ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ರೆನಾಲ್ಟ್

Written By:

ಗ್ರಾಹಕ ಸ್ನೇಹಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿರುವುದಾಗಿ ರೆನಾಲ್ಟ್ ಇಂಡಿಯಾ ಘೋಷಿಸಿದ್ದು, ಗ್ರಾಹಕರಿಗೆ 60ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಇದು ನೀಡುತ್ತದೆ.

ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ರೆನಾಲ್ಟ್

ರೆನಾಲ್ಟ್ ಸಂಸ್ಥೆಯ ಎಲ್ಲಾ ಕಾರುಗಳಿಗೂ ಸರಿ ಹೊಂದುವಂತಹ ಅಪ್ಲಿಕೇಶನ್ ಅಭಿವೃದ್ಧಿಯತ್ತ ಗಮನ ಹರಿಸಿರುವ ಸಂಸ್ಥೆಯು, ವಾಹನಗಳ ಸೇವಾ ಇತಿಹಾಸ, ವೈಯಕ್ತೀಕರಿಸಿದ ಜ್ಞಾಪನೆಗಳು, ಆನ್ಲೈನ್ ಸೇವೆಯ ನೇಮಕಾತಿಗಳು, ವಾಹನಗಳಿಗೆ ಸಂವಾದಾತ್ಮಕ ಬಳಕೆದಾರ ಕೈಪಿಡಿ ಹಾಗು ಮತ್ತಿತರ ಮಾಹಿತಿಯನ್ನು ಈ ಅಪ್ಲಿಕೇಶನ್ ಒದಗಿಸಲಿದೆ.

ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ರೆನಾಲ್ಟ್

ಈ ಸೌಲಭ್ಯದ ಜೊತೆಗೆ, ವಿತರಕರ ಮತ್ತು ಗ್ರಾಹಕರ ಸುಲಭ ತಲುಪುವಿಕೆಗೆ ಈ ಅಪ್ಲಿಕೇಶನ್ ಸಹಾಯ ಮಾಡಲಿದ್ದು, ದಾಖಲೆ ಸಂಗ್ರಹಣೆ ಮತ್ತು ಇ-ಪಾವತಿ ಸೌಲಭ್ಯಕ್ಕಾಗಿ ಡಿಜಿಟಲ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ರೆನಾಲ್ಟ್

ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರಂಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದ್ದು, ಹೆಚ್ಚು ಅರ್ಥಗರ್ಭಿತದ ವಿನ್ಯಾಸ ಪಡೆದುಕೊಂಡಿದೆ ಹಾಗು ಅತ್ಯಂತ ಬಳಕೆದಾರ ಸ್ನೇಹಿಯಾಗಿದೆ.

ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ರೆನಾಲ್ಟ್

ಭಾರತದಲ್ಲಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿರುವ ಈ ಅಪ್ಲಿಕೇಶನ್, ಭಾರತೀಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಹೆಚ್ಚು ಗಮನಹರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ರೆನಾಲ್ಟ್

ರೆನಾಲ್ಟ್ ಗ್ರಾಹಕರು ತಮ್ಮ ವಾಹನಗಳ ವೈಯಕ್ತೀಕರಣ ಆಯ್ಕೆಗಳನ್ನು ಅನ್ವೇಷಿಸಬಹುದಾಗಿದ್ದು, ತಮ್ಮ ಕಾರುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಕೊಡುಗೆಗಳನ್ನು ಪಡೆಯಬಹುದಾಗಿದೆ. ಈ ಅಪ್ಲಿಕೇಶನ್ ರೋಡ್ ಸೈಡ್ ಅಸಿಸ್ಟೆನ್ಸ್, ಕಸ್ಟಮರ್ ಕೇರ್, ಪೇಮೆಂಟ್ ಗೇಟ್‌ವೇ, ಎಸ್ಎಂಎಸ್ ಮತ್ತು ಇಮೇಲ್ ಎಂಜಿನ್ ಮಾಹಿತಿಯನ್ನು ಸಂಗ್ರಹಿಸುತ್ತದೆ.

English summary
Renault India has announced the launch of MY Renault App, a user-friendly smartphone application for customers.
Story first published: Friday, September 8, 2017, 13:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark