ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

Written By:

ಗೃಹಬಳಕೆಯ ವಾಹನ ತಯಾರಕ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ದೇಶದಲ್ಲಿ ತನ್ನ ಪ್ರಮುಖ ಎಸ್‌ಯುವಿಯಾದ ಎಕ್ಸ್‌ಯುವಿ 500 ಕಾರಿನ ನವೀಕೃತ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಸ್ಪೈ ಚಿತ್ರಗಳು : ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

ಭಾರತದಲ್ಲಿ ತನ್ನ ಹೊಸ ಎಕ್ಸ್‌ಯುವಿ 500 ಕಾರನ್ನು ಪರೀಕ್ಷೆಯನ್ನು ನೆಡೆಸುತ್ತಿದೆ. ಈ ರಿಫ್ರೆಶ್ ಆಗಿರುವಂತಹ ಎಸ್‌ಯುವಿ ಕಾರು ಕಾಸ್ಮೆಟಿಕ್ ನವೀಕರಣಗಳನ್ನು ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದರ ಪ್ರಮುಖ ಲಕ್ಷಣವೆಂದರೆ ಪರಿಷ್ಕರಿಸಿದ ಮುಂಭಾಗದ ತಂತುಕೋಶವಾಗಿದ್ದು, ಇದು ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಬಂಪರ್ ಹೊಂದಿದೆ.

ಸ್ಪೈ ಚಿತ್ರಗಳು : ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

ಎಸ್‌ಯುವಿ ಹಿಂಭಾಗದಲ್ಲಿ ಸ್ವಲ್ಪಮಟ್ಟಿನ ಟ್ವೀಕ್ ಪಡೆದ ಟೈಲ್ ಲ್ಯಾಂಪ್ ಕ್ಲಸ್ಟರ್ ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್ ಗೇಟ್‌ಗಳನ್ನು ಪಡೆದುಕೊಂಡಿದೆ. ಎಕ್ಸ್‌ಯುವಿ 500 ಒಳಭಾಗದಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯಲು ಸಾಧ್ಯತೆಯಿದೆ.

ಸ್ಪೈ ಚಿತ್ರಗಳು : ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

ಕಾರಿನ ಒಳಭಾಗವು ಈಗಾಗಲೇ ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಒಳಗೊಂಡಿದ್ದು, ಬಿಡುಗಡೆಯಾಗುವ ಆವೃತಿಯು ಆಪಲ್ ಕಾರ್‌ಪ್ಲೇ ಸೌಕರ್ಯ ಪಡೆದ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದುವುದನ್ನು ನಾವು ನಿರೀಕ್ಷಿಸುತ್ತೇವೆ.

ಸ್ಪೈ ಚಿತ್ರಗಳು : ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

ಎಕ್ಸ್‌ಯುವಿ 500 ಡೀಸೆಲ್ ಆವೃತ್ತಿಯು 2.2-ಲೀಟರ್ ಟರ್ಬೊಚಾರ್ಜ್ಡ್ mHawk ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಈ ಎಂಜಿನ್, 170 ಬಿಎಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು ಸ್ವಯಂಚಾಲಿತ ಗೇರ್‌ಬಾಕ್ಸ್ ಮತ್ತು ಆಲ್-ವೀಲ್ ಡ್ರೈವ್ ಸೌಲಭ್ಯವನ್ನು ಪಡೆಯುವ ಸಾಧ್ಯತೆ ಇದೆ.

ಸ್ಪೈ ಚಿತ್ರಗಳು : ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

ಡೀಸೆಲ್ ಎಂಜಿನ್ ಹೊರತುಪಡಿಸಿ, 2.2-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಸಹ ಪಡೆಯುವ ಸಾಧ್ಯತೆ ಇದೆ. ಇದು 140 ಬಿಎಚ್‌ಪಿ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ರೂಪಾಂತರವು ಟ್ರಿಮ್ ಹೆಸರಿನ ಮೇಲೆ ಜಿ ಕ್ರೋಡೀಕರಣವನ್ನು ಹೊಂದುತ್ತದೆ.

ಸ್ಪೈ ಚಿತ್ರಗಳು : ಪರೀಕ್ಷೆ ವೇಳೆ ಕಾಣಿಸಿಕೊಂಡ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

2011ರಿಂದಲೂ ಸಹ ಎಕ್ಸ್‌ಯುವಿ 500 ವಾಹನವು ಯಶಸ್ವಿ ಉತ್ಪನ್ನವಾಗಿದೆ. ಆಧುನಿಕ ಪ್ರತಿಸ್ಪರ್ಧಿಗಳನ್ನು ಎದುರಿಸುವ ಸಲುವಾಗಿ ರಿಫ್ರೆಶ್ ಡಿಸೈನ್ ಮತ್ತು ಹೆಚ್ಚು ಶಕ್ತಿಯುತ ಎಂಜಿನ್ ಆವೃತಿಯನ್ನು ಬಿಡುಗಡೆಗೊಳಿಸಲು ಕಂಪನಿ ಮುಂದಾಗಿದೆ. ಈ ಬಲಿಷ್ಠ ಕಾರು, ಫೇಸ್‌ಲಿಫ್ಟ್ ಹ್ಯುಂಡೈ ಕ್ರೆಟಾ, ಜೀಪ್ ಕಂಪಾಸ್ ಮತ್ತು ಟಾಟಾ ಹೆಕ್ಸಾ ವಿರುದ್ಧ ಸ್ಪರ್ಧಿಸುತ್ತದೆ.

English summary
The new XUV500 spotted testing in India. The refreshed SUV features cosmetic updates and a more powerful engine.
Story first published: Thursday, November 23, 2017, 16:16 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more