ಹೊಸ ಚಾರ್ಸಿ ಯೋಜನೆಯನ್ನು ಬಹಿರಂಗಪಡಿಸಿದ ರೆನಾಲ್ಟ್ ಮತ್ತು ನಿಸ್ಸಾನ್ ಒಕ್ಕೂಟ

Written By:

ರೆನಾಲ್ಟ್-ನಿಸ್ಸಾನ್ ಒಕ್ಕೂಟವು ಭಾರತದಲ್ಲಿ ಹೊಸ ಚಾರ್ಸಿ ನಿಯಮವನ್ನು ಹೊಂದಲು ಮುಂದಾಗಿದ್ದು, ಈ ಬಗ್ಗೆ ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದೆ.

ಸಹಭಾಗಿತ್ವ ಹೊಂದಿರುವ ದೈತ್ಯ ಕಾರು ತಯಾರಕ ರೆನಾಲ್ಟ್-ನಿಸ್ಸಾನ್ ಸಂಸ್ಥೆಗಳು ಕಾರಿನಲ್ಲಿರುವ ಅತಿ ಮುಖ್ಯ ಭಾಗವಾದ ಚಾರ್ಸಿ‌ಯನ್ನು ಅಂಚಿಕೊಳ್ಳಲು ನಿರ್ಧರಿಸಿದ್ದು, ಎರಡು ಕಡಿಮೆ ವೆಚ್ಚದ ಚಾರ್ಸಿ‌ಗಳನ್ನು ಬಳಸಲು ಮೈತ್ರಿ ನಿರ್ಧರಿಸಿದೆ ಎಂದು ಆಟೋಕಾರ್ ಭಾರತ ವರದಿ ಮಾಡಿದೆ.

ರೆನಾಲ್ಟ್-ನಿಸ್ಸಾನ್ ಕಾರು ತಾಯಾರಕ ಕಂಪನಿಗಳು CMF-A ಮತ್ತು CMF-A + ಎಂಬ ಎರಡು ರೀತಿಯ ಚಾರ್ಸಿಗಳನ್ನು ತಮ್ಮ ಎಲ್ಲಾ ಕಾರುಗಳಲ್ಲಿ ಬಳಸಲು ಮುಂದಾಗಿವೆ.

ಕ್ವಿಡ್ ಮತ್ತು ರೆಡಿ-ಗೋ CMF-A ಚಾರ್ಸಿಯನ್ನು ಪಡೆದುಕೊಳ್ಳಲಿದ್ದು, ಭವಿಷ್ಯದಲ್ಲಿ ಬಿಡುಗಡೆಗೊಳ್ಳುವ ಎರಡು ಕಂಪನಿಗಳ ಸಣ್ಣ ಮತ್ತು ಮಧ್ಯ ಗಾತ್ರದ ಕಾರುಗಳಲ್ಲಿ ಈ CMF-A + ಚಾರ್ಸಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ.

ರೆನಾಲ್ಟ್-ನಿಸ್ಸಾನ್ ಒಕ್ಕೂಟ M0 ಎಂಬ ಬಲಿಷ್ಠ ಚಾರ್ಸಿ ಸಹ ಹೊಂದಿದ್ದು, ಈ ಚಾರ್ಸಿಯನ್ನು ಡಸ್ಟರ್, ಟೆರಾನೋ ಮತ್ತು ಲಾಡ್ಜಿಗಳಂತಹ ದೊಡ್ಡ ವಾಹನಗಳಲ್ಲಿ ಉಪಯೋಗಿಸಲಿವೆ.

ನಿಸ್ಸಾನ್ ಮಾಲೀಕತ್ವದ ಡಟ್ಸುನ್ ಸಂಸ್ಥೆ ಸದ್ಯ ವಿ-ಮೈನಸ್ ಚಾರ್ಸಿಗಳನ್ನು ಬಳಸುವುದನ್ನು ಮುಂದುವರೆಸಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲು ಸಿದ್ದವಾಗಿರುವ ಗೋ ಕ್ರಾಸ್ ಕೂಡ ಈ ವಿ-ಮೈನಸ್ ಚಾರ್ಸಿ ಬಳಸಲು ನಿರ್ಧರಿಸಲಾಗಿದೆ.

ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಮುಂದುವರಿದ ತಂತ್ರಜ್ಞಾನವನ್ನು ಹೊಂದಿದ್ದು, ಹೊಸ ಉತ್ಪನ್ನಗಳೊಂದಿಗೆ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿವೆ.

ಭಾರತವು ಬೆಲೆ ಸೂಕ್ಷ್ಮತೆಯನ್ನು ಹೊಂದಿರುವ ಮಾರುಕಟ್ಟೆಯಾಗಿದ್ದು, ರೆನಾಲ್ಟ್ ನಿಸ್ಸಾನ್ ಒಕ್ಕೂಟದ ಈ ನಿರ್ಧಾರದಿಂದಾಗಿ ಕಡಿಮೆ ವೆಚ್ಚದ ಚಾರ್ಸಿ ನಿರ್ಮಾಣವಾಗಲಿದ್ದು, ಇದು ಕಾರಿನ ಮಾರಾಟಕ್ಕೆ ಅನುಕೂಲಾಗಲಿದೆ.

English summary
The Renault-Nissan Alliance has revealed its platform strategy for India. The alliance has decided to use two low-cost platforms in the country.
Story first published: Thursday, July 13, 2017, 18:21 [IST]
Please Wait while comments are loading...

Latest Photos