ಬಿಡುಗಡೆಯ ನಂತರ ದಾಖಲೆ ಕಂಡ ಟಾಟಾ ಎಸ್ ಮಾರಾಟ
ಟಾಟಾ ಮೋಟಾರ್ಸ್ ಸಂಸ್ಥೆಯು ವಾಣಿಜ್ಯ ವಾಹನಗಳ ಮಾರಾಟದಲ್ಲೂ ಪ್ರಾಬಲ್ಯ ಸಾಧಿಸುತ್ತಿದ್ದು, 12 ವರ್ಷಗಳ ಹಿಂದೆ ಮಾರುಕಟ್ಟೆಗೆ ಪರಿಚಯಿಸಲಾಗಿದ್ದ ಟಾಟಾ ಎಸ್ ಮಾರಾಟವು ದಾಖಲೆ ಕಂಡಿದೆ.
ಪ್ರಯಾಣಿಕ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ವಾಣಿಜ್ಯ ವಾಹನಗಳ ಮಾರಾಟದಲ್ಲೂ ಪ್ರಾಬಲ್ಯ ಸಾಧಿಸುತ್ತಿದ್ದು, 12 ವರ್ಷಗಳ ಹಿಂದೆ ಮಾರುಕಟ್ಟೆಗೆ ಪರಿಚಯಿಸಲಾಗಿದ್ದ ಟಾಟಾ ಎಸ್ ಮಾರಾಟವು ದಾಖಲೆ ಕಂಡಿದೆ.

ಕಳೆದ 12 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಟಾಟಾ ಎಸ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಇದುವರೆಗೆ 20 ಲಕ್ಷ ಮಾರಾಟಗೊಂಡಿದ್ದು, ಗ್ರಾಮೀಣ ಮತ್ತು ನಗರಪ್ರದೇಶಗಳ ಗ್ರಾಹಕರನ್ನು ಸೆಳೆಯುವ ಮೂಲಕ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿದೆ.

ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೇ ಗ್ರಾಮೀಣ ಭಾಗದಲ್ಲಿನ ಗ್ರಾಹಕರು ನೀರಿಕ್ಷಿಸುವಂತೆ ಅತಿಹೆಚ್ಚು ಲೋಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಟಾಟಾ ಎಸ್ ಮಾದರಿಗಳು ಮಿನಿ ಟ್ರಕ್ ಎಂದೇ ಜನಪ್ರಿಯತೆ ಗಳಿಸಿವೆ.
Recommended Video


ಹೀಗಾಗಿಯೇ 2005ರಿಂದಲೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ತನ್ನದೇ ಆದ ಬೇಡಿಕೆಯನ್ನು ಕಾಯ್ದುಕೊಂಡು ಬಂದಿರುವ ಟಾಟಾ ಎಸ್ ಆವೃತ್ತಿಗಳು ಇದುವರೆಗೆ ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇ.65ರಷ್ಟು ಪಾಲು ಹೊಂದಿದೆ.

ಇನ್ನು ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಟಾಟಾ ಎಸ್ ಆವೃತ್ತಿಗಳಲ್ಲಿ Ace, Zip ಮತ್ತು Mint ಎನ್ನುವ ಮಾದರಿಗಳಿದ್ದು, ಇವುಗಳಲ್ಲಿ Ace ಮಾದರಿಯು ಅತಿಹೆಚ್ಚು ಜನಪ್ರಿಯಗೊಂಡಿರುವುದು ಬಹುತೇಕರಿಗೆ ತಿಳಿದಿರುವ ವಿಚಾರ.

ಜೊತೆಗೆ ಇತರೆ ಮಿನಿ ಟ್ರಕ್‌ಗಳಿಂತ ಉತ್ತಮ ಇಂಧನ ಕಾರ್ಯಕ್ಷಮತೆಯನ್ನು ಹೊಂದಿರುವ ಟಾಟಾ ಎಸ್ ಆವೃತ್ತಿಗಳು ಮಹೀಂದ್ರಾ ನಿರ್ಮಾಣದ ಜಿಡೋ, ಅಶೋಕ್ ಲೈಲ್ಯಾಂಡ್ ನಿರ್ಮಾಣದ ದೊಸ್ತ್ ಪ್ಲಸ್ ಮಾದರಿಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕಳೆದ 12 ವರ್ಷಗಳಿಂದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿಕೊಂಡು ಬಂದಿರುವ ಟಾಟಾ ಎಸ್ ಮಾದರಿಗಳು ಇಂದಿಗೂ ಅದೇ ಪ್ರಮಾಣದ ಬೇಡಿಕೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ 20 ಲಕ್ಷ ವಾಹನಗಳ ಮಾರಾಟವನ್ನು ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿವೆ.


Click it and Unblock the Notifications








