ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ- ಹೊಸ ಭರವಸೆಯಲ್ಲಿ ಆಟೋ ಉತ್ಪಾದಕರು

2030ರ ವೇಳೆಗೆ ಶೇ.90ರಷ್ಟು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಹೊಸ ಹೊಸ ಯೋಜನೆಗಳು ಸಿದ್ಧಗೊಳ್ಳುತ್ತಿರುವುದು ಮಹತ್ವದ ಬದಲಾವಣೆಗೆ ಮುನ್ನುಡಿಯಾಗಿದೆ.

By Praveen

ಆಟೋ ಉದ್ಯಮದಲ್ಲಿ ಹೊಸ ಕ್ರಾಂತಿಯೊಂದು ಶುರುವಾಗಿದ್ದು, 2030ರ ವೇಳೆಗೆ ಶೇ.90ರಷ್ಟು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಹೊಸ ಹೊಸ ಯೋಜನೆಗಳು ಸಿದ್ಧಗೊಳ್ಳುತ್ತಿರುವುದು ಮಹತ್ವದ ಬದಲಾವಣೆಗೆ ಮುನ್ನುಡಿಯಾಗಿದೆ.

ಇದು ಬದಲಾವಣೆಯ ಪರ್ವ- ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಆಟೋ ಉತ್ಪಾದಕರು ಬೃಹತ್ ಬಂಡವಾಳದೊಂದಿಗೆ ಭವಿಷ್ಯದ ವಾಹನ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದಾರೆ.

ಇದು ಬದಲಾವಣೆಯ ಪರ್ವ- ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲೂ ಎಲೆಕ್ಟ್ರಿಕ್ ಕಾರುಗಳ ಅಭಿವದ್ಧಿ ಜೋರಾಗಿದ್ದು, ಮಹೀಂದ್ರಾ ನಂತರ ರೆನಾಲ್ಟ್, ನಿಸ್ಸಾನ್ ಮತ್ತು ಮಿಟ್ಸುಬಿಷಿ ಸಂಸ್ಥೆಗಳು ಕೂಡಾ ಒಗ್ಗಟ್ಟಾಗಿ ಸುಧಾರಿತ ಎಂಜಿನ್ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿವೆ.

Recommended Video

Maruti Post GST Prices In Kannada - DriveSpark ಕನ್ನಡ
ಇದು ಬದಲಾವಣೆಯ ಪರ್ವ- ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

2020ರ ವೇಳೆಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ರೆನಾಲ್ಟ್, ನಿಸ್ಸಾನ್ ಮತ್ತು ಮಿಟ್ಸುಬಿಷಿ ಸಂಸ್ಥೆಗಳು, ಭಾರತೀಯ ಮಾರುಕಟ್ಟೆಗಾಗಿ ಕಡಿಮೆ ಬೆಲೆಯ ಉತ್ತಮ ಕಾರ್ಯಕ್ಷಮತೆಯುಳ್ಳ ಕಾರುಗಳನ್ನು ಅಭಿವೃದ್ಧಿಗೊಳಿಸುವ ಸುಳಿವು ನೀಡಿವೆ.

ಇದು ಬದಲಾವಣೆಯ ಪರ್ವ- ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಇದಕ್ಕಾಗಿಯೇ ಯುಎಸ್‌ಡಿ 240 ಬಿಲಿಯನ್ ಹೂಡಿಕೆ ಮಾಡುತ್ತಿರುವ ರೆನಾಲ್ಟ್, ನಿಸ್ಸಾನ್ ಮತ್ತು ಮಿಟ್ಸುಬಿಷಿಯು 2022ರ ಹೊತ್ತಿಗೆ 2 ಮಿಲಿಯನ್ ಹೊಸ ಕಾರುಗಳ ಉತ್ಪಾದನಾ ಗುರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದಲ್ಲಿ 230 ಕಿಮಿ ಮೈಲೇಜ್ ಸಾಮರ್ಥ್ಯದ ಕಾರುಗಳನ್ನು ನಿರ್ಮಾಣ ಮಾಡಲಿದೆ.

ಇದು ಬದಲಾವಣೆಯ ಪರ್ವ- ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಈ ಕುರಿತಂತೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿರುವ ರೆನಾಲ್ಟ್, ನಿಸ್ಸಾನ್ ಮತ್ತು ಮಿಟ್ಸುಬಿಷಿ ಸಂಸ್ಥೆಗಳು, "ಭವಿಷ್ಯದ ವಾಹನಗಳ ಮೇಲೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು, ಎಲೆಕ್ಟ್ರಿಕ್ ಮಾದರಿಗಳ ಜೊತೆಗೆ ಚಾಲಕ ರಹಿತ ವಾಹನ ಉತ್ಪಾದನೆಗೂ ಗಮನಹರಿಸಲಿದ್ದೇವೆ" ಎಂದಿದ್ದಾರೆ.

ಇದು ಬದಲಾವಣೆಯ ಪರ್ವ- ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಕಾರುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಈ ನಿಟ್ಟಿನಲ್ಲಿ ಬೃಹತ್ ಯೋಜನೆ ಕೈಗೊಂಡಿರುವ ವಿಶ್ವದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ರೆನಾಲ್ಟ್, ನಿಸ್ಸಾನ್ ಮತ್ತು ಮಿಟ್ಸುಬಿಷಿ ಜೊತೆಗೂಡಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ಅಧ್ಯಾಯವನ್ನು ಶುರುಮಾಡಲಿವೆ.

More from DriveSpark

Article Published On: Saturday, September 16, 2017, 13:34 [IST]
English summary
Read in Kannada about Renault, Nissan and Mitsubishi Aim To Launch 12 Electric Vehicles By 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+