ರೆನಾಲ್ಟ್ ಕ್ವಿಡ್ ಎರಡನೇ ಆನಿವರ್ಸರಿ ಎಡಿಷನ್ ಭಾರತದಲ್ಲಿ ಬಿಡುಗಡೆ

Written By:

ರೆನಾಲ್ಟ್ ಸಂಸ್ಥೆಯ ಕ್ವಿಡ್ ಕಾರಿನ ಎರಡನೇ ವಾರ್ಷಿಕೋತ್ಸವದ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.ಕ್ವಿಡ್ ಎರಡನೇ ವರ್ಷದ ವಾರ್ಷಿಕೋತ್ಸವದ ಆವೃತ್ತಿಯು ರೂ. 3.43 ಲಕ್ಷ ಎಕ್ಸ್ ಶೋ ರೂಂ(ದೆಹಲಿ) ಆರಂಭಿಕ ದರ ಪಡೆದುಕೊಂಡಿದೆ.

ರೆನಾಲ್ಟ್ ಕ್ವಿಡ್ ಎರಡನೇ ವಾರ್ಷಿಕೋತ್ಸವದ ಆವೃತ್ತಿ ಭಾರತದಲ್ಲಿ ಬಿಡುಗಡೆ

ರೆನಾಲ್ಟ್ ಕ್ವಿಡ್ ಎರಡನೇ ವರ್ಷದ ವಾರ್ಷಿಕೋತ್ಸವದ ಆವೃತ್ತಿಯು 0.8 ಮತ್ತು 1.0 ಲೀಟರ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹ್ಯಾಚ್ ಬ್ಯಾಕ್ ಕಾರುಗಳು ಕ್ರಮವಾಗಿ 53 ಮತ್ತು 67 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ ಹಾಗು ಈ ಎರಡೂ ಕಾರುಗಳು 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ರೆನಾಲ್ಟ್ ಕ್ವಿಡ್ ಎರಡನೇ ವಾರ್ಷಿಕೋತ್ಸವದ ಆವೃತ್ತಿ ಭಾರತದಲ್ಲಿ ಬಿಡುಗಡೆ

ರೆನಾಲ್ಟ್ ಸಂಸ್ಥೆ ತಮ್ಮ ಯಶಸ್ವಿ ಕ್ವಿಡ್ ಕಾರು ಈಗಾಗಲೇ ಪ್ರತಿಯೊಬ್ಬರ ಮನಸ್ಸು ಗೆಲ್ಲುವಲ್ಲಿ ಸಫಲವಾಗಿದ್ದು, ಸಂಸ್ಥೆ ತನ್ನ ಈ ಯಶಸ್ಸನ್ನು ಕ್ವಿಡ್ ಕಾರಿನ ಹೊಸ ಆವೃತಿ ಬಿಡುಗಡೆ ಮಾಡುವ ಮೂಲಕ ಯಾಚನೆ ಮಾಡಿದೆ.

ರೆನಾಲ್ಟ್ ಕ್ವಿಡ್ ಎರಡನೇ ವಾರ್ಷಿಕೋತ್ಸವದ ಆವೃತ್ತಿ ಭಾರತದಲ್ಲಿ ಬಿಡುಗಡೆ

ಎರಡನೇ ವರ್ಷದ ವಾರ್ಷಿಕೋತ್ಸವದ ಕಾರು ಕ್ವಿಡ್ ಕಾರಿನ ಸಾಮಾನ್ಯ ಮಾದರಿಗಳಾದ RXL ಮತ್ತು RXT ರೂಪಾಂತರಗಳನ್ನು ಆಧರಿಸಿದೆ. ಆದರೆ ಈ ಕಾರಿನ ಹೊರಗೆ ಮತ್ತು ಒಳಗೆ ಎರಡೂ ಕಡೆ ಸೌಂದರ್ಯವರ್ಧಕ ಬದಲಾವಣೆಗಳನ್ನು ಪಡೆದುಕೊಂಡಿದೆ.

ರೆನಾಲ್ಟ್ ಕ್ವಿಡ್ ಎರಡನೇ ವಾರ್ಷಿಕೋತ್ಸವದ ಆವೃತ್ತಿ ಭಾರತದಲ್ಲಿ ಬಿಡುಗಡೆ

ಈ ಕಾರು ಗ್ರಾಫಿಕ್ಸ್ (ಬಿಳಿ ಮತ್ತು ಕೆಂಪು)ಮೇಲ್ಛಾವಣಿ ಮತ್ತು ಸಿ-ಪಿಲ್ಲರ್ ಬೋನೆಟ್ ಮತ್ತು ಕಾರಿನ ಬದಿಗಳಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಗ್ರಾಫಿಕ್ಸ್ ನೀವು ನೋಡಬಹುದಾಗಿದೆ.

ರೆನಾಲ್ಟ್ ಕ್ವಿಡ್ ಎರಡನೇ ವಾರ್ಷಿಕೋತ್ಸವದ ಆವೃತ್ತಿ ಭಾರತದಲ್ಲಿ ಬಿಡುಗಡೆ

ಒಳಭಾಗದಲ್ಲಿ, ಹೊಸ ರೆನಾಲ್ಟ್ ಕ್ವಿಡ್ ಕಾರು ಹೊಸ ಸ್ಟೀರಿಂಗ್ ಚಕ್ರ, ಎರಡು ಇಗ್ನಿಷನ್ ಬ್ಯಾಡ್ಜ್ ಒಳಗೊಂಡಿರಲಿದೆ. ಮುಂಭಾಗದ ಮತ್ತು ಹಿಂಭಾಗದ ಜಾರು ಫಲಕಗಳು, ಡುಯಲ್ ಟೋನ್ ಓಆರ್‌ವಿಎಂಗಳು, ರಿಯರ್ ಸ್ಕಿಡ್ ಪ್ಲೇಟ್ ಮತ್ತು ಕಾಂಟ್ರಸ್ಟಿಂಗ್ ಮುಂಭಾಗ ಒಳಗೊಂಡಿರಲಿದೆ.

ರೆನಾಲ್ಟ್ ಕ್ವಿಡ್ ಎರಡನೇ ವಾರ್ಷಿಕೋತ್ಸವದ ಆವೃತ್ತಿ ಭಾರತದಲ್ಲಿ ಬಿಡುಗಡೆ

ಕ್ವಿಡ್ ಕಾರಿನ ಈ ಸ್ಪೆಷಲ್ ಎಡಿಷನ್ ಕಾರು ಸಾಮಾನ್ಯ ಆವೃತಿಗಿಂದ ಹೆಚ್ಚು ವಿಶೇಷತೆ ಪಡೆದುಕೊಂಡಿದ್ದು, ಗ್ರಾಹಕರು ಸಾಮಾನ್ಯ ಮಾದರಿಗಿಂದ ರೂ.10000 ಹೆಚ್ಚಿನ ಬೆಲೆ ನೀಡುವ ಮೂಲಕ ಈ ಕಾರನ್ನು ಖರೀದಿಸಬಹುದಾಗಿದೆ.

English summary
Renault Kwid 02 Anniversary Edition launched in India. Prices for the Renault Kwid 02 Anniversary Edition start at Rs 3.43 lakh ex-showroom (Delhi).
Story first published: Saturday, August 26, 2017, 15:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark