ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

Written By:

ಈ ಹಿಂದೆ ಅಗ್ಗದ ದರದಲ್ಲಿ ಬಿಡುಗಡೆಯಾಗುವ ಮೂಲಕ ದೇಶದೆಲ್ಲೆಡೆ ಸಂಚಲನ ಮೂಡಿಸಿ ಕೆಳ ಮಧ್ಯಮ ವರ್ಗದ ಜನರು ಕಾರು ಹೊಂದುವ ಕನಸನ್ನು ನನಸು ಮಾಡಿದ್ದ ಟಾಟಾ ಸಂಸ್ಥೆಯ 'ನ್ಯಾನೊ' ಕಾರು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದೆ.

ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

ನ್ಯಾನೋ ಕಾರಿನ ಮಾರಾಟದಲ್ಲಿ ಸತತ ಕುಸಿತ ಹಾಗೂ ಗ್ರಾಹಕರಿಂದ ಬೇಡಿಕೆ ಕೊರತೆ ಹಿನ್ನೆಲೆ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ ಗುಡ್ ಬೈ ಹೇಳಲು ಸಜ್ಜಾಗಿದ್ದು, ಸದ್ಯದಲ್ಲೇ ನ್ಯಾನೊ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.

ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

ವರದಿಗಳ ಪ್ರಕಾರ ತಿಂಗಳೊಂದರಲ್ಲಿ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿದೆ.

Recommended Video - Watch Now!
[Kannada] Tata Tiago XTA AMT Launched In India - DriveSpark
ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

ಇದಲ್ಲದೇ ಟಾಟಾ ಮೋಟಾರ್ಸ್ ಅಧಿಕೃತ ಮಾರಾಟ ಮಳಗೆಗಳಲ್ಲೂ ಕೂಡ ನ್ಯಾನೊ ಪ್ರದರ್ಶನವನ್ನು ನಿಲ್ಲಿಸುತ್ತಿರುವ ಡೀಲರ್ಸ್‌ಗಳು ಇತರ ಕಾರು ಮಾದರಿಗಳಾದ ಟಿಯಾಗೊ, ಎಸ್ ಕ್ರಾಸ್, ನೆಕ್ಸನ್ ಮತ್ತಿತರ ಕಾರುಗಳನ್ನಷ್ಟೆ ಪ್ರದರ್ಶನ ಮಾಡುತ್ತಿದ್ದಾರೆ.

ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

ಇನ್ನು ನ್ಯಾನೊ ಮಾರಾಟದಲ್ಲಿ ತೀವ್ರ ಕುಸಿತ ಕಂಡು ಬಂದಿದ್ದು, ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಕೇವಲ 180 ಕಾರುಗಳಷ್ಟೆ ಮಾರಾಟಕ್ಕಾಗಿ ಪೂರೈಸಲಾಗಿತ್ತು.

ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 124 ಕಡೆಗಳಲ್ಲಿ ನ್ಯಾನೊ ಕಾರಿನ ಬೆಲೆ ಇಳಿಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಕೇವಲ 58 ಕಾರುಗಳನ್ನಷ್ಟೆ ಸಂಸ್ಥೆಯು ಉತ್ಪಾದನೆ ಮಾಡಿದೆ. ಈ ಮಧ್ಯೆ, ಟಾಟಾ ಮೋಟರ್ಸ್ ಕಂಪೆನಿ ಕೊಯಮತ್ತೂರು ಮೂಲದ ಜಯೇಮ್ ಅಟೊಮೋಟಿವ್ಸ್ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಕಾರಿನ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ.

ದೇಶದ ಅಗ್ಗದ ಕಾರು 'ನ್ಯಾನೋ'ಗೆ ಗುಡ್ ಬೈ ಹೇಳಲಿದೆ ಟಾಟಾ..!?

ಹೀಗಾಗಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಇದು ನ್ಯಾನೊ ಉತ್ಪಾದನೆಗೆ ಇನ್ನಷ್ಟು ಹೊಡೆತ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Read in Kannada about Tata Dealers Stop Placing Orders For The Nano — Here's Why

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark