ಇದು ಟಾಟಾ ಕಾರುಗಳ ಗಮ್ಮತ್ತು- ಪ್ರವಾಹದಲ್ಲೂ ಆಪ್ ರೋಡ್ ಕಸರತ್ತು ಪ್ರದರ್ಶನ ಮಾಡಿದ ಹೆಕ್ಸಾ

ಉತ್ತಮ ಕಾರ್ಯಕ್ಷಮತೆ ಜೊತೆಗೆ ಗುಣಮಟ್ಟದ ಬಿಡಿಭಾಗಗಳನ್ನು ಒದಗಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಬೇಡಿಕೆಯನ್ನು ಹೊಂದಿದ್ದು, ಹೆಕ್ಸಾ ಪ್ರದರ್ಶನ ಮಾಡಿರುವ ಆಪ್ ರೋಡ್ ಕಸರತ್ತುಗಳು ಮತ್ತೊಂದು ಉದಾಹರಣೆ ಎನ್ನಬಹುದು.

By Praveen

ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳು ಅಂದ್ರೆನೆ ಹಾಗೆ. ಉತ್ತಮ ಕಾರ್ಯಕ್ಷಮತೆ ಜೊತೆಗೆ ಗುಣಮಟ್ಟದ ಬಿಡಿಭಾಗಗಳನ್ನು ಒದಗಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಬೇಡಿಕೆಯನ್ನು ಹೊಂದಿದ್ದು, ಹೆಕ್ಸಾ ಪ್ರದರ್ಶನ ಮಾಡಿರುವ ಆಪ್ ರೋಡ್ ಕಸರತ್ತುಗಳು ಮತ್ತೊಂದು ಉದಾಹರಣೆ ಎನ್ನಬಹುದು.

ಪ್ರವಾಹದಲ್ಲೂ ಆಪ್ ರೋಡ್ ಕರಸತ್ತು ಪ್ರದರ್ಶನ ಮಾಡಿದ ಟಾಟಾ ಹೆಕ್ಸಾ

ಇತ್ತೀಚೆಗೆ ಎಸ್‌ಯುವಿ ಪ್ರಿಯರು ಎಕ್ಸ್‌ಟ್ರಿಮ್ ಆಪ್ ರೋಡ್ ಕಸರತ್ತು ಪ್ರದರ್ಶನ ಮಾಡಬಲ್ಲ ಕಾರುಗಳ ಖರೀದಿಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಪ್ರಯತ್ನ ಕೈಗೊಂಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಹೆಕ್ಸಾ ವೈಶಿಷ್ಟ್ಯತೆಗಳಲ್ಲಿ ಗುರುತರ ಬದಲಾವಣೆ ತಂದಿದೆ.

ಪ್ರವಾಹದಲ್ಲೂ ಆಪ್ ರೋಡ್ ಕರಸತ್ತು ಪ್ರದರ್ಶನ ಮಾಡಿದ ಟಾಟಾ ಹೆಕ್ಸಾ

ಈ ಮೂಲಕ ಆಪ್ ರೋಡ್ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲಾಗಿದ್ದು, ಬಲಿಷ್ಠ ಮಾದರಿಯ 2.2-ಲೀಟರ್ ವೆರಿಕೊರ್ ಡೀಸೆಲ್ ಎಂಜಿನ್ ಹೊಂದಿರುವುದು 148-ಬಿಎಚ್‌ಪಿ ಜೊತೆಗೆ 320-ಎನ್ಎಂ ಟಾರ್ಕ್ ಉತ್ಪಾದನಾ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ.

ಪ್ರವಾಹದಲ್ಲೂ ಆಪ್ ರೋಡ್ ಕರಸತ್ತು ಪ್ರದರ್ಶನ ಮಾಡಿದ ಟಾಟಾ ಹೆಕ್ಸಾ

ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಹೆಕ್ಸಾ ಎಸ್‌ಯುವಿ ಮಾದರಿಗಳು 4x2 ಮತ್ತು 4x4 ಡ್ರೈವ್ ಟ್ರೈನ್ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿದ್ದು, ಆಪ್ ರೋಡ್ ಪ್ರದರ್ಶನಕ್ಕೆ ಹೇಳಿಮಾಡಿದಂತಿವೆ.

ಪ್ರವಾಹದಲ್ಲೂ ಆಪ್ ರೋಡ್ ಕರಸತ್ತು ಪ್ರದರ್ಶನ ಮಾಡಿದ ಟಾಟಾ ಹೆಕ್ಸಾ

ಸದ್ಯ ಟಾಟಾ ಹೆಕ್ಸಾ ಆಪ್ ರೋಡ್ ಪ್ರದರ್ಶನ ಕುರಿತು ಹೆಕ್ಸಾ ಮಾಲೀಕರೊಬ್ಬರು ಆಪ್ ರೋಡ್ ಕೌಶಲ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಠಿಣ ಪರಿಸ್ಥಿತಿಯಲ್ಲೂ ಹೆಕ್ಸಾ ಮುನ್ನುಗ್ಗುವ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಮೊದಲ ವಿಡಿಯೋದಲ್ಲಿ ಹೆಕ್ಸಾ ಕಾರು ನದಿಯೊಂದರಲ್ಲಿ ಯಾವುದೇ ಅಡೆತಡೆಯಿಲ್ಲದೇ ಮುನ್ನುಗ್ಗಿ ಬರುತ್ತಿದ್ದು, ಪ್ರವಾಹ ಪರಿಸ್ಥಿತಿಯಲ್ಲೂ ರಕ್ಷಣೆ ಮಾಡಿಕೊಳ್ಳಬಹುದಾದ ಗುಣಲಕ್ಷಣ ಹೊಂದಿರುವ ತಿಳಿದುಬರುತ್ತದೆ.

ಮತ್ತೊಂದು ವಿಡಿಯೋದಲ್ಲಿ ಅತಿರಭಸವಾಗಿ ಹರಿಯುತ್ತಿರುವ ಹಳ್ಳವೊಂದರಲ್ಲಿ ಮುನ್ನುಗ್ಗುವ ಹೆಕ್ಸಾ ಯಾವುದೇ ಅಡೆ ತಡೆಯಿಲ್ಲದೇ ಸಾಗುತ್ತದೆ. ಈ ಮೂಲಕ ಆಪ್ ರೋಡ್ ಪ್ರದರ್ಶನದಲ್ಲಿ ತಾನೇ ನಿಜವಾದ ಸ್ಪರ್ಧಿ ಎಂಬುವುದನ್ನು ಖಾತ್ರಿಪಡಿಸುತ್ತದೆ.

ಇನ್ನು ಮೂರನೇ ವಿಡಿಯೋದಲ್ಲೂ ಕೂಡಾ ಹಳ್ಳವೊಂದರಲ್ಲಿ ಸಾಗಿ ಬರುವ ಹೆಕ್ಸಾ ಕಾರು ಆಪ್ ರೋಡ್ ಸ್ಪೆಷಲಿಸ್ಟ್ ಎಂಬುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ.

ಪ್ರವಾಹದಲ್ಲೂ ಆಪ್ ರೋಡ್ ಕರಸತ್ತು ಪ್ರದರ್ಶನ ಮಾಡಿದ ಟಾಟಾ ಹೆಕ್ಸಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಸಂಸ್ಥೆಯು ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಎಸ್‌ಯುವಿ ವಿಭಾಗದಲ್ಲಿನ ಹೆಕ್ಸಾ ಕಾರುಗಳು ಆಪ್ ರೋಡ್ ಪ್ರದರ್ಶನದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿರುವುದು ಮತ್ತೊಂದು ವಿಶೇಷತೆ ಎನ್ನಬಹುದು.

More from DriveSpark

Article Published On: Wednesday, October 25, 2017, 13:41 [IST]
English summary
Read in Kannada about Tata Hexa Demonstrates Extreme Off Roading Capabilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+