ಕರೋಕ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭಿಸಿದ ಸ್ಕೋಡಾ
ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ತನ್ನ ಬಹುನೀರಿಕ್ಷಿತ ಕರೋಕ್ ಉತ್ಪಾದನೆಯನ್ನು ಆರಂಭಿಸಿದೆ.
ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ತನ್ನ ಬಹುನೀರಿಕ್ಷಿತ ಕರೋಕ್ ಉತ್ಪಾದನೆಯನ್ನು ಆರಂಭಿಸಿರುವ ಸ್ಕೋಡಾ ಸಂಸ್ಥೆಯು 2018ಕ್ಕೆ ಹೊಸ ಕಾರಿನ ಬಿಡುಗಡೆ ಬಗ್ಗೆ ಸುಳಿವು ನೀಡಿದೆ.

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದನೆ ಸಂಸ್ಥೆಯಾಗಿರುವ ಸ್ಕೋಡಾ ಸಂಸ್ಥೆಯು ಈಗಾಗಲೇ ಹಲವು ಬಗೆಯ ಕಾರು ಮಾದರಿಗಳ ಉತ್ಪಾದನೆಯಲ್ಲಿ ಯಶಸ್ವಿ ಕಂಡಿದ್ದು, ಇದೀಗ ಕಂಪ್ಯಾಕ್ಟ್ ಎಸ್‌ಯುವಿ ಕರೋಕ್ ಉತ್ಪಾದನೆ ಕೈಗೊಂಡಿರುವುದು ಮತ್ತೊಂದು ವಿಶೇಷತೆ ಕಾರಣವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಯೆಟಿ ಕಾರನ್ನು ಕಾರಣಾಂತರಗಳಿಂದ ಉತ್ಪಾದನೆಯನ್ನು ಕೈಬಿಡುತ್ತಿರುವ ಸ್ಕೋಡಾ ಸಂಸ್ಥೆಯು ಸಂಪೂರ್ಣ ಹೊಸ ಶೈಲಿಯೊಂದಿಗೆ ಕರೋಕ್ ಕಂಪ್ಯಾಕ್ಟ್ ಕಾರನ್ನು ಸಿದ್ಧಗೊಳಿಸುತ್ತಿದೆ.

ಈ ಕುರಿತು ಅಧಿಕೃತ ಮಾಹಿತಿಯನ್ನು ಹೊರಹಾಕಿರುವ ಸ್ಕೋಡಾ ಸಂಸ್ಥೆಯು,"ಜೆಕ್ಗಣರಾಜ್ಯದಲ್ಲಿರುವ ಕ್ವಾಸ್ನಿ ಕಾರು ಉತ್ಪಾದನಾ ಘಟಕದಲ್ಲಿ ಕರೋಕ್ ಸಿದ್ಧಗೊಳ್ಳುತ್ತಿದ್ದು, ಸದ್ಯದಲ್ಲೇ ಗ್ರಾಹಕರ ಕೈ ಸೇರುವ ತವಕದಲ್ಲಿದೆ" ಎಂದಿದೆ.

ಫೈವ್ಎಂಜಿನ್ ಆಯ್ಕೆಯೊಂದಿಗೆ 113ಬಿಎಚ್‌ಪಿ ಮತ್ತು 187ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಲಿರುವ ಕರೋಕ್ ಕಂಪ್ಯಾಕ್ಟ್ ಎಸ್‌ಯುವಿ, 1,630-ಲೀಟರ್ ಬೂಟ್ ಸ್ಪೇಸ್ ಪಡೆಕೊಂಡಿರುವುದು ಮತ್ತೊಂದು ವಿಶೇಷತೆ ಎನ್ನಬಹುದು.
Recommended Video


ಇದಲ್ಲದೇ ಸಂಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಕೂಡಾ ಹೊಂದಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕಸ್ಟರ್, ಓರಿಯೋ ಫ್ಲೇಕ್ಸ್ ಸೀಟುಗಳು, ಹ್ಯಾಂಡ್ ಫ್ರೀ ಆಪರೇಟಿಂಗ್ ಟೈಲ್‌ಗೇಟ್ ಸೇರಿದಂತೆ ಹಲವು ಸೌಲಭ್ಯಗಳು ಕರೋಕ್ ಕಂಪ್ಯಾಕ್ಟ್ ಎಸ್‌ಯುವಿನಲ್ಲಿ ಲಭ್ಯವಿರಲಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಎಸ್‌ಯುವಿ ವಿಭಾಗದಲ್ಲಿನ ಕಾರು ಮಾರಾಟ ಹೆಚ್ಚಳ ಮೇಲೆ ವಿಶೇಷ ಗಮನಹರಿಸಿರುವ ಸ್ಕೋಡಾ ಸಂಸ್ಥೆಯು 5 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಕರೋಕ್ ಉತ್ಪಾದನೆಯನ್ನು ಆರಂಭ ಮಾಡಿದ್ದು, ಇದರ ಜೊತೆ ಸ್ಕೋಡಾ ಸೂಪರ್ಬ್, ಸೂಪರ್ಬ್ ಕೊಂಬಿ, ಕೊಡಿಯಾಕ್ ಎಸ್‌ಯುವಿ ಕೂಡಾ ಉತ್ಪಾದನಾ ಹಂತದಲ್ಲಿವೆ.


Click it and Unblock the Notifications