ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

Written By:

ಫ್ರಾನ್ಸ್ ಮೂಲದ ಕಾರು ಉತ್ಪಾದನಾ ಸಂಸ್ಥೆ ರೆನಾಲ್ಟ್, ತನ್ನ ಹೊಸ ಮಾದರಿಯ ಪೆಟ್ರೋಲ್ ಎಂಜಿನ್ ಆವೃತ್ತಿಯ ಡಸ್ಟರ್ ಕಾರ್ ಮಾರುಕಟ್ಟೆಗೆ ಪರಿಚಯಿಸಲು ಸಜ್ಜುಗೊಂಡಿದೆ. ವಿನೂತನ ಮಾದರಿಯಲ್ಲಿ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಹಿಂದಿನ ಆವೃತ್ತಿಯ ಕೆಲ ವಿನ್ಯಾಸಗಳನ್ನು ಮುಂದುವರಿಸಲಾಗಿದೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸಿದ್ಧಗೊಂಡಿರುವ ರೆನಾಲ್ಟ್ ಡಸ್ಟರ್ ಪೆಟ್ರೋಲ್ ಆವೃತ್ತಿಯ ಕಾರ್, ಇದೇ ವರ್ಷ ಮೇನಲ್ಲಿ ಬಿಡುಗಡೆಗೊಳ್ಳಲಿದೆ. ಇದಕ್ಕಾಗಿ ಭಾರೀ ಸಿದ್ಧತೆ ನಡೆಸಿರುವ ರೆನಾಲ್ಟ್, ಹೊಸ ಮಾದರಿಯನ್ನು ಗ್ರಾಹಕ ಸ್ನೇಹಿಯಾಗಿಸಲು ವಿವಿಧ ಯೋಜನೆಗಳನ್ನು ರೂಪಿಸಿದೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಕಳೆದ ವರ್ಷ ಇದೇ ಅವಧಿಯಲ್ಲಿ ಡಸ್ಟರ್ ಡೀಸೆಲ್ ಮಾದರಿಯನ್ನು ಬಿಡುಗಡೆ ಮಾಡಿದ್ದ ರೆನಾಲ್ಟ್, ಈ ಬಾರಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಆವೃತ್ತಿಯು 6-ಸ್ಪಿಡ್ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಸಿವಿಟಿ ಗೇರ್‌ಬಾಕ್ಸ್ ವ್ಯವಸ್ಥೆ ಅಳವಡಿಸಲಾಗಿದೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಪೆಟ್ರೋಲ್ ಆವೃತ್ತಿಯ ರೆನಾಲ್ಟ್ ಡಸ್ಟರ್ ಮಾದರಿಯೂ ಈ ಹಿಂದಿನ ಡೀಸೆಲ್ ಆವೃತ್ತಿಯಂತೆ 103ಬಿಎಚ್‌ಪಿ ಉತ್ಪಾದಿಸುತ್ತದೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಗ್ರಾಹಕರಿಗೆ ವರವಾಗಿ ಪರಿಣಮಿಸಲಿದೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಈ ಹಿಂದಿನ ಮಾದರಿಯ ಮಾರಾಟದಲ್ಲಿ ಇಳಿಕೆ ಕಂಡಿರುವ ರೆನಾಲ್ಟ್ ಈ ಬಾರಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಹೊಸ ವಿನ್ಯಾಸಗಳು ಕಾರು ಖರೀದಿಗೆ ಪ್ರಾಮುಖ್ಯತೆ ಪಡೆದುಕೊಳ್ಳಲಿವೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಪೆಟ್ರೋಲ್ ಮಾದರಿಯ ಬಿಡುಗಡೆಗೆ ಸಿದ್ಧತೆ ನಡೆಸಿರುವ ರೆನಾಲ್ಟ್, ಈ ಬಗ್ಗೆ ಮಾಹಿತಿ ಕೂಡಾ ಹಂಚಿಕೊಂಡಿದೆ. 'ನಾವು ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲು ಉತ್ಸಕರಾಗಿದ್ದು, ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದೇವೆ' ಎಂದು ರೆನಾಲ್ಟ್ ಇಂಡಿಯಾ ಮ್ಯಾನೇಜಿಂಗ್ ಡೈರಕ್ಟರ್ ಸುಮಿತ್ ಸಾಹ್ನ್ಯಾ ಹೇಳಿಕೊಂಡಿದ್ದಾರೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಇನ್ನು ಬಿಡುಗಡೆಯಾಗಿರುವ ಪೆಟ್ರೋಲ್ ಮಾದರಿಯೂ RxE ಮತ್ತು RxL ಆವೃತ್ತಿಗಳಲ್ಲಿ ಲಭ್ಯವಿದ್ದು, ವಿನೂತನ ಡಿಸೇಲ್ ಮಾದರಿಯೂ ಎಷ್ಟು ಆವೃತ್ತಿಗಳಲ್ಲಿ ಲಭ್ಯವಿದೆ ಎಂಬುವುದು ಇನ್ನೂ ಖಚಿತವಾಗಿಲ್ಲ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ವಿಭಿನ್ನ ವೈಶಿಷ್ಟ್ಯತೆಗಳನ್ನು ಹೊಂದಿರುವ ರೆನಾಸ್ಟ್ ಡಸ್ಟರ್ ಡಿಸೇಲ್ ಮಾದರಿಯೂ ಪ್ರಸ್ತುತ ಹುಂಡೈ ಕ್ರೇಟಾ ಮತ್ತು ಹೋಂಡಾ ಬಿಆರ್-ವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಬಿಡುಗಡೆಗೆ ಸಿದ್ಧವಾಯ್ತು ರೆನಾಲ್ಟ್ ಪೆಟ್ರೋಲ್ ಮಾದರಿಯ ವಿನೂತನ ಡಸ್ಟರ್ ಕಾರ್..!!

ಇದರ ಜೊತೆ ಮೈಲೇಜ್ ವಿಚಾರವಾಗಿ ಮಾತನಾಡುವುದಾದರೇ ಸಿವಿಟಿ ಪೆಟ್ರೋಲ್ ಮಾದರಿ ಪ್ರತಿ ಲೀಟರ್‌ಗೆ 14ಕಿ.ಮಿ ಮೈಲೇಜ್ ನೀಡುತ್ತೆ. ಇನ್ನು ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಮಾದರಿಯಲ್ಲಿ ಪ್ರತಿಲೀಟರ್‌ಗೆ 13.06ಕಿ.ಮಿ ಮೈಲೇಜ್ ನೀಡುವುದಾಗಿ ರೆನಾಲ್ಟ್ ಕಂಪನಿ ಹೇಳಿಕೊಂಡಿದೆ.

ಕಂಪ್ಯಾಟ್ ಎಸ್‌ಯುವಿ ಮಾದರಿಯ ಇನ್ನಷ್ಟು ಕಾರುಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಟಾಟಾ ನೆಕ್ಸಾನ್ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.

English summary
The petrol automatic Duster will be powered by the same 1.6-litre engine from the current model; to be paired to a CVT gearbox.
Story first published: Monday, March 13, 2017, 14:59 [IST]
Please Wait while comments are loading...

Latest Photos