರದಿಯಂತೆ ಈ ಕಾಪ್ಟರ್ ಕಾರು ಡಸ್ಟರ್‌ನ ಎಂಓ ಪ್ಲಾಟ್‌ಫಾರಂ ಆಧಾರಿತವಾಗಿದ್ದು, ಈ ಕಾರು ಮುಂಬರುವ ನಿಸ್ಸಾನ್ ಕಿಕ್ಸ್ ಕ್ರಾಸ್ಒವರ್ ಕಾರಿನ ಅಂಶಗಳನ್ನು ಸಹ ಒಳಗೊಂಡಿರಲಿದೆ.

Recommended Video

2017 Datsun redi-GO 1.0 Litre Launched In India | In Kannada - DriveSpark ಕನ್ನಡ
ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಎಂಜಿನ್

ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದ್ದು, 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹಾಗು 1.5 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಹೀಗಾಗಿ ಪೆಟ್ರೋಲ್ ಆವೃತ್ತಿಯು 102-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ಅಂತೆಯೇ ಆಯಿಲ್ ಬರ್ನರ್ ಎಂಜಿನ್ ಮಾದರಿಯು 83.8-ಬಿಎಚ್‌ಪಿ ಮತ್ತು 108-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಇನ್ನು ಹೊಸ ಕಾರಿನಲ್ಲಿ ಹಗಲಿನ ವೇಳೆ ಬೆಳಗುವ ಎಲ್ಇಡಿ ದೀಪ ಮತ್ತು ಸುತ್ತುವರಿಯಲ್ಪಟ್ಟ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ವ್ಯವಸ್ಥೆ ಇರಿಸವಾಗಿದ್ದು, ಬೆಲೆ ನಿಗದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಬಿಡುಗಡೆಗೆ ಸಿದ್ಧಗೊಂಡ ರೆನಾಲ್ಟ್ ಕಾಪ್ಟರ್ ಹೇಗಿರಲಿದೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಬರೋಬ್ಬರಿ 3 ಸಾವಿರ ಡಿಲರ್ಸ್‌ಗಳ ಮೂಲಕ ಅತಿದೊಡ್ಡ ಮಾರಾಟ ಜಾಲವನ್ನು ಹೊಂದಿರುವ ರೆನಾಲ್ಟ್ ಸಂಸ್ಥೆಯು ಹೊಸ ಮಾದರಿಯ ಕಾಪ್ಟರ್ ಮಾರಾಟದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದು, ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಹ್ಯುಂಡೈ ಕ್ರೆಟಾ ಮತ್ತು ಬರಲಿರುವ ನಿಸ್ಸಾನ್ ಕಿಕ್ಸ್ ಎಸ್‌ಯುವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

Most Read Articles

Kannada
English summary
Read in Kannada about Renault Captur India Launch Details Revealed.
Story first published: Tuesday, August 29, 2017, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X