ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

Written By:

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ಎಸ್‌ಯುವಿ ಆವೃತ್ತಿಯ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಕಾರು ಬಿಡುಗಡೆಯಾಗಿದ್ದು, ಆರಂಭಿಕ ಆವೃತ್ತಿಯ ಬೆಲೆಯು ರೂ.10.90ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯ ಬೆಲೆಯೂ ರೂ.11.70 ಲಕ್ಷಕ್ಕೆ ಲಭ್ಯವಿರಲಿವೆ.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಮಾದರಿಯೂ ಈ ಹಿಂದಿನ ಆವೃತ್ತಿಯ ಎಂಜಿನ್ ಹೊಲಿಕೆಯನ್ನೇ ಪಡೆದುಕೊಂಡಿದ್ದು, ಸುಧಾರಿತ ಮಾದರಿಯಲ್ಲಿ ಆಂತರಿಕ ಮತ್ತು ಬಾಹ್ಯ ವಿನ್ಯಾಸಗಳನ್ನು ನವೀಕರಿಸಲಾಗಿದೆ. ಜೊತೆಗೆ ಎರಡು ರೂಪಾಂತರಗಳಲ್ಲಿ ಲಭ್ಯವಿರುವ ಡಸ್ಟರ್ ಸ್ಯಾಂಡ್ ಸ್ಟಾರ್ಮ್, ಆರ್‌ಎಕ್ಸ್‌ಎಸ್ ಡೀಸೆಲ್ 85ಪಿಎಸ್ ಮತ್ತು ಆರ್‌ಎಕ್ಸ್‌ಎಸ್ ಡೀಸೆಲ್ 110ಪಿಎಸ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಡಸ್ಟರ್ ಬೆಲೆ ಮತ್ತು ಮಾದರಿಗಳು

ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಆರ್‌ಎಕ್ಸ್‌ಎಸ್ ಡೀಸೆಲ್ 85ಪಿಎಸ್- ರೂ 10.90 ಲಕ್ಷ

ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಆರ್‌ಎಕ್ಸ್‌ಎಸ್ ಡೀಸೆಲ್ 110ಪಿಎಸ್- ರೂ 11.70 ಲಕ್ಷ

Recommended Video
New Renault Duster 2016 AMT First Look: Interior, Specs, Features - DriveSpark
ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಆವೃತ್ತಿಗಳು 5-ಸ್ಪೀಡ್ ಮತ್ತು 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್‌ ಜೋಡಣೆ ಹೊಂದಿದ್ದು, ಕಾರಿನ ಒದಗಿಸಲಾಗಿರುವ ಹೊಸ ವಿನ್ಯಾಸಗಳು ಎಸ್‍‌ಯುವಿ ಪ್ರಿಯರನ್ನು ಸೆಳೆಯದೇ ಇರಲಾರವು.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಇನ್ನು ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಆವೃತ್ತಿಯ ಹೊರಭಾಗದಲ್ಲಿ ಡಸ್ಟರ್ ಬ್ರ್ಯಾಂಡಿಂಗ್ ಮತ್ತು ಲ್ಯಾಂಪ್ಸ್‌‍ನೊಂದಿಗೆ ಹೊಸ ಮ್ಯಾಟ್ ಬ್ಲ್ಯಾಕ್ ಫ್ರಂಟ್ ರಕ್ಷಾಕವಚವನ್ನು ಒದಗಿಸಲಾಗಿದ್ದು, ವಿಶೇಷ ಆವೃತ್ತಿ ಡಸ್ಟರ್ ಸಹ ಹುಡ್, ಬಾಗಿಲುಗಳು, ಹಿಂಭಾಗದ ಟೈಲ್ ಗೇಟ್, ಮತ್ತು ಒಆರ್‌ವಿಎಂಗಳ ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಹೆಚ್ಚುವರಿಯಾಗಿ, ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಎಲ್ಲಾ ಹೊಸ ಶೈಲಿಗಳಲ್ಲೂ ಜೊಡಿಯಾಕ್ 16 ಇಂಚಿನ ಅಲಾಯ್ ಚಕ್ರಗಳು ಮತ್ತು ಒಳಭಾಗದಲ್ಲಿ ಹೊದಿಕೆ ಹೊಂದಿದ ಸೀಟುಗಳು, ಫ್ಲೋರ್ ಮ್ಯಾಟ್ ಸೆಟ್ ಅನ್ನು ಅಳವಡಿಕೆ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಜೊತೆಗೆ ಕಪ್ಪು ಮತ್ತು ಬೂದು ಬಣ್ಣದಲ್ಲಿ ಒಳವಿನ್ಯಾಸವನ್ನು ಸಂಯೋಜನೆಗೊಳಿಸಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್ ಟಚ್ ಸ್ಕ್ರೀನ್, ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್ ಹಾಗೂ ಔಟ್ ಬ್ಯಾಕ್‌ಬ್ಯಾಗ್, ಮೂನೊ‌ಲೈಟ್ ಸಿಲ್ವರ್ ಮತ್ತು ಸ್ಲೇಟ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಎಂಜಿನ್

ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಆವೃತ್ತಿಗಳು ಕೆ9ಕೆ 1.5-ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಹೊಂದಿದ್ದು, ಉನ್ನತ ಆವೃತ್ತಿಯು 108.5-ಬಿಎಚ್‌ಪಿ ಉತ್ಪಾದಿಸಿದರೆ ಆರಂಭಿಕ ಆವೃತ್ತಿಯು 84-ಬಿಎಚ್‌ಪಿ ಉತ್ಪಾದಿಸುತ್ತದೆ. ಹೀಗಾಗಿ 108.5 ಬಿಎಚ್‌ಪಿ ಉತ್ಪಾದನಾ ಮಾದರಿಯು 245-ಎನ್ಎಂ ಟಾರ್ಕ್ ಅನ್ನು ಅಭಿವೃದ್ಧಿಸಿದರೆ 84 ಬಿಎಚ್‌ಪಿ ಉತ್ಪಾದನಾ ಆವೃತ್ತಿಯು 200-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಪಡೆದಿದೆ.

ಭಾರತದಲ್ಲಿ ಬಿಡುಗಡೆಗೊಂಡ ರೆನಾಲ್ಟ್ ಡಸ್ಟರ್ ಸ್ಯಾಂಡ್ ಸ್ಟಾರ್ಮ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಳೆಯ ಆವೃತ್ತಿಗಿಂತ ಹೊಸ ಆವೃತ್ತಿ ಹೆಚ್ಚು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದು, ಈ ಹಿನ್ನೆಲೆ ಹಳೆಯ ಮಾದರಿಗಿಂತ ಹೊಸ ಮಾದರಿಯ ಡಸ್ಟರ್ ಸ್ಯಾಂಡ್ ಸ್ಟಾರ್ಮ್ ಆವೃತ್ತಿಗಳ ಬೆಲೆಯು ರೂ.30 ಸಾವಿರ ಹೆಚ್ಚು ಮಾಡಲಾಗಿದ್ದು, ಎಸ್‌ಯುವಿ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Renault Duster Sandstorm Launched In India.
Story first published: Wednesday, September 20, 2017, 12:15 [IST]
Please Wait while comments are loading...

Latest Photos