ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

Written By:

ಭಾರತದಲ್ಲಿ ಬಿಡುಗಡೆ ಸಿದ್ಧಗೊಳ್ಳುತ್ತಿರುವ ರೆನಾಲ್ಟ್ ಹೊಚ್ಚ ಹೊಸ ಮಾದರಿಯ ಕ್ಯಾಪ್ಟರ್ ಕಾರು ರೋಡ್ ಟೆಸ್ಟಿಂಗ್ ನಡೆಸಿದ್ದು, ಡ್ರೈವ್ ಸ್ಪಾರ್ಕ್ ಟೀಮ್‌ ತಂಡಕ್ಕೆ ಹೊಸ ಕಾರಿನ ಎಕ್ಸ್‌ಕ್ಲೂಸಿವ್ ಚಿತ್ರಗಳು ಲಭ್ಯವಾಗಿವೆ.

ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

ಕಳೆದ ವರ್ಷ ಡಿಸೆಂಬರ್ ಸೇರಿದಂತೆ ಇದೀಗ ಮತ್ತೊಮ್ಮೆ ರೋಡ್ ಟೆಸ್ಟಿಂಗ್ ನಡೆಸಿರುವ ರೆನಾಲ್ಟ್ ಸಂಸ್ಥೆಯು, ಸದ್ಯದಲ್ಲೇ ಹೊಸ ಮಾದರಿಯ ಕ್ಯಾಪ್ಟರ್ ಕಾರನ್ನು ಪರಿಚಯಿಸಲಿದೆ. ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿರುವ ರೆನಾಲ್ಟ್ ತಮಿಳುನಾಡಿನ ಯಲಗಿರಿ ಹಿಲ್ ಪ್ರದೇಶದಲ್ಲೂ ಕೂಡಾ ರೋಡ್ ಟೆಸ್ಟಿಂಗ್ ನಡೆಸಿದೆ.

ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

ಈಗಾಗಲೇ ದೇಶದ ಪ್ರಮುಖ ನಗರಗಳಲ್ಲೂ ರೋಡ್ ಟೆಸ್ಟಿಂಗ್ ಕೈಗೊಳ್ಳಲಾಗಿದ್ದು, ಕ್ಯಾಪ್ಟರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿವೆ.

ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಆವೃತ್ತಿಯೂ 1.5-ಲೀಟರ್ ಹೆಚ್4ಕೆ ಎಂಜಿನ್ ಹೊಂದಿದ್ದು, ಡೀಸೆಲ್ ಆವೃತ್ತಿಯೂ 1.5-ಲೀಟರ್ ಡಿಸಿಐ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಲಿವೆ ಎನ್ನಲಾಗಿದೆ.

ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

ಹೀಗಾಗಿ ರೆನಾಲ್ಟ್ ಸಂಸ್ಥೆಯ ಮತ್ತೊಂದು ಕಾರು ಆವೃತ್ತಿಯಾದ ಡಸ್ಟರ್ ಎಂಜಿನ್ ಮಾದರಿಯನ್ನೇ ಕ್ಯಾಪ್ಟರ್‌ನಲ್ಲೂ ಮುಂದುವರಿಸಲಾಗುತ್ತಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯಿರುವ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

ಈ ಹಿಂದೆ ರಷ್ಯಾದಲ್ಲೂ ಬಿಡುಗಡೆಯಾಗಿರುವ ಕ್ಯಾಪ್ಟರ್ ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಅಂತರ್‌ರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಾದ ಹ್ಯುಂಡೈ ಕ್ರೇಟಾ ಆವೃತ್ತಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.

ಎಕ್ಸ್‌ಕ್ಲೂಸಿವ್-ಬಿಡುಗಡೆಗೂ ಮುನ್ನ ರೆನೊ ಕ್ಯಾಪ್ಟರ್ ರೋಡ್ ಟೆಸ್ಟಿಂಗ್

ಇನ್ನು ವಿಶೇಷ ವಿನ್ಯಾಸವುಳ್ಳ ರೆನಾಲ್ಟ್ ಕ್ಯಾಪ್ಟರ್ ಖರೀದಿಗೆ ಗ್ರಾಹಕರು ಎದುರು ನೋಡುತ್ತಿದ್ದು, ಹೊಸ ಕಾರಿನ ಬೆಲೆಗಳು ಎಕ್ಸ್‌ಶೋರಂ ಪ್ರಕಾರ 10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about Renault Captur Spotted Testing In India Again.
Story first published: Thursday, July 13, 2017, 18:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark